Asianet Suvarna News Asianet Suvarna News

ಸಾವಿನ ಶನಿವಾರ: ಪ್ರತ್ಯೇಕ ಅವಘಡದಲ್ಲಿ 12 ಜನರು ಬಲಿ..!

ಇಂದು ಸಾವಿನ ಶನಿವಾರ ಅಂತಾನೇ ಹೇಳಬಹುದು. ಯಾಕಂದ್ರೆ ರಾಜ್ಯದ ಎರಡು ಕಡೆ ಸಂಭವಿಸಿದ ಪ್ರತ್ಯೇಕ ಅವಘಡದಲ್ಲಿ 12 ಜನರು ಬಲಿಯಾಗಿದ್ದಾರೆ. 

12 dead in two separate incidents at Koppal and Belagavi district
Author
Bengaluru, First Published Jan 5, 2019, 6:23 PM IST

ಕೊಪ್ಪಳ/ಬೆಳಗಾವಿ, [ಜ.05]: ಇಂದು (ಶನಿವಾರ ) ಕೊಪ್ಪಳ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರತ್ಯೇಕ ಅವಘಡದಲ್ಲಿ 12 ಜನರು ಸಾವನ್ನಪ್ಪಿದ್ದಾರೆ. 

 ಒಂದೇ ಕುಟುಂಬದ 6 ಜನ ಆತ್ಮಹತ್ಯೆ
 ಕೊಪ್ಪಳದ ಮೇತಗಲ್ ಗ್ರಾಮದಲ್ಲಿಂದು ಒಂದೇ ಕುಟುಂಬದ 6 ಜನ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.

 ಶೇಖರಯ್ಯ ಬಿಡನಾಳ ಕುಟುಂಬದ ಹೆಂಡತಿ ನಾಲ್ವರು ಹೆಣ್ಣು ಮಕ್ಕಳು ಸೇರಿ 6 ಜನ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಪತ್ನಿಗೆ ಮಕ್ಕಳಿಗೆ ವಿಷ ಉಣಬಡಿಸಿ ನಂತನ ತಾನೂ ನೇಣಿಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ. 

ಊರಲ್ಲಿ ಸಹೋದರರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅಲ್ಲದೇ ಈ ಕುಟುಂಬ ಐದಾರು ಲಕ್ಷ ಸಾಲ ಮಾಡಿತ್ತು. ಈ ಕಾರಣದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

 ರಸ್ತೆ ಅಪಘಾತ 6 ಜನರ ದುರ್ಮರಣ
ಇನ್ನು ಬೆಳಗಾವಿ ಜಿಲ್ಲೆಯಲ್ಲೂ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ನಿಪ್ಪಾಣಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಅಪಘಾತ ಸಂಭವಿಸಿದೆ. 

ಲಾರಿ ಮತ್ತು ವ್ಯಾಗನರ್ ಕಾರು ಮುಖಾಮುಖಿ ಡಿಕ್ಕಿಯಾಗಿ  ಸ್ಥಳದಲ್ಲಿ 6 ಜನರು ಮೃತಪಟ್ಟಿದ್ದಾರೆ. ದುರಂತ ಅದ್ರೆ ಮೃತಪಟ್ಟ ಆರೂ ಜನರು ಒಂದೇ ಕುಟುಂಬದವರಾಗಿದ್ದಾರೆ.

Follow Us:
Download App:
  • android
  • ios