ಮಂಗಳೂರು(ಮಾ.18): ಮಲೇಷ್ಯಾದಲ್ಲಿ ಇಂಟರ್ನ್‌ಶಿಪ್‌ಗೆ ತೆರಳಿದ ಮಂಗಳೂರಿನ ಇಬ್ಬರು ಸೇರಿದಂತೆ ಭಾರತದ 180 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಮಲೇಷ್ಯಾದಲ್ಲಿ ಬಾಕಿಯಾದ ಘಟನೆ ಸಂಭವಿಸಿದೆ.

ಮಂಗಳೂರಿನ ಖಾಸಗಿ ಮೆಡಿಕಲ್‌ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಕೆಲವು ದಿನಗಳ ಹಿಂದೆ ಇಂಟರ್ನ್‌ಶಿಪ್‌ಗೆ ಮಲೇಷ್ಯಾಗೆ ತೆರಳಿದ್ದರು. ಅಲ್ಲಿ ಇಂಟರ್ನ್‌ಶಿಪ್‌ ಮುಗಿಸಿ ಎರಡು ದಿನಗಳ ಹಿಂದೆ ಭಾರತಕ್ಕೆ ವಾಪಸ್‌ ಆಗುವವರಿದ್ದರು.

ಹೆಲ್ಮೆಟ್ ನಿಂದಲೂ ಸೋಂಕಿನಿಂದ ರಕ್ಷಿಸಿಕೊಳ್ಳಬಹುದು

ಅಷ್ಟರಲ್ಲಿ ಭಾರತದಲ್ಲೂ ಕೊರೋನಾ ವೈರಸ್‌ ಕಾಣಿಸಿದ ಹಿನ್ನೆಲೆಯಲ್ಲಿ ಮಲೇಷ್ಯಾದಿಂದ ಭಾರತಕ್ಕೆ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಮಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಕೂಡ ಭಾರತದ ಇತರೆ ವಿದ್ಯಾರ್ಥಿಗಳ ಜೊತೆ ಮಲೇಷ್ಯಾದಲ್ಲಿ ಬಾಕಿಯುಳಿಯುವಂತಾಗಿದೆ. ಭಾರತಕ್ಕೆ ಬರಲು ಈ ವಿದ್ಯಾರ್ಥಿಗಳು ಮಲೇಷ್ಯಾದಲ್ಲಿ ವಿಮಾನ ನಿಲ್ದಾಣದಲ್ಲಿ ಪರದಾಟ ನಡೆಸುವಂತಾಗಿದೆ ಎಂದು ಮೂಲಗಳು ತಿಳಿಸಿವೆ.