12 ಹಸುಗಳು ನಿಗೂಢ ಸಾವು: ಇನ್ನೂ 60 ಅಸ್ವಸ್ಥ, ಆತಕಂದಲ್ಲಿ ಜನ

ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸಮೀಪದ ಹುತ್ತೂರಿನಲ್ಲಿ 12 ಹಸುಗಳು ನಿಗೂಢವಾಗಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಧಾರುಣ ಘಟನೆ ನಡೆದಿದೆ.

12 cow died 60 cows are ill in Chamarajnagar

ಚಾಮರಾಜನಗರ(ಜು.04): ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸಮೀಪದ ಹುತ್ತೂರಿನಲ್ಲಿ 12 ಹಸುಗಳು ನಿಗೂಢವಾಗಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಧಾರುಣ ಘಟನೆ ನಡೆದಿದೆ.

ಗ್ರಾಮದ ಶಿವಮೂರ್ತಿ, ಶಿವಮಲ್ಲನಾಯ್ಕ ಹಾಗೂ ವೆಂಕಟೇಶ್‌ ಎಂಬವರಿಗೆ ಸೇರಿದ ಜಾನುವಾರುಗಳು ಶುಕ್ರವಾರ ಗ್ರಾಮದ ಗೋಮಾಳಕ್ಕೆ ಮೇಯಲು ಬಿಟ್ಟಿದ್ದ ವೇಳೆ ಸತ್ತು ಬಿದ್ದಿವೆ. ಸಂಜೆಯಾದರೂ ಹಸುಗಳು ಮನೆಗೆ ಬರದಿದ್ದಾಗ ಮಾಲೀಕರು ಹುಡುಕಾಡಿದ್ದಾರೆ.

ಕೊಡಗಿನಲ್ಲಿ 50 ಮನೆ, ಖಾಸಗಿ ಆಸ್ಪತ್ರೆ ಸೀಲ್‌​ಡೌ​ನ್‌..!

ಈ ವೇಳೆ ಹಸುಗಳು ಸಾಲುಸಾಲಾಗಿ ಮೃತಪಟ್ಟುದ್ದು ಗೊತ್ತಾಗಿದೆ. ಅಲ್ಲದೇ ಹಲವು ಜಾಆನುವಾರುಗಳು ಅಸ್ವಸ್ಥಗೊಂಡು ನರಳಾಡುತ್ತಿದ್ದವು. ಪಶುವೈದ್ಯರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪಶುವೈದ್ಯರು ಅಸ್ವಸ್ಥಗೊಂಡಿದ್ದ 60 ಕ್ಕೂ ಹೆಚ್ಚು ಹಸುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಅದರಲ್ಲಿ ಹಲವು ಜಾನುವಾರುಗಳ ಸ್ಥಿತಿ ಚಿಂತಾಜನಕವಾಗಿದೆ.

Latest Videos
Follow Us:
Download App:
  • android
  • ios