ಬಿಬಿಎಂಪಿಯ ಎಲ್ಲ ವಾರ್ಡ್‌ಗಳಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವುದಕ್ಕೆ ಮುಂದಾಗಿರುವ ರಾಜ್ಯ ಸರ್ಕಾರವು ಬರೋಬ್ಬರಿ 123 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಜು.09): ಬಿಬಿಎಂಪಿಯ ಎಲ್ಲ ವಾರ್ಡ್‌ಗಳಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವುದಕ್ಕೆ ಮುಂದಾಗಿರುವ ರಾಜ್ಯ ಸರ್ಕಾರವು ಬರೋಬ್ಬರಿ 123 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ. ಬಿಬಿಎಂಪಿಯು ನಗರದಲ್ಲಿ 141 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ (ಯುಪಿಎಚ್‌ಸಿ), 7 ರೆಫರಲ್‌ ಆಸ್ಪತ್ರೆ ಹಾಗೂ 27 ಹೆರಿಗೆ ಆಸ್ಪತ್ರೆಗಳನ್ನು ನಿರ್ವಹಣೆ ಮಾಡುತ್ತಿದೆ. 

ಆದರೆ, ನಗರದ 1.30 ಕೋಟಿ ಜನಸಂಖ್ಯೆಗೆ ಸಮರ್ಪಕ ವೈದ್ಯಕೀಯ ಸೇವೆ ನೀಡುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಯುಪಿಎಚ್‌ಸಿಗಳ ಸಂಖ್ಯೆ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಹಾಗಾಗಿ, ಪ್ರಸಕ್ತ ಸಾಲಿನಲ್ಲಿ 58ಕ್ಕೂ ಅಧಿಕ ಯುಪಿಎಚ್‌ಸಿಗಳು ಕಾರ್ಯಾರಂಭ ಮಾಡಲಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಭರಪೂರ ಅನುದಾನ ನೀಡಲು ಒಪ್ಪಿಗೆ ನೀಡಿದೆ.

Idgah Ground Row; ಶಾಸಕ ಜಮೀರ್‌ ಅಹಮದ್‌ ನೇತೃತ್ವದಲ್ಲಿ ಮುಖಂಡರ ಸಭೆ

16 ಹೊಸ ಕಟ್ಟಡ ನಿರ್ಮಾಣ: ರಾಜ್ಯ ಸರ್ಕಾರವು ಅಮೃತ್‌ ನಗರೋತ್ಥಾನ ಯೋಜನೆಯ ಕ್ರಿಯಾ ಯೋಜನೆಯಡಿ ಬೊಮ್ಮನಹಳ್ಳಿ, ದಾಸರಹಳ್ಳಿ, ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದ 16 ಕಡೆ ಹೊಸ ಯುಪಿಎಚ್‌ಸಿ ಕಟ್ಟಡ ನಿರ್ಮಾಣಕ್ಕೆ .24 ಕೋಟಿ ನಿಗದಿಪಡಿಸಿದೆ. ಇನ್ನುಳಿದ ಯುಪಿಎಚ್‌ಸಿ ಸ್ಥಾಪಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೇ ಆಸ್ಪತ್ರೆಗಳ ರಿಪೇರಿ, ಮೇಲ್ದರ್ಜೆಗೇರಿಸುವುದು, ಸಾಧನ ಸಲಕರಣೆ ಖರೀದಿಗೂ ರಾಜ್ಯ ಸರ್ಕಾರ ಅನುದಾನ ಮೀಸಲಿಟ್ಟಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯುಪಿಎಚ್‌ಸಿಗಳಿಗೆ ಜಾಗ ಗುರುತು: ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲದ ವಾರ್ಡ್‌ಗಳಲ್ಲಿ ಹೊಸದಾಗಿ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಥಳ ಗುರುತು ಮಾಡಲಾಗಿದೆ. ಅನುದಾನದ ಲಭ್ಯತೆ ಅನುಗುಣವಾಗಿ ಯುಪಿಎಚ್‌ಸಿಗಳನ್ನು ಹಂತ-ಹಂತವಾಗಿ ಆರಂಭಿಸಲು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ನಿರ್ಧರಿಸಿದ್ದಾರೆ.

