ಧಾರವಾಡ(ಜೂ.03): ಕೋವಿಡ್‌ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಜೂ. 1ರಂದು 5 ಜನ ಹಾಗೂ ಜೂ. 2ರಂದು 11 ಜನ ಸೇರಿ ಎರಡು ದಿನಗಳ ಅವಧಿಯಲ್ಲಿ ಒಟ್ಟು 16 ಜನ ಗುಣಮುಖರಾಗಿ ಹುಬ್ಬಳ್ಳಿಯ ಕಿಮ್ಸ್‌ನಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ತಿಳಿಸಿದ್ದಾರೆ.

ಗುಜರಾತಿನ ಅಹಮದಾಬಾದಿನಿಂದ ಮೇ 12ರಂದು ಆಗಮಿಸಿದ್ದ ಪಿ-879 (55, ಪುರುಷ), ಪಿ-880(31, ಪುರುಷ), ಪಿ-881(25, ಪುರುಷ), ಪಿ-882 (70,ಪುರುಷ), ಪಿ-883 (26, ಪುರುಷ), ಪಿ-884(18, ಪುರುಷ), ಪಿ-885(19, ಪುರುಷ), ಪಿ-886(20, ಪುರುಷ), ಪಿ-887(27, ಪುರುಷ), ಮೇ 17ರಂದು ಕೋವಿಡ್‌ ಪಾಸಿಟಿವ್‌ ದೃಢಪಟ್ಟಿದ್ದ ಹುಬ್ಬಳ್ಳಿ ಕೇಶ್ವಾಪುರ ಶಾಂತಿನಗರದ ಪಿ-1124 (16, ಪುರುಷ), ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದ್ದ ಪಿ-1123 (39, ಪುರುಷ), ಪಿ-1142 (28, ಮಹಿಳೆ), ಪಿ-1143 (25, ಪುರುಷ) ಮೇ 21ರಂದು ಮುಂಬೈನಿಂದ ಹಿಂದಿರುಗಿದ್ದ ಪಿ-1509 (35, ಪುರುಷ) ಹಾಗೂ ಮೇ 22ರಂದು ನವದೆಹಲಿಯಿಂದ ವಾಪಸಾಗಿದ್ದ ಪಿ-1609( 22, ಪುರುಷ ) ಮತ್ತು ಪಿ-1610 ( 23, ಪುರುಷ) ಬಿಡುಗಡೆಯಾಗಿದ್ದಾರೆ.

ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿ: ಕೊರೋನಾ ಸೋಂಕಿತ ಗುಣಮುಖ

ಇವರೆಲ್ಲರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೋವಿಡ್‌ ನೆಗೆಟಿವ್‌ ವರದಿ ಬಂದಿದೆ. ಎಕ್ಸ್‌ರೇ ಮೂಲಕ ಪರೀಕ್ಷೆ ಮಾಡಿ ಶ್ವಾಸಕೋಶದ ತೊಂದರೆ ಇಲ್ಲ ಎಂಬುದನ್ನು ವೈದ್ಯರು ದೃಢಪಡಿಸಿದ ನಂತರ ಇವರೆಲ್ಲರನ್ನೂ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 27 ಜನ ಕೋವಿಡ್‌ ನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ 23 ಜನ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.