Asianet Suvarna News Asianet Suvarna News

ಕೆಲಸದ ಒತ್ತಡ: 10 ವರ್ಷದಲ್ಲಿ 113 ಪಿಡಿಒಗಳ ಅಸಹಜ ಸಾವು

ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸುವ ಅಧಿಕಾರಿಗಳೇ ಹೆಚ್ಚಿದ ಒತ್ತಡದ ಕಾರಣ 10 ವರ್ಷದಲ್ಲಿ 113 ಪಿಡಿಓಗಳು 30-50 ವಯಸ್ಸಿನ ಅಂತರದಲ್ಲಿ ಅಕಾಲಿಕ ಸಾವನ್ನಪ್ಪಿದ್ದಾರೆ ಎಂದು ಸಚಿವರ ದಾಖಲೆಯೇ ಹೇಳುತ್ತಿದೆ. ಹಾಗಾಗಿ ಬೇಗ ಸಾವನ್ನಪ್ಪಬೇಕೆಂದವರು ಸರ್ಕಾರಿ ಕೆಲಸಕ್ಕೆ ಸೇರಿದರೆ ಸಾಕು ಎಂದ ಕೃಷ್ಣೇಗೌಡ 

113 Deaths of PDOs in 10 years in Karnataka grg
Author
First Published Oct 20, 2023, 11:30 PM IST

ಅರಕಲಗೂಡು(ಅ.20):  ಸರ್ಕಾರಿ ನೌಕರರಿಗೆ ಒತ್ತಡ ಹೆಚ್ಚಾಗಿದ್ದು, ಕಳೆದ 10 ವರ್ಷದಲ್ಲಿ 113 ಪಿಡಿಓಗಳು ಅಕಾಲಿಕ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಫದ ಜಿಲ್ಲಾಧ್ಯಕ್ಷರು ಕೃಷ್ಣೇಗೌಡ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಕೊತ್ತಲು ಗಣಪತಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಅರಕಲಗೂಡು ವತಿಯಿಂದ ಅರಕಲಗೂಡು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ನೌಕರ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸುವ ಅಧಿಕಾರಿಗಳೇ ಹೆಚ್ಚಿದ ಒತ್ತಡದ ಕಾರಣ 10 ವರ್ಷದಲ್ಲಿ 113 ಪಿಡಿಓಗಳು 30-50 ವಯಸ್ಸಿನ ಅಂತರದಲ್ಲಿ ಅಕಾಲಿಕ ಸಾವನ್ನಪ್ಪಿದ್ದಾರೆ ಎಂದು ಸಚಿವರ ದಾಖಲೆಯೇ ಹೇಳುತ್ತಿದೆ. ಹಾಗಾಗಿ ಬೇಗ ಸಾವನ್ನಪ್ಪಬೇಕೆಂದವರು ಸರ್ಕಾರಿ ಕೆಲಸಕ್ಕೆ ಸೇರಿದರೆ ಸಾಕು ಎಂದರು.

ಹಾಸನ ಲೋಕಸಭಾ ಅಭ್ಯರ್ಥಿಯಾಗಿ ದೇವೇಗೌಡರು ನಿಲ್ಲಲಿ: ಶಾಸಕ ಎ.ಮಂಜು

ವೈದ್ಯಕೀಯ ದಾಖಲೆಗಳ ಪ್ರಕಾರ ಎಲ್ಲಾ ಸರ್ಕಾರಿ ಇಲಾಖೆಗಳ ನೌಕರರ ಆಯಸ್ಸು 5-10 ವರ್ಷ ಕಡಿಮೆಯಾಗುತ್ತಿದೆ ಎಂದಿದ್ದಾರೆ. ಹಿಂದೆ ತಲೆನೋವು ಬಂದರೆ ತಲೆನೋವು ಔಷಧಿಗಾಗಿ ಊರೆಲ್ಲ ಹುಡುಕಾಡಿದರೂ ಸಿಗುತ್ತಿರಲಿಲ್ಲ. ಇಂದು ಯಾರ ಮನೆಯಲ್ಲಿ ನೋಡಿದರೂ ಮಾತ್ರೆಗಳು ಸಿಗುತ್ತವೆ. ದುಡಿದ ಹಣವನ್ನು ಮಾತ್ರೆಗೆ ಕಳೆಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾಗತಿಕ ಮಟ್ಟದಲ್ಲಿ ಮೊಬೈಲ್ ಬಳಕೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಯುವಕರ ಮೊಬೈಲ್ ಬಳಕೆ ಹೆಚ್ಚಾಗಿದೆ. ಇದನ್ನು ತಪ್ಪಿಸಬೇಕು. ಮಕ್ಕಳಿಗೆ ಮೊಬೈಲ್ ಕೊಡಿಸುವ ಬದಲು ಪುಸ್ತಕಗಳನ್ನು ನೀಡಬೇಕು. ಇಂದು ಮಕ್ಕಳು ಹೆಚ್ಚು ಅಂಕಪಡೆಯುತ್ತಿದ್ದಾರೆ ವಿನಃ ಸಂಸ್ಕಾರವಿಲ್ಲ. ಹೆಚ್ಚು ಅಂಕ ಪಡೆಯದಿದ್ದರೂ ಪರವಾಗಿಲ್ಲ. ಮಕ್ಕಳಿಗೆ ಸಂಸ್ಕಾರ ಕಲಿಸಿ, ಸಂಸ್ಕಾರವಂತರನ್ನಾಗಿ ಮಾಡಬೇಕು. ಜತೆಗೆ ಅಧಿಕಾರಿಗಳು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲೂಕು ಅಧ್ಯಕ್ಷ ಮಹೇಶ್, ತಾಪಂ ಮಾಜಿ ಅಧ್ಯಕ್ಷ ನರಸೇಗೌಡ, ರಾಜ್ಯ ಸರ್ಕಾರ ನೌಕರರ ಸಂಘದ ಕಾರ್ಯದರ್ಶಿ ಶಿವಸ್ವಾಮಿ, ಇಂದು, ದಸರಾ ಸಮಿತಿ ಕಾರ್ಯದರ್ಶಿ ರವಿಕುಮಾರ್, ತಾಪಂ ಪ್ರಭಾರ ಇಒ ಪ್ರಕಾಶ್, ಚಂದ್ರಕಾಂತ್ ಮತ್ತಿತರಿದ್ದರು.

ರಾಜ್ಯಾದ್ಯಂತ ಪಿಡಿಒಗಳ ಅಸಹಕಾರ ಚಳುವಳಿ:

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪಿಡಿಓಗಳು ಅಸಹಕಾರ ಚಳುವಳಿ ನಡೆಸುತ್ತಿದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಚಳುವಳಿ ಮಾಡಲಾಗುತ್ತಿದೆ. ಇದರಿಂದ ಸರ್ಕಾರದ ಸೌಲಭ್ಯಗಳು ಜನರಿಗೆ ತಲುವಲ್ಲಿ ವಿಳಂಬವಾಗುತ್ತಿದೆ. ಹೋರಾಟದ ನಡುವೆಯೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಒಂದು ವೇಳೆ ಸರ್ಕಾರ ಸ್ಪಂದಿಸದಿದ್ರೆ ಹೋರಾಟ ಮಾಡುವುದಾಗಿ ಹೇಳಿದ್ದಾರೆ. 

Follow Us:
Download App:
  • android
  • ios