Asianet Suvarna News Asianet Suvarna News

ಬೃಹತ್ ನಂದಿ ವಿಗ್ರಹ ಪತ್ತೆ.. ಯದುವೀರ್ ಒಡೆಯರ್ ಮೊದಲ ಪ್ರತಿಕ್ರಿಯೆ

ಅರಸಿನಕೆರೆಯಲ್ಲಿ ನಂದಿ ವಿಗ್ರಹ ಪತ್ತೆ ವಿಚಾರಕ್ಕೆ ಯದುವೀರ್ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ. ಜತೆಗೆ ಅನೇಕ ವಿಚಾರಗಳ ಕುರಿತು ಮಾತನಾಡಿದ್ದಾರೆ. 

150-years-old-historical-nandi-sculpture-found-Mysuru Yaduveer wadiyar reaction
Author
Bengaluru, First Published Jul 16, 2019, 9:41 PM IST

ಮೈಸೂರು[ಜು. 16]  ಅರಸನಕೆರೆಯಲ್ಲಿ ನಂದಿ ವಿಗ್ರಹಗಳು ಸಿಕ್ಕ ವಿಚಾರದ ಬಗ್ಗೆ ಯದುವೀರ್ ಒಡೆಯರ್ ಮಾತನಾಡಿದ್ದಾರೆ. ಅದಕ್ಕೂ ರಾಜಮನೆತನಕ್ಕೂ ಸಂಬಂಧ ಇದೆ ಎಂಬ ವರದಿ ಬಂದಿದೆ. ಆದರೆ ಅದರ ಬಗ್ಗೆ ನಮಗೆ ಇನ್ನು ಮಾಹಿತಿ ಸಿಕ್ಕಿಲ್ಲ. ನಂದಿ ವಿಗ್ರಹವನ್ನ ಹೊರ ತೆಗೆದಿರೋದು ಖುಷಿ ತಂದಿದೆ. ಇನ್ನೆರಡು ಮೂರೂ ದಿನಗಳಲ್ಲಿ ನಾನು ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದರು.

ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಪರಂಪರೆ ಕಟ್ಟಡಗಳ ಸಂರಕ್ಷಣೆ ಗೆ ನಮ್ಮ ಅಮ್ಮನವರ ಕಡೆಯಿಂದ ಒಂದು ಫೌಂಡೇಶನ್  ತೆರೆದಿದ್ದೇವೆ. ಸರ್ಕಾರದಿಂದ ಕೋರಿಕೆ  ಬಂದ್ರೆ ಸಂರಕ್ಷಣೆ ಮಾಡಲು ಸಿದ್ಧ.  ಅರಮನೆಯ ವಿಗ್ರಹಗಳು ,ಹಾಗೂ ಸಂಪತ್ತನ್ನ ರಕ್ಷಣೆ ಮಾಡುವುದು ಸರ್ಕಾರದ ಕೆಲಸ. ಸರ್ಕಾರಕ್ಕೆ ನಮ್ಮಿಂದ ಏನಾದರೂ ಸಹಾಯ ಬೇಕಿದ್ರೆ ಯಾವಾಗಲೂ ಸಿದ್ಧ ಎಂದು  ಹೇಳಿದರು.

ಮೈಸೂರು: 150 ವರ್ಷಗಳ ಹಿಂದಿನ ಬೃಹತ್ ನಂದಿ ವಿಗ್ರಹ ಪತ್ತೆ, ಗ್ರಾಮಸ್ಥರ ಮಾದರಿ ಕೆಲಸ

ಮನೆಯಲ್ಲಿ ಮೊದಲ ಮಗ ಆಗಬೇಡ, ಕೊನೆಯ ಭಾಷಣ ಮಾಡಬೇಡ ಅಂತ ನಮ್ಮ‌ಕನ್ನಡ‌ ಮೇಷ್ಟ್ರು ಹೇಳುತ್ತಿದ್ದರು. ನಾನು‌ ಮೊದಲ ಮಗನಾಗಿ  ಕಷ್ಟ ಅನುಭವಿಸಿದ್ದೇನೆ. ಅದು ಯಾರಿಗೂ ಬೇಡ, ಅದನ್ನ‌ ಇಲ್ಲಿ ಹೇಳುವ ಸಂದರ್ಭವು ಅಲ್ಲ ಎಂದು ಭಾಷಣ ಆರಂಭಕ್ಕೂ ಮುನ್ನ ಯದುವೀರ್ ಒಡೆಯರ್ ಹೇಳಿದ ಈ ಮಾತು ಅಚ್ಚರಿ ಮೂಡಿಸಿತು.

ರಾಜ್ಯಕ್ಕೆ ಜಯಚಾಮರಾಜ ಒಡೆಯರ್ ಅಪಾರ ಅವರ ಕೊಡುಗೆ ಎಲ್ಲಾ ಕಡೆ ಇದೆ. ಕರ್ನಾಟಕದ ಏಕೀಕರಣಕ್ಕೂ ಜಯಚಾಮರಾಜ ಒಡೆಯರ್ ಅವರ ಕೊಡುಗೆ ಅಪಾರ. ಅವರು ಕಟ್ಟಿಕೊಟ್ಟ ಸುವರ್ಣ ಯುಗವನ್ನ‌ ನಾವು ಮತ್ತೆ ನೋಡಬೇಕು. ನಾವು ಮುಂದಿನ ಯುವ ಪೀಳಿಗೆಗೆ ಸುವರ್ಣ ಯುಗವನ್ನ ಕಟ್ಟಲು ಈಗಿನಿಂದ ಕಾರ್ಯಾಚಾರಣೆ ಆರಂಭಿಸಬೇಕು ಎಂದು ಜಯಚಾಮರಾಜ ಒಡೆಯರ್ ಜನ್ಮ‌ಶತಾಬ್ಧಿ ಕಾರ್ಯಕ್ರಮದಲ್ಲಿ ಯದುವೀರ್ ಮಾತನಾಡುತ್ತಾ ತಿಳಿಸಿದರು.

"

Follow Us:
Download App:
  • android
  • ios