ಮೈಸೂರು [ಆ.23]: ರಾಜ್ಯದಲ್ಲಿ ಅತೃಪ್ತಿಯಿಂದ ರಾಜೀನಾಮೆ ನೀಡಿ ಹೊರ ಬಂದ 17 ಮಂದಿಯೂ ಕೂಡ ಬಿಜೆಪಿಗರೇ ಎಂದು ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ. 

ಮೈಸೂರಿನಲ್ಲಿ ಮಾತನಾಡಿದ ಶ್ರೀನಿವಾಸ ಪ್ರಸಾದ್ ರಾಜೀನಾಮೆ ನೀಡಿ ಅನರ್ಹರಾದ ಎಲ್ಲರೂ ಮುಂದಿನ ಚುನಾವಣೆಯಲ್ಲಿ ಅವರೆಲ್ಲಾ ಬಿಜೆಪಿ ಚಿಹ್ನೆಯಿಂದಲೇ ಎದುರಿಸಬೇಕು. ಆದ್ದರಿಂದ ಮೂಲ ಅಥವಾ ವಲಸಿಗ ಬಿಜೆಪಿಗರು ಎನ್ನಲಾಗದು. ಎಲ್ಲರೂ ಬಿಜೆಪಿಗರೇ ಎಂದರು. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಮುಂದಿನ ಬಾರಿ  ಅನರ್ಹರಾಗಿರುವ 17 ಜನರಿಗೂ ಮಂತ್ರಿ ಸ್ಥಾನ ಸಿಗಲಿದೆ. ಸುಪ್ರೀಂ ಕೋರ್ಟ್ ತೀರ್ಪು ಬಂದ 10 ದಿನದಲ್ಲಿ ಅವರೆಲ್ಲರೂ ರಾಜ್ಯ ಸರ್ಕಾರದಲ್ಲಿ ಮಂತ್ರಿಗಳಾಗಲಿದ್ದಾರೆ ಎಂದರು. 

ಈಗಾಗಲೇ ಅನರ್ಹರಿಗೆ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇಹೇಳಿದ್ದಾರೆ. ಆದ್ದರಿಂದ ಯಾರಿಗೂ ಕೂಡ ಅನ್ಯಾಯವಾಗದು ಎಂದು ಶ್ರೀನಿವಾಸ ಪ್ರಸಾದ್ ಹೇಳಿದರು.