ಚಿತ್ರದುರ್ಗ(ಜು.02): ಕೊರೋ​ನಾ​ದಿಂದ ಆಸ್ಪ​ತ್ರೆಗೆ ದಾಖ​ಲಾ​ಗಿದ್ದ ರಾಜ್ಯದ ಮತ್ತೊಬ್ಬ 105 ವರ್ಷ​ದ ಮಹಿ​ಳೆ​ಯೊ​ಬ್ಬರು ಗುಣ​ಮು​ಖ​ರಾಗಿ ಆಸ್ಪ​ತ್ರೆ​ಯಿಂದ ಬಿಡು​ಗ​ಡೆ​ಯಾ​ಗಿ​ದ್ದಾ​ರೆ. ಈ ಮೂಲಕ ಕೊರೋ​ನಾ​ದಿಂದ ಗುಣ​ಮು​ಖ​ರಾದ ರಾಜ್ಯದ ಅತಿ ಹಿರಿಯ ವ್ಯಕ್ತಿ ಎಂಬ ಹೆಗ್ಗ​ಳಿ​ಕೆಗೆ ಈಕೆ ಪಾತ್ರ​ವಾ​ಗಿ​ದ್ದಾ​ರೆ.

ಈಚಲಾಗೇನಹಳ್ಳಿಯ ಸಿದ್ದಮ್ಮ(105) ಕೊರೋ​ನಾ​ದಿಂದ ಗುಣ​ಮು​ಖ​ರಾದ ಶತಾ​ಯುಷಿ. ಡಿಎಆರ್‌ ಪೊಲೀಸ್‌ ಪೇದೆ ಆಗಿ​ರುವ ತಮ್ಮ ಮೊಮ್ಮಗನ ಜತೆ ಚಿತ್ರದುರ್ಗದ ಪೊಲೀಸ್‌ ವಸತಿ ಗೃಹದಲ್ಲಿದ್ದರು.

ದೇಶದಲ್ಲಿ 10 ಲಕ್ಷ ಸೋಂಕಿತರು ಗುಣಮುಖ..! ಇನ್ನೂ ಹೆಚ್ಚಾಗಲಿದೆ ಸೋಂಕಿತರ ಸಂಖ್ಯೆ

ಮೊಮ್ಮ​ಗ​ನಿಗೆ ಕೊರೋನಾ ತಗು​ಲಿದ್ದು, ಅದರೊಂದಿಗೆ ಸಿದ್ದಮ್ಮ ಅವ​ರಿಗೂ ಜು.27ರಂದು ಕೋವಿಡ್‌ ದೃಢಪಟ್ಟಿತ್ತು. ತಕ್ಷಣ ಸಿದ್ದ ಮ್ಮ ಅವ​ರನ್ನು ಕೋವಿಡ್‌ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಶನಿ​ವಾರ ಮತ್ತೆ ತಪಾಸಣೆಗೊಳಪಡಿಸಿದಾಗ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ವಿಶೇ​ಷ​ವೆಂದರೆ 105 ವರ್ಷದ ಈ ಮಹಿ​ಳೆಗೆ ಸಾಮಾ​ನ್ಯ​ವಾಗಿ ವಯೋ​ಸ​ಹ​ಜ​ವಾಗಿ ಕಾಡುವ ಮಧು​ಮೇ​ಹ​ವಾ​ಗಲಿ, ಹೃದಯ ಸಂಬಂಧಿಸಿದ ಯಾವುದೇ ಕಾಯಿ​ಲೆ​ಗ​ಳಿ​ಲ್ಲ.