ಬೆಂಗಳೂರು, [ಮೇ.11]: ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡ 92 ರಷ್ಟು ಅಂಕ ಪಡೆದಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದಾನೆ.

ವೀಣಾ ಮತ್ತು ರವೀದ್ರನಾಥ್ ದಂಪತಿ ಪುತ್ರ ಕ್ಷೀತೀಶ್ ಭಾರದ್ವಾಜ್  (18) ನಾಪತ್ತೆಯಾದ ವಿದ್ಯಾರ್ಥಿ. ಮೇ1ರಂದು  ಟ್ಯೂಟೋರಿಯಲ್ಸ್ ಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ ಕ್ಷೀತೀಶ್ ಮರಳಿ ಮನೆಗೆ ವಾಪಸ್ ಆಗಿಲ್ಲ.

ಬೆಂಗಳೂರಿನ ಹನುಮಂತನಗರದಿಂದ ನಾಪತ್ತೆಯಾಗಿರುವ ಕ್ಷೀತೀಶ್,  ಹತ್ತುದಿನಗಳು ಕಳೆದರೂ ಸಣ್ಣ ಸುಳಿವು ಪತ್ತೆಯಾಗಿಲ್ಲ. ಇದ್ರಿಂದ ಆತಂಕದಲ್ಲಿರುವ ಪೋಷಕರು  ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ನಾಪತ್ತೆಯಾದ ದಿನ [ಮೇ.01] ಬೆಳಗ್ಗೆ ಮೆಜೆಸ್ಟಿಕ್ ಮೇಟ್ರೋ ನಿಲ್ದಾಣದಲ್ಲಿ ತೆರಳಿ ಬಳಿಕ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ತೆರಳಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದ್ರೆ ರೈಲ್ವೆ ನಿಲ್ದಾಣದಿಂದ ಎಲ್ಲಿಗೆ ತೆರಳಿದ್ದಾನೆಂಬುವುದು ಮಾತ್ರ ಪತ್ತೆಯಾಗ್ತಿಲ್ಲ.