ವಿಜಯಪುರ: ಮತ್ತೆ ಒಂದೇ ದಿನ 16 ಕೊರೋನಾ ಪಾಸಿಟಿವ್‌ ಕೇಸ್‌

10 ಜನ ಪುರುಷರು, ಐವರು ಮಹಿಳೆಯರು ಹಾಗೂ ಓರ್ವ ಬಾಲಕಿಗೆ ಕೊರೋನಾ ಸೋಂಕು ದೃಢ| ಜಿಲ್ಲೆಯಲ್ಲಿ ಈವರೆಗೆ ಒಟ್ಟು 317 ಜನರಿಗೆ ಸೋಂಕು| ಈವರೆಗೆ ಒಟ್ಟು 222 ಜನ ಗುಣಮುಖ| 88 ಜನರಿಗೆ ಚಿಕಿತ್ಸೆ, 7 ಜನ ಸಾವು, 88 ಸಕ್ರಿಯ ರೋಗಿಗಳು|

16 Coronavirus Positive Cases in Vijayapura District

ವಿಜಯಪುರ(ಜೂ.24): ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ ಮತ್ತೆ 16 ಮಂದಿಗೆ ಕೊರೋನಾ ಸೋಂಕು ತಗಲಿದ್ದು, 10 ಜನ ಪುರುಷರು, ಐವರು ಮಹಿಳೆಯರು ಹಾಗೂ ಓರ್ವ ಬಾಲಕಿಗೆ ಕೊರೋನಾ ಸೋಂಕು ದೃಢವಾಗಿದೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದ್ದಾರೆ.

43 ವರ್ಷದ ಪುರುಷ, 44 ವರ್ಷದ ಪುರುಷ, 20 ವರ್ಷದ ಯುವಕ, 31 ವರ್ಷದ ಪುರುಷ, 20 ವರ್ಷದ ಯುವಕ, 46 ವರ್ಷದ ವ್ಯಕ್ತಿ, 38 ವರ್ಷದ ಪುರುಷ, 75 ವರ್ಷದ ವೃದ್ಧ, 38 ವರ್ಷದ ಪುರುಷ, 27 ವರ್ಷದ ಯುವಕ, 28 ವರ್ಷದ ಮಹಿಳೆ, 60 ವರ್ಷದ ವೃದ್ಧೆ, 16 ವರ್ಷದ ಬಾಲಕಿ, 38 ವರ್ಷದ ಮಹಿಳೆ, 31 ವರ್ಷದ ಮಹಿಳೆ, 23 ವರ್ಷದ ಯುವತಿ ಸೇರಿದಂತೆ 5 ಮಹಿಳೆಯರಿಗೆ ಸೋಂಕು ತಗುಲಿದೆ. ಕಂಟೈನ್ಮೆಂಟ್‌ ವಲಯದ ಸಂಪರ್ಕದಿಂದ ಇಬ್ಬರಿಗೆ, ಉಸಿರಾಟದ ಸಮಸ್ಯೆಯಿಂದ 7 ಜನರಿಗೆ ಸೋಂಕು ದೃಢಪಟ್ಟಿದೆ. 

ವಿಜಯಪುರ ಸ್ಮಾರ್ಟ್‌ಸಿಟಿಗೆ 1000 ಕೋಟಿ: ಸಚಿವ ಭೈರತಿ ಬಸವರಾಜ್‌

ಮೂವರಿಗೆ ಪಿ. 8792, ನಾಲ್ವರಿಗೆ ಪಿ. 7836 ಸಂಪರ್ಕದಿಂದ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 317 ಜನರಿಗೆ ಸೋಂಕು ತಗುಲಿದ್ದು, ಇಂದು ಇಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 222 ಜನ ಗುಣಮುಖರಾಗಿದ್ದು, 88 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಜನ ಸಾವನ್ನಪ್ಪಿದ್ದಾರೆ. 88 ಸಕ್ರಿಯ ರೋಗಿಗಳಿದ್ದಾರೆ ಎಂದರು.
 

Latest Videos
Follow Us:
Download App:
  • android
  • ios