Asianet Suvarna News Asianet Suvarna News

ಚಿತ್ರದುರ್ಗದಲ್ಲಿ ಭಾರೀ ಮಳೆ: ಸಿಡಿಲು ಬಡಿದು 106 ಕುರಿಗಳ ಸಾವು, ಕಂಗಾಲಾದ ಕುರಿಗಾಹಿಗಳು..!

ಅಂಜಿನಯ್ಯಗೆ ಸೇರಿದ 90 ಕುರಿಗಳು ಹಾಗೂ ಓಬಣ್ಣಗೆ ಸೇರಿದ 16 ಕುರಿಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. ಕುರಿಗಳ‌ ಮಾರಣಹೋಮದಿಂದ ಕುರಿಗಾಹಿಗಳು ಲಕ್ಷಾಂತರ ರೂ. ನಷ್ಟಕ್ಕೆ ಸಿಲುಕಿದ್ದಾರೆ.  
 
106 sheep were killed by lightning in chitradurga g
Author
First Published Aug 17, 2024, 9:11 AM IST | Last Updated Aug 17, 2024, 9:11 AM IST

ಚಿತ್ರದುರ್ಗ(ಆ.17):  ಸಿಡಿಲು ಬಡಿದು ಬರೋಬ್ಬರಿ 106 ಕುರಿಗಳು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದ ಬಳಿ ನಿನ್ನೆ(ಶುಕ್ರವಾರ) ನಡೆದಿದೆ. 

ಅಂಜಿನಯ್ಯಗೆ ಸೇರಿದ 90 ಕುರಿಗಳು ಹಾಗೂ ಓಬಣ್ಣಗೆ ಸೇರಿದ 16 ಕುರಿಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. ಕುರಿಗಳ‌ ಮಾರಣಹೋಮದಿಂದ ಕುರಿಗಾಹಿಗಳು ಲಕ್ಷಾಂತರ ರೂ. ನಷ್ಟಕ್ಕೆ ಸಿಲುಕಿದ್ದಾರೆ.  

ಬೆಂಗಳೂರು: 12 ಗಂಟೆಯಲ್ಲಿ 52MM ಮಳೆ : ಇನ್ನು 5 ದಿನ ಮುಂದುವರಿಯಲಿದೆ ವರ್ಷಧಾರೆ : ಯೆಲ್ಲೋ ಅಲರ್ಟ್

ಕಳೆದ ರಾತ್ರಿ ಜಾಜೂರು ಭಾಗದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಈ ವೇಳೆ ಸಿಡಿಲು ಬಡಿದು 106 ಕುರಿಗಳು ಸಾವನ್ನಪ್ಪಿವೆ. ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Latest Videos
Follow Us:
Download App:
  • android
  • ios