ಶಿರಸಿ ಸಾರಿಗೆ ಸಂಸ್ಥೆ ವಿಭಾಗಕ್ಕೆ 12 ಕೋಟಿ ನಷ್ಟ
ಮೊದಲನೇ ಲಾಕ್‌ಡೌನ್ ಅವಧಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗಕ್ಕೆ ಅಂದಾಜು 12 ಕೋಟಿ ನಷ್ಟವಾಗಿದೆ. ಮುಂದುವರಿದ ಲಾಕ್‌ಡೌನ್ ಸಂದರ್ಭದಲ್ಲಿ 400ಕ್ಕೂ ಹೆಚ್ಚು ಮುಂಗಡ ಟಿಕೆಟ್‌ಗಳು ರದ್ದಾಗಿವೆ.
ಶಿರಸಿ(ಏ.21): ಮೊದಲನೇ ಲಾಕ್‌ಡೌನ್ ಅವಧಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗಕ್ಕೆ ಅಂದಾಜು 12 ಕೋಟಿ ನಷ್ಟವಾಗಿದೆ. ಮುಂದುವರಿದ ಲಾಕ್‌ಡೌನ್ ಸಂದರ್ಭದಲ್ಲಿ 400ಕ್ಕೂ ಹೆಚ್ಚು ಮುಂಗಡ ಟಿಕೆಟ್‌ಗಳು ರದ್ದಾಗಿವೆ.
ಮಾ. 22ರ ಜನತಾ ಕಫä್ರ್ಯ ನಂತರ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಏ. 14ಕ್ಕೆ ಲಾಕ್‌ಡೌನ್ ಪೂರ್ಣಗೊಂಡು, ಬಸ್ ಸಂಚಾರ ಆರಂಭವಾಗಲಿದೆ ಎಂದು ಅಂದಾಜಿಸಿದ್ದರೂ, ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಲಾಕ್‌ಡೌನ್ ವಿಸ್ತರಣೆಯಾಯಿತು. ವಿಭಾಗ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಬಸ್ ಮಾರ್ಗಗಳಿದ್ದವು. ಅವುಗಳಿಂದ ಪ್ರತಿದಿನ ಸರಾಸರಿ ಬರುತ್ತಿದ್ದ . 50 ಲಕ್ಷ ಆದಾಯ ನಷ್ಟವಾಗಿದೆ. 6 ವಿಭಾಗಗಳ ಬಸ್‌ಗಳನ್ನು ಡಿಪೋದಲ್ಲಿ ನಿಲ್ಲಿಸಲಾಗಿದೆ ಎನ್ನುತ್ತಾರೆ ಸಾರಿಗೆ ಸಂಸ್ಥೆ ಅಧಿಕಾರಿಗಳು.
ಅಮೆರಿಕ ತೈಲ ಮಾರುಕಟ್ಟೆಯಲ್ಲಿ ಕೇಳರಿಯದ ಕುಸಿತ: ಬೆಲೆ ಶೂನ್ಯಕ್ಕಿಂತ ಕೆಳಗೆ!
ವಿವಿಧೆಡೆ ತೆರಳಲು ಯೋಚಿಸಿದ್ದ 400ಕ್ಕೂ ಹೆಚ್ಚು ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಿದ್ದರು. ಬಸ್ ರದ್ದಾಗಿದ್ದರಿಂದ ಟಿಕೆಟ್‌ಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಅಂದಾಜು . 2.5 ಲಕ್ಷ ನಷ್ಟವಾಗಿದೆ. ಈ ಹಣವನ್ನು ಗ್ರಾಹಕರಿಗೆ ಮರಳಿಸಲಾಗುವುದು. ಶಿರಸಿ ವಿಭಾಗದಲ್ಲಿ ಸುಮಾರು 2200 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ 2000ಕ್ಕೂ ಅಧಿಕ ಸಿಬ್ಬಂದಿಗೆ ಅಘೋಷಿತ ರಜೆ ನೀಡಲಾಗಿದೆ. ಡಿಪೋಗಳಲ್ಲಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸಲು, ಬಸ್ಸುಗಳನ್ನು ಚಾಲು ಮಾಡಿ ಬಂದ್ ಮಾಡಲು, ಪಾಳಿಯ ಪ್ರಕಾರ ಚಾಲಕರನ್ನು ನೇಮಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ಹೇಳುತ್ತಾರೆ.
ನ್ಯೂಯಾರ್ಕ್ ಕೊರೋನಾ ಸೋಂಕಿತರಿಗೆ ದೇವರಾದ ದಿಗ್ಗಜ ಮಿಲ್ಖಾ ಸಿಂಗ್ ಪುತ್ರಿ!
ಶಿರಸಿ ವಿಭಾಗದ ಆರು ಡಿಪೊಗಳಿಂದ ದಿನಕ್ಕೆ ಅಂದಾಜು . 50 ಲಕ್ಷ ಆದಾಯ ನಷ್ಟವಾಗುತ್ತಿದೆ. ತುರ್ತು ಸೇವೆಗೆ ಮಾತ್ರ ಸಿಬ್ಬಂದಿ ಹಾಜರಾಗುತ್ತಾರೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ತಿಳಿಸಿದ್ದಾರೆ.