ಪ್ರಿಮಿಯಂ ಪಾರ್ಕಿಂಗ್ ಪಡೆದವರಿಗೆ ಮಾಲ್ ಮುಂಭಾಗದಲ್ಲಿ ನಿಲ್ಲಿಸುವ ಅವಕಾಶ ದೊರಕುತ್ತದೆ. ಅದು ಬಿಟ್ಟರೆ ನೆಟ್ಟಿಗರು ಚರ್ಚಿಸಿದಂತೆ ಯಾವುದೇ ವಾಷ್ ಅಥವಾ ಇನ್ಯಾವುದೇ ಫೆಸಿಲಿಟಿ ದೊರಕುವುದಿಲ್ಲ. ಇಲ್ಲಿನ ಸಿಬ್ಬಂದಿ ಹೇಳುವಂತೆ ವಾರಕ್ಕೆ ಒಂದೋ ಎರಡೋ ಕಾರುಗಳು ಈ ಸೌಲಭ್ಯವನ್ನು ಪಡೆಯುತ್ತವೆಯಂತೆ.
ಸ್ವಸ್ತಿಕ್ ಕನ್ಯಾಡಿ, ಏಷಿಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು(ಮಾ.08): ಸಿಲಿಕಾನ್ ಸಿಟಿ ಬೆಂಗಳೂರು ವೇಗವಾಗಿ ಅಭಿವೃದ್ದಿಯತ್ತ ಮುನ್ನುಗ್ಗುತ್ತಿರುವ ದೇಶದ ಪ್ರಮುಖ ನಗರಗಳಲ್ಲೊಂದು. ಇಂತಹ ಬೆಂಗಳೂರಿನಲ್ಲಿ ಪಾರ್ಕಿಂಗ್ ಚಾರ್ಜ್ ಗಂಟೆಗೆ 1000 ರೂ ಎಂಬ ಪೋಸ್ಟ್ ಇತ್ತೀಚೆಗೆ ವೈರಲ್ ಆಗಿತ್ತು. ಯುಬಿ ಸಿಟಿ ಮಾಲ್‌ನದ್ದು ಎನ್ನಲಾಗುತ್ತಿದ್ದ ಈ ಪೋಸ್ಟ್ ನಿಜವಾಗಿಯೂ ಅಲ್ಲಿಯದ್ದೇನಾ? ಹಾಗಿದ್ದರೆ ಗಂಟೆಗೆ ಒಂದು ಸಾವಿರ ಪಡೆಯುತ್ತಿರುವುದು ನಿಜವೇ? ಪ್ರೀಮಿಯಂ ಪಾರ್ಕಿಂಗ್‌ನಲ್ಲಿ ಏನೆಲ್ಲಾ ಫೆಸಿಲಿಟಿ ಇದೆ ಈ ಸ್ಟೋರಿ ಓದಿ....
ಹೌದು, ಕಳೆದ ಒಂದೆರಡು ದಿನಗಳಿಂದ ನೆಟ್ಟಿಗರ ಕಣ್ಣು ಕುಕ್ಕಿದ್ದ ಈ ಪೋಸ್ಟರ್ ಅಸಲಿಗೆ ಯುಬಿ ಸಿಟಿ ಮಾಲ್ ಮುಂಭಾಗದ್ದೇ. ಆದರೆ ಜನ ಅಂದುಕೊಂಡಷ್ಟು ಕಾಸ್ಟ್ಲಿ ಪಾರ್ಕಿಂಗ್ ಚಾರ್ಜಸ್ ಎಲ್ಲರಿಗೂ ಇರೋಲ್ಲ. ಈ ಬಗ್ಗೆ ಏಷಿಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿರುವ ಮಾಲ್ ಸಿಬ್ಬಂದಿ ಮಾಲ್‌ನಲ್ಲಿ ಜನರಲ್ ಪಾರ್ಕಿಂಗ್‌ಗಾಗಿ ಬರುವವರಿಗೆ ನಾಲ್ಕು ಗಂಟೆಗೆ ನೂರು ರೂಪಾಯಿ ಮಾತ್ರ ಚಾರ್ಜ್ ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ 1 ಗಂಟೆ ಕಾರು ಪಾರ್ಕಿಂಗ್ ಗೆ 1 ಸಾವಿರ ಫೀಸ್, ಶಾಕ್ ಆದ ಸಿಲಿಕಾನ್ ಸಿಟಿ ಮಂದಿ
ಹಾಗಾದರೆ ಗಂಟೆಗೆ ಸಾವಿರ ರೂಪಾಯಿ ಯಾಕೆ?
ಯುಬಿ ಸಿಟಿ ಮಾಲ್ ಬೆಂಗಳೂರಿನ ಪ್ರತಿಷ್ಠಿತ ಮಾಲ್ ಗಳಲ್ಲಿ ಒಂದು. ಇಲ್ಲಿ ದಿನನಿತ್ಯ ಬೇರೆ ಬೇರೆ ವರ್ಗದ ಜನ ಶಾಪಿಂಗ್ ಬರುತ್ತಾರೆ. ಹೀಗೆ ಬರುವ ಜನರ ಪೈಕಿ ಕೆಲವು ಅಗರ್ಭ ಶ್ರೀಮಂತರು ಐಷಾರಾಮಿ ಕಾರುಗಳಲ್ಲಿ ಬರುತ್ತಾರೆ. ಹೀಗೆ ಬರುವ ಗ್ರಾಹಕರು ತಮ್ಮ ಐಷಾರಾಮಿ ಕಾರನ್ನು ಅಥವಾ ಕಾರಿನ ಕೀಯನ್ನು ಬೇರೆಯವರಿಗೆ ಕೊಡ ಬಯಸುವುದಿಲ್ಲ. ಕೆಲವೊಮ್ಮೆ ತಮ್ಮ ಕಾರುಗಳನ್ನು ಎಲ್ಲರೂ ನೋಡಲಿ ಎಂದೂ ಬಯಸುತ್ತಾರೆ. ಇಂತಹ ವರ್ಗದ ಜನರಿಗಾಗಿ ಮಾಲ್ ಮುಂಭಾಗದಲ್ಲಿ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು ಇಲ್ಲಿ ಪಾರ್ಕಿಂಗ್ ಮಾಡಬಯಸುವವರು ಗಂಟೆಗೆ ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ.
ಪ್ರಿಮಿಯಂ ಪಾರ್ಕಿಂಗ್‌ನಲ್ಲಿ ಏನೆಲ್ಲಾ ಫೆಸಿಲಿಟಿ ದೊರಕುತ್ತದೆ?
ಪ್ರಿಮಿಯಂ ಪಾರ್ಕಿಂಗ್ ಪಡೆದವರಿಗೆ ಮಾಲ್ ಮುಂಭಾಗದಲ್ಲಿ ನಿಲ್ಲಿಸುವ ಅವಕಾಶ ದೊರಕುತ್ತದೆ. ಅದು ಬಿಟ್ಟರೆ ನೆಟ್ಟಿಗರು ಚರ್ಚಿಸಿದಂತೆ ಯಾವುದೇ ವಾಷ್ ಅಥವಾ ಇನ್ಯಾವುದೇ ಫೆಸಿಲಿಟಿ ದೊರಕುವುದಿಲ್ಲ. ಇಲ್ಲಿನ ಸಿಬ್ಬಂದಿ ಹೇಳುವಂತೆ ವಾರಕ್ಕೆ ಒಂದೋ ಎರಡೋ ಕಾರುಗಳು ಈ ಸೌಲಭ್ಯವನ್ನು ಪಡೆಯುತ್ತವೆಯಂತೆ.
