ಸಿಂಧನೂರು- ಕಲ್ಮಾಲ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 1636 ಕೋಟಿ: ಹಂಪನಗೌಡ ಬಾದರ್ಲಿ
ಈ ಹಿಂದೆ ತಾವು ಶಾಸಕರಾಗಿದ್ದ ಅವಧಿಯಲ್ಲಿ ಮೊದಲ ಹಂತವಾಗಿ ಕೈಗೊಂಡ ಬೂದುಗುಂಪಾ-ಸಿಂಧನೂರುವರೆಗೆ ಕಾಮಗಾರಿ ಮುಗಿದಿದೆ. ಈಗ ಪುನಃ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಸಿಂಧನೂರು-ಕಲ್ಮಾಲ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದೆ: ಶಾಸಕ ಹಂಪನಗೌಡ ಬಾದರ್ಲಿ
ಸಿಂಧನೂರು(ಜು.11): ಸಿಂಧನೂರಿನಿಂದ ಕಲ್ಮಾಲವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಯೋಜನೆಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ 1636 ಕೋಟಿ ರು.ಅನುದಾನ ಘೋಷಣೆ ಮಾಡಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಟೌನ್ ಹಾಲ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಈ ಹಿಂದೆ ತಾವು ಶಾಸಕರಾಗಿದ್ದ ಅವಧಿಯಲ್ಲಿ ಮೊದಲ ಹಂತವಾಗಿ ಕೈಗೊಂಡ ಬೂದುಗುಂಪಾ-ಸಿಂಧನೂರುವರೆಗೆ ಕಾಮಗಾರಿ ಮುಗಿದಿದೆ. ಈಗ ಪುನಃ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಸಿಂಧನೂರು-ಕಲ್ಮಾಲ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದೆ ಎಂದು ತಿಳಿಸಿದರು.
ಕಲಬುರಗಿ ಹಸಿರೀಕರಣಕ್ಕೆ ಹೆಚ್ಚು ಕೆಲ್ಸ ಮಾಡಿ: ಖಂಡ್ರೆ ಕರೆ
ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ತುರ್ವಿಹಾಳ ಬಳಿ 260 ಎಕರೆಯಲ್ಲಿ ಈಗಾಗಲೇ 140 ಎಕರೆಯಲ್ಲಿ ಕೆರೆ ನಿರ್ಮಿಸಲಾಗಿದೆ. ಇನ್ನುಳಿದ 120 ಎಕರೆಯಲ್ಲಿ ಇನ್ನೊಂದು ಕೆರೆ ನಿರ್ಮಾಣಕ್ಕಾಗಿ ನಗರ ಯೋಜನಾ ಪ್ರಾಧಿಕಾರ ತನ್ನ 5 ಕೋಟಿ ಹಣ ಒದಗಿಸಲು ಅನುಮತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಾಕಿ ಹಣವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬಿಡುಗಡೆಗೊಳಿಸಿ ಕೆರೆ ನಿರ್ಮಾಣ ಮಾಡಲಾಗುವುದು ಎಂದರು.
24 ಗಂಟೆ ಕುಡಿಯುವ ನೀರು ಹಾಗೂ ಒಳಚರಂಡಿ ಯೋಜನೆ ಕಾಮಗಾರಿ ಶೇ.90 ರಷ್ಟುಮುಗಿದಿದೆ. ಅನೇಕ ಬಾರಿ ಸಭೆ ನಡೆಸಿ, ನೋಟಿಸ್ ನೀಡಿ ಸೂಚಿಸಿದರೂ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಗುತ್ತಿಗೆ ಪಡೆದ ಎಸ್‌ಪಿಎಂಎಲ್ ಕಂಪನಿ ಟರ್ಮಿನೇಟ್‌ಗೆ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ. ಇದೇ ರೀತಿ ಯುಜಿಡಿ ಗುತ್ತಿಗೆ ಪಡೆದ ಯುಪಿಸಿ ಕಂಪನಿಗೂ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಇದ್ದರು.