ಬಳ್ಳಾರಿ, ತೋರಣಗಲ್ಲು ಸೇರಿದಂತೆ ಜಿಲ್ಲೆಯ ವಿವಿಧೆಡೆ ಜೀವನ ನಿರ್ವಹಣೆಗೆ ಬಂದಿದ್ದ ಪಶ್ಚಿಮ ಬಂಗಾಳ ರಾಜ್ಯದ ವಲಸೆ ಕಾರ್ಮಿಕರು| ಬಳ್ಳಾರಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಹಾಗೂ ತೋರಣಗಲ್ಲುವಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವಲಸೆ ಕಾರ್ಮಿಕರಿಗೆ ವೈದ್ಯಕೀಯ ತಪಾಸಣೆ|

ಬಳ್ಳಾರಿ(ಮೇ.31): ನಗರದ ರೈಲ್ವೆ ನಿಲ್ದಾಣದಿಂದ 1318 ವಲಸಿಗರನ್ನು ಹೊತ್ತ ಶ್ರಮಿಕ್‌ ವಿಶೇಷ ರೈಲು ಪಶ್ಚಿಮ ಬಂಗಾಳದತ್ತ ಶನಿವಾರ ಮಧ್ಯಾಹ್ನ ತೆರಳಿದೆ. ಸುರಕ್ಷಿತವಾಗಿ ತಮ್ಮೂರನ್ನು ತಲುಪಿ ಮತ್ತೆ ಬಳ್ಳಾರಿ ಜಿಲ್ಲೆಗೆ ಅತ್ಯಂತ ಖುಷಿಯಿಂದ ಬನ್ನಿ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ನೇತೃತ್ವದ ತಂಡ ಶುಭಹಾರೈಸಿ ಚಪ್ಪಾಳೆ ತಟ್ಟಿಬೀಳ್ಕೊಟ್ಟರು. 

ಬಳ್ಳಾರಿ, ತೋರಣಗಲ್ಲು ಸೇರಿದಂತೆ ಜಿಲ್ಲೆಯ ವಿವಿಧೆಡೆ ಜೀವನ ನಿರ್ವಹಣೆಗೆ ಬಂದಿದ್ದ ಪಶ್ಚಿಮ ಬಂಗಾಳ ರಾಜ್ಯದ 1,318 ವಲಸಿಗರನ್ನು ಬಳ್ಳಾರಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಹಾಗೂ ತೋರಣಗಲ್ಲುವಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಯಿತು.

ಬಳ್ಳಾರಿ: ಗುಜರಾತ್‌ನಿಂದ ಬಂದ ಕೊರೋನಾ ಪಾಸಿಟಿವ್‌ ವ್ಯಕ್ತಿ ಕೂಡ್ಲಿಗಿಯವನಲ್ಲ

ನಾಲ್ಕು ಬಿಸ್ಕಿಟ್‌ ಪ್ಯಾಕೆಟ್‌, ಎರಡು ಬ್ರೇಡ್‌ ಪ್ಯಾಕ್‌, ನಾಲ್ಕು ಲೀಟರ್‌ ನೀರು, ಎರಡು ಪ್ಯಾಕೆಟ್‌ ಆಹಾರ ಪೊಟ್ಟಣ, ಮಿರ್ಚಿ ಬಜಿ ಹಾಗೂ ಇನ್ನಿತರ ಆಹಾರ ಸಾಮಗ್ರಿಗಳ ಕಿಟ್‌ ಪ್ರತಿಯೊಬ್ಬ ವಲಸಿಗರಿಗೂ ಜಿಲ್ಲಾಡಳಿತದ ವತಿಯಿಂದ ನೀಡಲಾಯಿತು.