Asianet Suvarna News Asianet Suvarna News

PUC ಪರೀಕ್ಷೆ: ಒಬ್ಬ ವಿದ್ಯಾರ್ಥಿನಿಗಾಗಿ 18 ಸಿಬ್ಬಂದಿ ಕರ್ತವ್ಯ ನಿರ್ವಹಣೆ!

ದ್ವಿತೀಯ ಪಿಯುಸಿ ಪರೀಕ್ಷೆ| ಒಬ್ಬ ವಿದ್ಯಾರ್ಥಿನಿಗೆ ಒಟ್ಟು 18 ಜನ ಸಿಬ್ಬಂದಿ ಕರ್ತವ್ಯ ನಿರ್ವಹಣೆ| ಬೆಳಗಾವಿ ಜಿಲ್ಲೆಯ ಮೂಡಲಗಿ ಶೈಕ್ಷಣಿಕ ವಲಯದ ಕಲ್ಲೋಳಿಯ ಎನ್‌.ಆರ್‌.ಪಾಟೀಲ ಪಿ.ಯು ಕಾಲೇಜಿನಲ್ಲಿ ನಡೆದ ಘಟನೆ|  ಉರ್ದು ಭಾಷಾ ಪರೀಕ್ಷೆಗೆ ಹಾಜರಾದ ಏಕೈಕ ವಿದ್ಯಾರ್ಥಿನಿ ಮುಸ್ಕಾನ ಪಠಾಣ| 

18 Staff work for For a student in PUC Exam in Gokak in Belagavi District
Author
Bengaluru, First Published Mar 11, 2020, 7:51 AM IST

ಗೋಕಾಕ(ಮಾ.11): ಒಬ್ಬ ವಿದ್ಯಾರ್ಥಿನಿಗಾಗಿ 18 ಸಿಬ್ಬಂದಿ ಪರೀಕ್ಷಾ ಕರ್ತವ್ಯ ನಿರ್ವಹಿಸಿರುವ ಅಪರೂಪದ ಪ್ರಸಂಗಕ್ಕೆ ಬೆಳಗಾವಿ ಜಿಲ್ಲೆಯ ಮೂಡಲಗಿ ಶೈಕ್ಷಣಿಕ ವಲಯದ ಕಲ್ಲೋಳಿಯ ಎನ್‌.ಆರ್‌.ಪಾಟೀಲ ಪಿ.ಯು ಕಾಲೇಜು ಮಂಗಳವಾರ ಸಾಕ್ಷಿಯಾಗಿದೆ. 

ಮಾ.4ರಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿದ್ದು, ಮಂಗಳವಾರ ಉರ್ದು ಭಾಷಾ ಪರೀಕ್ಷೆ ನಡೆಯಿತು. ಕಲ್ಲೋಳಿ ಗ್ರಾಮದ ಪರೀಕ್ಷಾ ಕೇಂದ್ರದಲ್ಲಿ, ವಡರಟ್ಟಿ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ವರ್ಷದ ಮುಸ್ಕಾನ ಪಠಾಣ ಎಂಬ ಏಕೈಕ ವಿದ್ಯಾರ್ಥಿನಿ ಉರ್ದು ಭಾಷಾ ಪರೀಕ್ಷೆಗೆ ಹಾಜರಾಗಿದ್ದಳು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇವಳಿಗಾಗಿ ಚಿಕ್ಕೋಡಿಯಿಂದ ಕಲ್ಲೋಳಿಗೆ ಪ್ರಶ್ನೆಪತ್ರಿಕೆ ತರಲು 5 ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರೆ, ಪರೀಕ್ಷಾ ಕೇಂದ್ರದಲ್ಲಿ ಒಬ್ಬರು ಕೊಠಡಿ ಮೇಲ್ವಿಚಾರಕರು, ಒಬ್ಬರು ಮುಖ್ಯ ಅಧೀಕ್ಷಕ, ಒಬ್ಬರು ಸಹ ಅಧೀಕ್ಷಕ, ವೀಕ್ಷಕ ದಳದ 2 ಸಿಬ್ಬಂದಿ, ಕಚೇರಿ ಸಿಬ್ಬಂದಿ 3, ಇಬ್ಬರು ಪೊಲೀಸರು, ಒಬ್ಬ ಸಿಪಾಯಿ ಸೇರಿದಂತೆ ಒಟ್ಟು 15 ಜನ ಸಿಬ್ಬಂದಿ ಪರೀಕ್ಷಾ ಕರ್ತವ್ಯ ನಿರ್ವಹಿಸಿದ್ದಾರೆ. 

ಪರೀಕ್ಷಾ ಕೇಂದ್ರಕ್ಕೆ 3 ಜನರ ಫ್ಲೈಯಿಂಗ್‌ ಸ್ಕ್ವಾಡ್ ಸಿಬ್ಬಂದಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಒಟ್ಟಾರೆ ಒಬ್ಬ ವಿದ್ಯಾರ್ಥಿನಿಗೆ ಒಟ್ಟು 18 ಜನ ಸಿಬ್ಬಂದಿ ಕರ್ತವ್ಯ ನಿರ್ವಹಿಸಿ ಗಮನ ಸೆಳೆದಿದ್ದಾರೆ.

Follow Us:
Download App:
  • android
  • ios