ಕೊರೋನಾ ಕಂಟಕದಿಂದ ಮತ್ತೆ ಕೊಪ್ಪಳ ಪಾರು: ನಿಟ್ಟುಸಿರು ಬಿಟ್ಟ ಜನತೆ..!

ಪ್ರಾಥಮಿಕ ಸಂಪರ್ಕವಿದ್ದವರಲ್ಲಿಯೂ ನೆಗಟಿವ್‌| ಪವಾಡ ಸದೃಶ್ಯದಂತೆ ಕೊಪ್ಪಳ ಪಾರು|ನಿಲೋಗಲ್‌, ಹನುಮಾನಳ ಗ್ರಾಮದಲ್ಲಿ ನಿರಾಳ| ರಾಜ್ಯಾದ್ಯಂತ ಭಾರಿ ಅನಾಹುತವನ್ನೇ ಸೃಷ್ಟಿಮಾಡಿರುವ ತಬ್ಲಿಘಿಗಳ ವರದಿಯೂ ಜಿಲ್ಲೆಯಲ್ಲಿ ನೆಗಟಿವ್‌ ಬಂದಿದೆ|

18 People Coronavirus Report Negative in Koppal District

ಕೊಪ್ಪಳ(ಮೇ.11): ಜಿಲ್ಲೆಯ ಜನರ ಎದೆಬಡಿತ ಹೆಚ್ಚಿಸಿ​ದ್ದ ಹನುಮನಾಳ ಮತ್ತು ನಿಲೋಗಲ್‌ ಗ್ರಾಮದ ಪ್ರಾಥಮಿಕ ಸಂಪರ್ಕ ಹೊಂದಿದವರ ವರದಿಯೂ ನೆಗಟಿವ್‌ ಬಂದಿದ್ದು, ಕೊಪ್ಪಳ ಮತ್ತೊಮ್ಮೆ ಕೊರೋನಾ ಕಂಟಕದಿಂದ ಪಾರಾಗಿದೆ. ಇದರಿಂದ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಪಿ-681 ಪಾಸಿಟಿವ್‌ ವ್ಯಕ್ತಿ​ಯೊಂದಿ​ಗೆ ಕೊಪ್ಪಳ ಜಿಲ್ಲೆಯ 18 ಜನರು ನೇರ ಸಂಪರ್ಕಕ್ಕೆ ಬಂದಿದ್ದರೂ ಅವರಿಗೆ ಕೊರೋನಾ ಬಂದಿಲ್ಲ ಎನ್ನುವುದು ಪ್ರಯೋಗಾಲಯ ವರದಿಯಿಂದ ಪಕ್ಕಾ ಆಗಿದೆ. ಇದರಿಂದ ಕೊಪ್ಪಳ ಜಿಲ್ಲೆ ಪವಾಡ ಸದೃಶ್ಯ ಎನ್ನುವಂತೆ ಎರಡನೇ ಬಾರಿ ಪಾರಾಗಿದೆ.

ಲಾಕ್‌ಡೌನ್‌ ಎಫೆಕ್ಟ್‌: ದುಡಿಮೆಯೂ ಇಲ್ಲ, ದುಡ್ಡೂ ಇಲ್ಲ, ಗರ್ಭಕೋಶ ಚಿಕಿತ್ಸೆಗೆ ಬಡ ಮಹಿಳೆಯ ಪರದಾಟ

