ರಾಯಚೂರು: ಮಸ್ಕಿ ಬೈಪಾಸ್‌ಗೆ 180 ಕೋಟಿ ಬಿಡುಗಡೆ
ಮಸ್ಕಿ ತಾಲೂಕು ಕೇಂದ್ರವಾದ ಬಳಿಕ ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ವಾಹನಗಳ ಸಂಚಾರ ದಟ್ಟಣೆಯೂ ಹೆಚ್ಚಾಗುತ್ತಿದ್ದು, ಟ್ರಾಫಿಕ್ ಪ್ರಮಾಣ ಹೇರಳವಾಗುತ್ತಿದೆ. ಹೀಗಾಗಿ ಮಸ್ಕಿ-ಸಿಂಧನೂರು, ಮಸ್ಕಿ-ಲಿಂಗಸಗೂರು ಮತ್ತು ಮಸ್ಕಿ-ಮುದಗಲ್ ಮಾರ್ಗವಾಗಿ ಹಾದು ಹೋಗುವ ವಾಹನಗಳು ನಗರ ಪ್ರವೇಶವಿಲ್ಲದೇ ನೇರವಾಗಿ ಆಯಾ ಮಾರ್ಗ ತಲುಪಲು ಬೈಪಾಸ್ ರಸ್ತೆಯ ಅವಶ್ಯಕತೆ ಇತ್ತು. ಇದಕ್ಕಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು.
ಮಸ್ಕಿ(ಜೂ.21): ಹಲವು ದಿನಗಳಿಂದ ಕನಸಾಗಿಯೇ ಉಳಿದಿದ್ದ ಮಸ್ಕಿ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಕೊನೆಗೂ ಮಹೂರ್ತ ಕೂಡಿ ಬಂದಿದೆ. ಆರ್ಥಿಕ, ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಟೆಂಡರ್ ಪ್ರಕ್ರಿಯೆಗೆ ಬಂದು ತಲುಪಿದೆ. ಮಸ್ಕಿ ತಾಲೂಕು ಕೇಂದ್ರವಾದ ಬಳಿಕ ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ವಾಹನಗಳ ಸಂಚಾರ ದಟ್ಟಣೆಯೂ ಹೆಚ್ಚಾಗುತ್ತಿದ್ದು, ಟ್ರಾಫಿಕ್ ಪ್ರಮಾಣ ಹೇರಳವಾಗುತ್ತಿದೆ. ಹೀಗಾಗಿ ಮಸ್ಕಿ-ಸಿಂಧನೂರು, ಮಸ್ಕಿ-ಲಿಂಗಸಗೂರು ಮತ್ತು ಮಸ್ಕಿ-ಮುದಗಲ್ ಮಾರ್ಗವಾಗಿ ಹಾದು ಹೋಗುವ ವಾಹನಗಳು ನಗರ ಪ್ರವೇಶವಿಲ್ಲದೇ ನೇರವಾಗಿ ಆಯಾ ಮಾರ್ಗ ತಲುಪಲು ಬೈಪಾಸ್ ರಸ್ತೆಯ ಅವಶ್ಯಕತೆ ಇತ್ತು. ಇದಕ್ಕಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು.
