ಮೈಸೂರು (ಮಾ.15):   ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆದಿದ್ದು,  ನೂತನ ದಾಂಪತ್ಯ ಜೀವನಕ್ಕೆ  14 ನವ ಜೋಡಿಗಳು ಕಾಲಿಟ್ಟಿದ್ದಾರೆ. 

ಧಾರ್ಮಿಕ ದತ್ತಿ ಇಲಾಖೆ ವತಿಯಿಂದ 'ಸಪ್ತಪದಿ' ಕಾರ್ಯಕ್ರಮ ನಡೆದಿದ್ದು,  ವೇದಘೋಷ ಮಂತ್ರಗಳ ಮೂಲಕ ನೂತನ ವಧುವರರಿಗೆ ಆಶೀರ್ವಾದ ಮಾಡಲಾಗಿದೆ. 

ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್, ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು,  ಜಿಲ್ಲೆಯ ವಿವಿಧ ಭಾಗಗಳಿಂದ   ನವ ಜೋಡಿಗಳು ಆಗಮಿಸಿದ್ದರು.

ಸರ್ವಧರ್ಮ ಸಾಮೂಹಿಕ ವಿವಾಹ: ಕಿಚ್ಚನಿಂದ ಮತ್ತೊಂದು ಸಮಾಜಮುಖಿ ಕೆಲಸ

ವಿವಾಹ ಕಾರ್ಯಕ್ರಮಕ್ಕೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದ್ದು,  ನೂತನ ವಧುವರರಿಗೆ ಅಕ್ಷತೆ ಹಾಕಿ ಆಶೀರ್ವದಿಸಿದರು. 

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಜಿ.ಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಸೇರಿ ಹಲವು ಗಣ್ಯರು ಸಾಥ್ ನೀಡಿದ್ದಾರೆ.