ವಿಜಯಪುರ(ಮೇ.22): ಗೋವಾ ರಾಜ್ಯ ಹೊರತುಪಡಿಸಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ಒಟ್ಟು 17,626 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದ್ದಾರೆ.

ಬೇರೆ ರಾಜ್ಯಗಳಿಂದ ಆಗಮಿಸಿದವರಲ್ಲಿ ಅಧಿಕೃತ ಪರವಾನಗಿ ಪಡೆದು 9987 ಹಾಗೂ ಪರವಾನಗಿ ಪಡೆಯದೆ 7639 ಜನರು ಜಿಲ್ಲೆಗೆ ಆಗಮಿಸಿದ್ದು, ಒಟ್ಟು 17,626 ಜನರು ಜಿಲ್ಲೆಗೆ ಬಂದಿದ್ದಾರೆ. ಅವರೆಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದೆ. ನಗರ ಪ್ರದೇಶದಲ್ಲಿ 2,342 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 15,285 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 1,066, ವಿದ್ಯಾರ್ಥಿ ನಿಲಯಗಳಲ್ಲಿ 3,316, ಪ್ರೌಢಶಾಲೆಗಳಲ್ಲಿ 3,733, ಪ್ರಾಥಮಿಕ ಶಾಲೆಗಳಲ್ಲಿ 7,871, ಸಮುದಾಯ ಭವನಗಳಲ್ಲಿ 266, ಇತರೆÜ ಕಡೆಗಳಲ್ಲಿ 1,145 ಸೇರಿದಂತೆ 17,626 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

KSRTC ಬಸ್‌ಗೆ ಮುಗಿಬಿದ್ದ ಪ್ರಯಾಣಿಕರು: ಮುಂಗಡ ಟಿಕೆಟ್‌ ಖರೀದಿಸಿದವರಿಗೆ ಮಾತ್ರ ಅವಕಾಶ..!

ವಿವಿಧ ರಾಜ್ಯಗಳಿಂದ ಅಧಿಕೃತ ಮತ್ತು ಅನಧಿಕೃತವಾಗಿ ವಿಜಯಪುರ ನಗರಕ್ಕೆ 222, ವಿಜಯಪುರ ಗಾಮೀಣ ಪ್ರದೇಶಕ್ಕೆ 1,808, ಬಬಲೇಶ್ವರಕ್ಕೆ 661, ತಿಕೋಟಾಕ್ಕೆ 1,060, ಬಸವನ ಬಾಗೇವಾಡಿಗೆ 2,381, ಕೊಲ್ಹಾರಕ್ಕೆ 318, ನಿಡಗುಂದಿಗೆ 278, ಮುದ್ದೇಬಿಹಾಳಕ್ಕೆ 1,077, ತಾಳಿಕೋಟೆಗೆ 1,483, ಇಂಡಿಗೆ 2,527, ಚಡಚಣಕ್ಕೆ 340, ಸಿಂದಗಿಗೆ 2,719 ಹಾಗೂ ದೇವರಹಿಪ್ಪರಗಿಗೆ 2,465 ಜನರು ಸೇರಿದಂತೆ 17,626 ಜನರು ಆಗಮಿಸಿದ್ದಾರೆ ಎಂದು ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ಒಟ್ಟು 654 ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಗೋವಾ ರಾಜ್ಯದಿಂದ ಬಂದವರನ್ನು ಮನೆಯಲ್ಲಿಯೇ ಕ್ವಾರಂಟೈನ್‌ಗೆ ಸೂಚಿಸಿದ್ದು, ಈವರೆಗೆ 2,911 ಜನರನ್ನು ಹೋಮ್‌ಕ್ವಾರಂಟೈನ್‌ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.