180 ಕೋಟಿ ಬಿಡುಗಡೆ:
ಸಿಂಧನೂರು-ಲಿಂಗಸುಗೂರು ಹೆದ್ದಾರಿ 150 (ಎ)ರಲ್ಲಿ ಬರುವ ಪಟ್ಟಣದ ಲಿಂಗುಸುಗೂರು ರಸ್ತೆಯ ಸ್ವಾಗತ ಕಮಾನ್ ಹತ್ತಿರದಿಂದ ಇತಿಹಾಸ ಪ್ರಸಿದ್ಧ ಅಶೋಕ ಶಿಲಾಶಾಸನ, ಮಲ್ಲಿಕಾರ್ಜುನ ಬೆಟ್ಟದ ಹಿಂಭಾಗದಿಂದ ಸಿಂಧನೂರು ರಸ್ತೆಯ ಗುಡದೂರು ಬಳಿ ಇರುವ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಬೈಪಾಸ್ ರಸ್ತೆ ಕೂಡುವಂತೆ ಸರ್ವೆ ಮಾಡಿ ಮ್ಯಾಪ್ ತಯಾರಿಸಲಾಗಿದೆ. ಒಟ್ಟು 8.5 ಕಿಮೀ ಉದ್ದದ ದ್ವಿಪಥದ ಬೈಪಾಸ್ ರಸ್ತೆ ಇದಾಗಿದ್ದು, ಯೋಜನೆಯ ಅಂದಾಜು ವೆಚ್ಚ 180 ಕೋಟಿ ರು. ಆಗಲಿದೆ ಎಂದು ಹೆದ್ದಾರಿ ಪ್ರಾಧಿಕಾರವೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ. 50ರಷ್ಟು ಹಂಚಿಕೆ ಮಾಡಿ ಒಟ್ಟು 180 ಕೋಟಿ ಅನುದಾನ ಬಿಡುಗಡೆಗೊಳಿಸಿದೆ.
RAICHUR: ಸ್ಮಶಾನ ಜಾಗಕ್ಕಾಗಿ ಚರಂಡಿ ನೀರು ಮೈಮೇಲೆ ಸುರಿದುಕೊಂಡ ಮಹಿಳೆ
ಟೆಂಡರ್ ಪ್ರಕ್ರಿಯೆ:
ಸರ್ವೆ ಕಾರ್ಯ, ಕಾಮಗಾರಿಗಾಗಿ ಸ್ವಾಧೀನಗೊಳ್ಳಬಹುದಾದ ಜಮೀನು, ಪರಿಹಾರ ಮೊತ್ತ ಸೇರಿ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಯೋಜನೆ ರೂಪಿಸಲಾಗಿದೆ. ಬೈಪಾಸ್ ರಸ್ತೆ ನಿರ್ಮಾಣಕ್ಕೆ ಒಟ್ಟು 3,94,112 ಚದರ್ ಮೀಟರ್ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಾಗಿದ್ದು, ಈಗಾಗಲೇ ಭೂಮಿಯನ್ನು ಗುರುತಿಸಲಾಗಿದೆ. ಈ ಕಾಮಗಾರಿಯಲ್ಲಿಯೇ ಹಿರೇ ಹಳ್ಳಕ್ಕೆ ಬೃಹತ್ ಸೇತುವೆ, ಮುದಗಲ್ ಪಟ್ಟಣಕ್ಕೆ ತೆರಳುವ ರಾಜ್ಯ ಹೆದ್ದಾರಿಯ ಕ್ರಾಸಿಂಗ್ ಸೇರಿದಂತೆ ಆರು ಸೇತುವೆಗಳ ನಿರ್ಮಾಣಗೊಳ್ಳಲಿವೆ.
ಮಸ್ಕಿ ಹಾಗೂ ಸಿಂಧನೂರು ಬೈಪಾಸ್ ರಸ್ತೆ ನಿರ್ಮಾಣಕ್ಕೆ ಆಡಳಿತಾತ್ಮಕ, ಆರ್ಥಿಕ ಅನುಮೋದನೆ ದೊರೆತಿದ್ದು, ಮುಂದಿನ ಹತ್ತು ದಿನಗಳಲ್ಲಿ ಟೆಂಡರ್ ಕರೆಯಲಾಗುವುದು ಅಂತ ವಿಜಯಪುರ ಹೆದ್ದಾರಿ ಪ್ರಾಧಿಕಾರ ಇಇ ವಿಜಯಕುಮಾರ ಹೇಳಿದ್ದಾರೆ.
ಮಸ್ಕಿ ಹಾಗೂ ಸಿಂಧನೂರು ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 406 ಕೋಟಿ ಅನುದಾನ ನೀಡಿದೆ. ಈಗಾಗಲೇ ಆರ್ಥಿಕ ಅನುಮೋದನೆ ಸಿಕ್ಕಿದೆ. ಟೆಂಡರ್ ಪ್ರಕ್ರಿಯೆ ನಡೆದಿದೆ. ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಅಂತ ಕೊಪ್ಪಳ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.