ಒಂದೇ ಕುಟುಂಬದ 14 ಜನರಿಗೆ ಕೊರೋನಾ ಪಾಸಿಟಿವ್/ ಭಾವನಸೌಂಧತ್ತಿ ಗ್ರಾಮದ 14 ಜನರಲ್ಲಿ ಕೊರೋನಾ ಪಾಸಿಟಿವ್ / ನಿನ್ನೆ 7 ಜನರಲ್ಲಿ ಕೊರೋನಾ ಪಾಸಿಟವ್ ಬಂದ ಹಿನ್ನೆಲೆ/ ಗ್ರಾಮದ 353 ಜನರಿಗೆ ಕೊರೋನಾ ಟೆಸ್ಟ್ ನಡೆಸಲಾಗಿತ್ತು/  ಅವಿಭಕ್ತ ಕುಟುಂಬದ 47 ಜನರಲ್ಲಿ 21 ಜನರಲ್ಲಿ ಕೊರೋನಾ ಪಾಸಿಟಿವ್

ಚಿಕ್ಕೋಡಿ(ಮಾ. 14) ಒಂದೇ ಕುಟುಂಬದ 14 ಜನರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ. ಭಾವನಸೌಂಧತ್ತಿ ಗ್ರಾಮದ 14 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ 7 ಜನರಲ್ಲಿ ಕೊರೋನಾ ಪಾಸಿಟವ್ ಬಂದ ಹಿನ್ನೆಲೆಯಲ್ಲಿ ಗ್ರಾಮದ 353 ಜನರಿಗೆ ಕೊರೋನಾ ಟೆಸ್ಟ್ ನಡೆಸಲಾಗಿತ್ತು. ಅವಿಭಕ್ತ ಕುಟುಂಬದ 47 ಜನರಲ್ಲಿ 21 ಜನರಲ್ಲಿ ಕೊರೋನಾ ಪಾಸಿಟಿವ್ ಬಂದ ಹಾಗೆ ಆಗಿದೆ. ವ್ಯಕ್ತಿಯೊಬ್ಬರು ವಯೋಸಹಜ‌ ಕಾಯಿಲೆಗೆ ತುತ್ತಾಗಿದ್ದರು. ಈ ಕಾರಣದಿಂದ ಮನೆ ಮಂದಿಗೆ ಕೊರೋನಾ ಟೆಸ್ಟ್ ನಡೆಸಲಾಗಿತ್ತು.

ಕರ್ನಾಟಕದಲ್ಲಿ ಮತ್ತೆ ಕೊರೋನಾ ಅಬ್ಬರ; ಎಚ್ಚರಿಕೆ ಕ್ರಮ ಏನು? 

ಮಹಾರಾಷ್ಟ್ರಕ್ಕೆ ಸಂಬಂಧಿಗಳ ಮನೆಗೆ ಕುಟುಂಬದ ಸದಸ್ಯರು ಹೋಗಿ ಬಂದಿದ್ದರು. ಮಹಾರಾಷ್ಟ್ರ ನಂಟಿನಿಂದ ಕೊರೋನಾ ಹರಡುತ್ತಿದೆ. ಕೊರೋನಾ ಪಾಸಿಟವ್ ಪ್ರಕರಣಗಳು ಈ ಸಂಖ್ಯೆಯಲ್ಲಿ ಕಾಣಿಸಿಕೊಂಡ ಕಾರಣ ಭಾವನಸೌದತ್ತಿ ಗ್ರಾಮದ ಸಂತೆ ರದ್ದು ಮಾಡಲಾಗಿದೆ.