ಶಿವಮೊಗ್ಗ(ಜೂ.01): ಕೊರೋನಾ ಸೋಂಕಿನಿಂದ ಗುಣಮುಖರಾಗಿರುವ ಜಿಲ್ಲೆಯ 17 ಮಂದಿ ಮೆಗ್ಗಾನ್‌ ಆಸ್ಪತ್ರೆಯಿಂದ ಭಾನುವಾರ ಬಿಡುಗಡೆ ಹೊಂದಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು.

ಶಿವಮೊಗ್ಗ ತಾಲೂಕಿನ ನಾಲ್ವರು, ತೀರ್ಥಹಳ್ಳಿ ತಾಲೂಕಿನ ಆರು ಮಂದಿ, ಹೊಸನಗರದ ಮೂವರು, ಸೊರಬದ ಇಬ್ಬರು ಹಾಗೂ ಸಾಗರ, ಶಿಕಾರಿಪುರದ ತಲಾ ಒಬ್ಬರು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ ಎಂದು ಶಿವಮೊಗ್ಗ ಮೆಡಿಕಲ್‌ ಕಾಲೇಜು ನಿರ್ದೇಶಕ ಡಾ. ಗುರುಪಾದಪ್ಪ ತಿಳಿಸಿದರು.

ತೀರ್ಥಹಳ್ಳಿ: ಪಿ- 1126, ಪಿ- 1127, ಪಿ- 1297, ಪಿ- 1298, ಪಿ- 1299, ಪಿ- 1301, ಶಿವಮೊಗ್ಗ: ಪಿ- 1305 (ಕುಂಸಿ), ಪಿ-1300 (ಕೂಡ್ಲಿ), ಪಿ-1503, 1302 (ಸೂಳೆಬೈಲು) ಹೊಸನಗರ : ಪಿ-1089, ಪಿ- 1090, ಪಿ- 1308, ಸೊರಬ : ಪಿ- 1498, ಪಿ- 1734, ಶಿಕಾರಿಪುರ : ಪಿ- 1304, ಸಾಗರ : ಪಿ- 1088 ಇವರುಗಳು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಆಟವಾಡುತ್ತಿದ್ದ ಬಾಲಕಿ ಹಾವು ಕಚ್ಚಿ ಸಾವು

ಇಲ್ಲಿಯವರೆಗೆ ಜಿಲ್ಲೆಯಲ್ಲಿ 42 ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆ ಆಗಿವೆ. ಮೇ 25 ರಂದು 4 ಮಂದಿ, ಮೇ 29 ರಂದು ಮೂವರು ಗುಣಮುಖರಾಗಿ ಮನೆಗೆ ತೆರಳಿದ್ದರು. ಇದೀಗ ಭಾನುವಾರ ಒಂದೇ ದಿನ 17 ಮಂದಿ ಬಿಡುಗಡೆ ಆಗುವ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ 24 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾದಂತಾಗಿದೆ. ಇನ್ನುಳಿದ 18 ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ಇವರೆಲ್ಲರಿಗೂ 14 ದಿನ ಹೋಂ ಕ್ವಾರಂಟೈನ್‌ ಕಡ್ಡಾಯವಾಗಿದೆ. ಬಿಡುಗಡೆ ಹೊಂದಿದವರಿಗೆ ಆಸ್ಪತ್ರೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಶುಭ ಹಾರೈಸಿದರು.

ಭಾನುವಾರ ಶಿವಮೊಗ್ಗ ಜಿಲ್ಲೆಯಲ್ಲಿ ಹೊಸದಾಗಿ ಒಬ್ಬ ವ್ಯಕ್ತಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.