ಬಸವನಬಾಗೇವಾಡಿ(ಫೆ.28): ಎತ್ತಿನ ಚಕ್ಕಡಿಗೆ 108 ಆಂಬ್ಯುಲೆನ್ಸ್‌ ಡಿಕ್ಕಿ ಹೊಡೆದ ಪರಿಣಾಮ ಚಕ್ಕಡಿಯಲ್ಲಿದ್ದ 6 ಜನರು ಗಾಯಗೊಂಡ ಘಟನೆ ಪಟ್ಟಣದ ಸಮೀಪವಿರುವ ಜೈನಾಪೂರ ಕ್ರಾಸ್‌ ಹತ್ತಿರ ಬುಧವಾರ ಸಂಜೆ ಸಂಭ​ವಿ​ಸಿದೆ.

ಚಕ್ಕ​ಡಿ​ಯ​ಲ್ಲಿದ್ದ ಬಸ​ವ​ನ​ಬಾ​ಗೇ​ವಾಡಿ ತಾಲೂ​ಕಿನ ಜೈನಾ​ಪೂರ ಗ್ರಾಮದ ಪದ್ಮವ್ವ ಮ್ಯಾಗೇರಿ (60), ಬಸವ್ವ ಕವಡಿ (55), ಹಣಮಂತ ಕವಡಿ (40), ನೀಲಮ್ಮ ಕವಡಿ (40), ಗುರುಬಾಯಿ ಕುಂಬಾರ (35), 108 ವಾಹ​ನ​ದ​ಲ್ಲಿದ್ದ ನಿಡ​ಗುಂದಿ ತಾಲೂ​ಕಿನ ಗೊಳ​ಸಂಗಿ ಗ್ರಾಮದ ಕಸ್ತೂರಿ​ಬಾಯಿ ಕೋಮದ (25) ಗಾಯ​ಗೊಂಡಿದ್ದು ಎಲ್ಲರೂ ಜಿಲ್ಲಾ​ಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ​ಯು​ತ್ತಿ​ದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೊಲದಿಂದ ಜೈನಾಪೂರ ಕ್ರಾಸ್‌ ಕಡೆಗೆ ಬರುತ್ತಿದ್ದ ಎತ್ತಿನ ಚಕ್ಕಡಿಗೆ ಬಸವನಬಾಗೇವಾಡಿ ಕಡೆಗೆ ಬರುತ್ತಿದ್ದ 108 ಆಂಬ್ಯುಲೆನ್ಸ್‌ ಡಿಕ್ಕಿ ಹೊಡೆದ ಪರಿ​ಣಾಮ ಈ ಅಪ​ಘಾತ ಸಂಭ​ವಿ​ಸಿದೆ. 108 ವಾಹನ ಚಾಲಕ ಎದುರಿಗೆ ಹೋಗುತ್ತಿದ್ದ ಚಕ್ಕಡಿಗೆ ನಿಷ್ಕಾಳಜಿಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾ​ನೆಂದು ಪದ್ಮವ್ವ ಮ್ಯಾಗೇರಿ, ಮಗನಾದ ಶಿವಪ್ಪ ಮ್ಯಾಗೇರಿ ಬಸವನಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಬಸವನಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.