ವಿಚಾರಣೆ ವೇಳೆ ಸೂಕ್ತ ದಾಖಲೆಗಳು ಇಲ್ಲದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬೆಳ್ಳಿಯ ಸರಗಳು, ಬೆಳ್ಳಿಯ ಕರಿಮಣಿ ಸರಗಳು, ಮಕ್ಕಳ ಕಾಲುಬಳೆ, ಕೈ ಬಳೆ, ತುಳಸಿ, ರುದ್ರಾಕ್ಷಿ ಮಾಲೆ, ಗಡಿಯಾರ, ವಾಲೆ, ಉಂಗುರ, ಬ್ರಾಸ್‌ಲೈಟ್‌, ಲೇಡಿಸ್‌ ಬ್ರಾಸ್‌ಲೈಟ್‌, ಸಲ್ಮಾನ್‌ ಖಾನ್‌ ಬ್ರಾಸ್‌ಲೈಟ್‌ ಸೇರಿದಂತೆ ವಿವಿಧ ವಿನ್ಯಾಸದ ಬೆಳ್ಳಿ ಆಭರಣಗಳನ್ನು ಜಪ್ತಿ. 

ಬೆಂಗಳೂರು(ಏ.01): ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ .14.04 ಲಕ್ಷ ಮೌಲ್ಯದ 18.16 ಕೆ.ಜಿ. ತೂಕದ ಬೆಳ್ಳಿ ಆಭರಣಗಳನ್ನು ಹಲಸೂರು ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಪೊಲೀಸರು ಗಸ್ತಿನಲ್ಲಿ ಇರುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಗೌತಮಪುರ ರಸ್ತೆಯಲ್ಲಿ ಬ್ಯಾಗ್‌ ಹಿಡಿದು ಬರುತ್ತಿದ್ದರು. ಆಗ ತಡೆದು ಪರಿಶೀಲಿಸಿದಾಗ ಬೆಳ್ಳಿ ಆಭರಣಗಳು ಪತ್ತೆಯಾಗಿವೆ. ವಿಚಾರಣೆ ವೇಳೆ ಸೂಕ್ತ ದಾಖಲೆಗಳು ಇಲ್ಲದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬೆಳ್ಳಿಯ ಸರಗಳು, ಬೆಳ್ಳಿಯ ಕರಿಮಣಿ ಸರಗಳು, ಮಕ್ಕಳ ಕಾಲುಬಳೆ, ಕೈ ಬಳೆ, ತುಳಸಿ, ರುದ್ರಾಕ್ಷಿ ಮಾಲೆ, ಗಡಿಯಾರ, ವಾಲೆ, ಉಂಗುರ, ಬ್ರಾಸ್‌ಲೈಟ್‌, ಲೇಡಿಸ್‌ ಬ್ರಾಸ್‌ಲೈಟ್‌, ಸಲ್ಮಾನ್‌ ಖಾನ್‌ ಬ್ರಾಸ್‌ಲೈಟ್‌ ಸೇರಿದಂತೆ ವಿವಿಧ ವಿನ್ಯಾಸದ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ.

Chikkamagaluru: ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.5 ಲಕ್ಷ ಹಣ ವಶ

ದಾಖಲೆ ಇಲ್ಲದೆ ಆಭರಣ ಸಾಗಿಸುತ್ತಿದ್ದ ಗೌತಮಪುರದ ಚುನ್ನಿಲಾಲ್‌ ಮತ್ತು ಇಂದ್ರಕುಮಾರ್‌ಗೆ ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗುವುದು. ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಆಭರಣ ಹಂಚಲು ಕೊಂಡೊಯ್ಯುವ ಸಾಧ್ಯತೆ ಇರುತ್ತದೆ. ವಿಚಾರಣೆ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಈ ಸಂಬಂಧ ಹಲಸೂರು ಪೊಲೀಸ್‌ ಠಾಣೆಯಲ್ಲಿ ಎನ್‌ಸಿಎಆರ್‌ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.