ರೆಫರಲ್‌, ಹೆರಿಗೆ ಆಸ್ಪತ್ರೆ ಅಭಿವೃದ್ಧಿ: ಪ್ರಸಕ್ತ ಸಾಲಿನಲ್ಲಿ ಪೂರ್ವ ವಲಯದ ಹಲಸೂರು ರೆಫರಲ್‌ ರೆಫರಲ್‌ ಆಸ್ಪತ್ರೆ ಹಾಗೂ ಗಂಗಾ ನಗರ, ಡಿಜೆ ಹಳ್ಳಿ ಕಾಕ್ಸ್‌ಟೌನ್‌, ಆಸ್ಟಿನ್‌ ಟೌನ್‌ ಸೇರಿದಂತೆ 5 ಹೆರಿಗೆ ಆಸ್ಪತ್ರೆ ದುರಸ್ತಿಗೆ .10 ಕೋಟಿ ವೆಚ್ಚ ಮಾಡಲಾಗುತ್ತಿದೆ. ಪಶ್ಚಿಮ ವಲಯದ ಶ್ರೀರಾಮಪುರ ಹಾಗೂ ಜೆಜೆನಗರ ರೆಫರಲ್‌ ಆಸ್ಪತ್ರೆ, ಒಂದು ಜನರಲ್‌ ಹಾಗೂ 7 ಹೆರಿಗೆ ಆಸ್ಪತ್ರೆಯ ದುರಸ್ತಿಗೆ .12.80 ಕೋಟಿ, ಬಿಬಿಎಂಪಿ ಕ್ಲಿನಿಕಲ್‌ ವಿಭಾಗದ ಆರೋಗ್ಯಾಧಿಕಾರಿ ವಿಭಾಗದ 10 ಹೆರಿಗೆ, ಎರಡು ರೆಫರಲ್‌ ಆಸ್ಪತ್ರೆ ಹಾಗೂ ಒಂದು ಡಯಾಲಿಸಿಸ್‌ ಕೇಂದ್ರದ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿಗೆ .6 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ.

ನಗರದ ಜನರಿಗೆ ಗುಣಮಟ್ಟವೈದ್ಯಕೀಯ ಸೇವೆ ನೀಡಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಈ ಬಾರಿ ವೈದ್ಯಕೀಯ ಉಪಕರಣ ಖರೀದಿ, ಹೊಸ ಆರೋಗ್ಯ ಕೇಂದ್ರ ಸ್ಥಾಪನೆ, ಆಸ್ಪತ್ರೆಗಳ ದುರಸ್ತಿಗೆ ಅಗತ್ಯವಿರುವ ಅನುದಾನ ನೀಡಿದೆ.
-ಡಾ.ತ್ರಿಲೋಕಚಂದ್ರ, ವಿಶೇಷ ಆಯುಕ್ತ, ಬಿಬಿಎಂಪಿ ಆರೋಗ್ಯ ವಿಭಾಗ

ಎಲ್ಲೆಲ್ಲಿ ಹೊಸ ಯುಪಿಎಚ್‌ಸಿ ಕಟ್ಟಡ
ವಲಯ ಕಟ್ಟಡ ಸಂಖ್ಯೆ ಅನುದಾನ (ಕೋಟಿ .)
ಬೊಮ್ಮನಹಳ್ಳಿ 01 1.50
ದಾಸರಹಳ್ಳಿ 04 3.00
ಪೂರ್ವ 05 7.50
ಪಶ್ಚಿಮ 05 7.50
ದಕ್ಷಿಣ 03 4.50
ಒಟ್ಟು 16 24

Bengaluru: ಬಕ್ರೀದ್‌ಗೆ ರಸ್ತೆಯಲ್ಲಿ ಪ್ರಾರ್ಥನೆಗೆ ಅವಕಾಶ ಇಲ್ಲ: ಬಿಬಿಎಂಪಿ ಸ್ಪಷ್ಟನೆ

ಅನುದಾನ ಹಂಚಿಕೆ ವಿವರ
ವಿವರ ಸಂಖ್ಯೆ ಅನುದಾನ(ಕೋಟಿ .)
ಹೊಸ ಯುಪಿಎಚ್‌ಸಿ 16 24
ಆಸ್ಪತ್ರೆ ರಿಪೇರಿ 80 16
ಉನ್ನತೀಕರಣದ ಆಸ್ಪತ್ರೆ 67 40.20
ವೈದ್ಯಕೀಯ ಉನ್ನತೀಕರಣ 105 6.30
ವೈದ್ಯಕೀಯ ಸಾಧನ ಖರೀದಿ - 8
ರೆಫರಲ್‌, ಹೆರಿಗೆ ಆಸ್ಪತ್ರೆ ಅಭಿವೃದ್ಧಿ - 29
ಒಟ್ಟು - 123.3