ಕೊರೋನಾ ಪಾಸಿಟಿವ್‌ ಇರುವ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಹೊಂದಿದ್ದ ಮುಂಬೈ ಮಹಿಳೆ ಕೊಪ್ಪಳಕ್ಕೆ ಆಗಮಿಸಿ ಪಾಸ್‌ ಪಡೆಯಲು ಬಂದಿದ್ದು ದೊಡ್ಡ ಸುದ್ದಿಯಾಗಿತ್ತು ಮತ್ತು ಆತಂಕಕ್ಕೆ ಕಾರಣವಾಗಿತ್ತು. ಅದರಲ್ಲೂ ಪ್ರಾಥಮಿಕ ಸಂಪರ್ಕ ಮತ್ತು ಸೆಕೆಂಡರಿ ಸಂಪರ್ಕ ಹೊಂದಿದವರ ವರದಿಯೂ ನೆಗಟಿವ್‌ ಬಂದಿತ್ತು. ಈಗ ಬಾಗಲಕೋಟೆ ಪಾಸಿಟೀವ್‌ ವ್ಯಕ್ತಿ ಕೊಪ್ಪಳ ಜಿಲ್ಲೆಯಲ್ಲಿ ಸೀಮಂತ ಮತ್ತು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪ​ರ್ಕ​ದ​ಲ್ಲಿ​ದ್ದ​ವ​ರ 36 ಜನರ ವರದಿ ನೆಗಟಿವ್‌ ಬಂದಿರುವುದರಿಂದ ಕೊಪ್ಪಳ ಜಿಲ್ಲೆಯ ಜನರ ಆತಂಕವನ್ನು ದೂರ ಮಾಡಿದೆ.

ಜಿಲ್ಲೆಯಲ್ಲಿ ಇದುವರೆಗೂ 1114 ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇದರಲ್ಲಿ 1078 ವರದಿಗಳು ನೆಗಟಿವ್‌ ಎಂದು ಬಂದಿವೆ. ಇನ್ನುಳಿದ ವರದಿ ಬರಬೇಕಾಗಿದೆ. ಇದಲ್ಲದೆ ಪ್ರಾಥಮಿಕ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಇರುವವರ ವರದಿಯೂ ನೆಗ​ಟೀವ್‌ ಬಂದಿದೆ. ಅಷ್ಟೇ ಯಾಕೆ ರಾಜ್ಯಾದ್ಯಂತ ಭಾರಿ ಅನಾಹುತವನ್ನೇ ಸೃಷ್ಟಿಮಾಡಿರುವ ತಬ್ಲಿಘಿಗಳ ವರದಿಯೂ ಜಿಲ್ಲೆಯಲ್ಲಿ ನೆಗಟಿವ್‌ ಬಂದಿದೆ.

ಬೆಂಗಳೂರು ಪ್ರಯೋಗಾಲಯಕ್ಕೆ:

ಇದುವರೆಗೂ ಕೊಪ್ಪಳ ಜಿಲ್ಲೆಯ ಕೋವಿಡ್‌ ಸ್ಯಾಂಪಲ್‌ಗಳನ್ನು ಬಳ್ಳಾರಿಗೆ ಕಳುಹಿಸಿಕೊಡಲಾಗುತ್ತಿತ್ತು. ಆದರೆ, ಲ್ಯಾಬ್‌​ನಲ್ಲಿ ತಾಂತ್ರಿಕ ದೋಷ ಕಂಡು​ಬಂದಿ​ದ್ದ​ರಿಂದ​ ಈಗ ಸ್ಯಾಂಪಲ್‌ಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗುತ್ತಿದೆ. ಪ್ರಾಥಮಿಕ ಮತ್ತು ಸೆಕಂಡರಿ ಕಾಂಟೆಕ್ಟ್ ಸ್ಯಾಂಪಲ್‌ಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗುತ್ತಿದೆ. ಅಲ್ಲಿಯ ವರದಿ ಬರಲು ಎರಡು ದಿನ ತಡವಾಗಿದ್ದರಿಂದ ಎದೆಬಡಿತ ಹೆಚ್ಚಾಗಿತ್ತು. ಆದರೆ, ಈಗ ನೆಗಟಿವ್‌ ಬಂದಿರುವುದರಿಂದ ಕೊಪ್ಪಳ ಮತ್ತೆ ನಿರಾಳ.
 

Latest Videos
Follow Us:
Download App:
  • android
  • ios