ಮಂಡ್ಯ : 11 ಕಲ್ಲು ಗಣಿಗಾರಿಕೆ ರದ್ದು
- ಜಿಲ್ಲೆಯಲ್ಲಿ ಪರಿಸರ ವಿಮೋಚನಾ ಪತ್ರ ಪಡೆಯದಿದ್ದ ಜಿಲ್ಲೆಯ 11 ಕಲ್ಲು ಗಣಿ ಗುತ್ತಿಗೆ ರದ್ದು
- ಜು.31ರಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ
- ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಎಂ.ವಿ ಪದ್ಮಜಾ ತಿಳಿಸಿದ್ದಾರೆ.
ಮಂಡ್ಯ (ಆ.04): ಜಿಲ್ಲೆಯಲ್ಲಿ ಪರಿಸರ ವಿಮೋಚನಾ ಪತ್ರ ಪಡೆಯದಿದ್ದ ಜಿಲ್ಲೆಯ 11 ಕಲ್ಲು ಗಣಿ ಗುತ್ತಿಗೆಗಳನ್ನು ಜು.31ರಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ ಎಂದು ಜಿಲ್ಲಾ ಟಾಸ್ಕ್ ಫೊರ್ಸ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಸ್ ಅಶ್ವತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವದ ವಿಸ್ತರಿಸಿ ನೀಡಿದ ಕಲ್ಲು ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಸಂಬಮಧಪಟ್ಟ ಪ್ರಾದಿಕಾರದಿಂದ ಇದುವರೆಗೂ ಪರಿಸರ ವಿಮೋಚನಾ ಪತ್ರವನ್ನು ಪಡೆದು ಕಚೇರಿಗೆ ಹಾಜರುಪಡಿಸದಿರುವ 11 ಕಲ್ಲು ಗಣಿ ಗುತ್ತಿಗೆಗೆಳನ್ನು ರದ್ದುಪಡಿಸಲು ನರ್ಣಯಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಎಂ.ವಿ ಪದ್ಮಜಾ ತಿಳಿಸಿದ್ದಾರೆ.
ರಾಜ್ಯಪಾಲರನ್ನು ಭೇಟಿಯಾದ ಸುಮಲತಾ : 30 ದಿನದಲ್ಲಿ ಕ್ರಮದ ಭರವಸೆ
ಗಣಿ ಇಲಾಖೆ ನಿರ್ಧಾರ : ಪಾಂಡವಪುರ ತಾಲೂಕು ಬೇಬಿ ಬೆಟ್ಟದ ಕಾವಲು ಗ್ರಾಮದ ವ್ಯಪ್ತಿಯಲ್ಲಿನ 7 ಕ್ರಷನರ್ ಕಾನೂನು ಕಾಯಿದೆ 2011ರ ಕಲಂ 6(2)(ಬಿ) ಯಂತೆ ಕ್ರಷರ್ ಸುರಕ್ಷತಾ ವಲಯವು ಜಿಲ್ಲಾ ಮುಖ್ಯ ರಸ್ತೆ 100 ಮೀ ವ್ಯಾಪ್ತಿಯೊಲಗೆ ತರತಕ್ಕದ್ದಲ್ಲ. ಪರವಾನಗಿದಾರರಿಮದ ಕ್ರಷರ್ ಪರವಾನಗಿ ನೀಡಲಾಗಿರುವ ಪ್ರದೇಶವು ಲೋಕೋಪಯೋಗಿ ಇಲಾಖೆ ಹಾಗೂ ತಾಂತ್ರಿಕ ಅಧಿಕಾರಿಗಳ ವರದಿಯಂತೆ ಜಿಲ್ಲಾ ಮುಖ್ಯ ರಸ್ತೆಯ 100 ಮೀಟರ್ ಅಂತರದೊಳಗೆ ಬರುವುದರಿಂದ ಕ್ರಷರ್ ಘಟಕಗಳಿಗೆ ನೀಡಿರುವ ಫಾರಂ ಸಿ ಪರವಾನಗಿಯನ್ನು ರದ್ದುಪಡಿಸಿ ನಿರ್ಧಾರ ಕೈಗೊಳ್ಳಲಾಗಿದೆ.