ದೀಪಾವಳಿ ಅಮಾವಾಸ್ಯೆ : ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತಾದಿಗಳು

ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವನ್ನು ಮಂಗಳವಾರ ಸಾವಿರಾರು ಮಂದಿ ಭಕ್ತರು ದೀಪಾವಳಿ ಅಮಾವಾಸ್ಯೆ ಅಂಗವಾಗಿ ಸುಮಾರು 3,600 ಮೆಟ್ಟಲುಗಳನ್ನೇರಿ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

1000 Of Devotees Visits Shidlu Mallikarjuna swami Temple snr

 ಬೆಟ್ಟದಪುರ (ಅ.26): ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವನ್ನು ಮಂಗಳವಾರ ಸಾವಿರಾರು ಮಂದಿ ಭಕ್ತರು ದೀಪಾವಳಿ ಅಮಾವಾಸ್ಯೆ ಅಂಗವಾಗಿ ಸುಮಾರು 3,600 ಮೆಟ್ಟಲುಗಳನ್ನೇರಿ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮಠಾಧೀಶರು ಹಾಗೂ ಗಣ್ಯರು ಬೆಳಗಿನ ಜಾವ ಸುಮಾರು 6ರಿಂದಲೆ ಬೆಟ್ಟವೇರಲು ಆರಂಭಿಸಿದರು. ಇದೇ ವೇಳೆ ಮಂಗಳೂರು ಜಿಲ್ಲಾ ನ್ಯಾಯಾಧೀಶರಾದÜ ಮಲ್ಲಿಕಾರ್ಜುನ ಅವರು ತಮ್ಮ ಮನೆ ದೇವರಾದ ಪ್ರಯುಕ್ತ ಕುಟುಂಬ ಸಮೇತರಾಗಿ ಶ್ರೀ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಇವರ ಜೊತೆಯಲ್ಲಿ ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ ಸಹ ವಿಶೇಷ ಪೂಜೆ ಸಲ್ಲಿಸಿ ಜನರಿಗೆ ಆರ್ಶಿವಚನ ನೀಡಿದರು.

ನಂತರ ಸ್ವಾಮೀಜಿ ಮಾತನಾಡಿ, ದೇವರು ಮತ್ತು ಸಂಸ್ಕಾರ ಮತ್ತು ಪ್ರಕೃತಿ ಎಂಬುದು ಭಾರತದಲ್ಲಿ ಮಾತ್ರ ಸಿಗುತ್ತದೆ, ಭಕ್ತಿಯಿಂದ ದೇವರನ್ನು ಸಂಸ್ಕಾರ ಮಾಡಿ ಸ್ಮರಿಸುವ ನಾಡು ಕರುನಾಡು, ಪ್ರಕೃತಿಯಿಂದ ಮನುಷ್ಯನ ಒತ್ತಡವನ್ನು ಕಡಿಮೆ ಮಾಡಲು ಒಂದೇ ಔಷಧ. ಆದ್ದರಿಂದ ಪ್ರಕೃತಿಯನ್ನು ರಕ್ಷಿಸಿ ಪ್ರಕೃತಿ ಮಾತೆಗೆ ಗೌರವ ನೀಡಬೇಕು ಎಂದು ತಿಳಿಸಿದರು.

ಮಂಗಳೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಮಾತನಾಡಿ, ಸುಮಾರು 400 ವರ್ಷಗಳ ಪ್ರಾಚೀನ ಕಾಲದಲ್ಲಿ ಚಂಗಾಳ್ವರು ಈ ದೇವಾಲಯವನ್ನು ಕಟ್ಟಿದರು, ಆದರೆ ಇದೀಗ ನಿರ್ಲಕ್ಷ ್ಯದಿಂದ ಅಳಿವಿನ ಅಂಚಿಗೆ ಬಂದು ನಿಂತಿದೆ, ನಮ್ಮ ಪೂರ್ವಿಕರು ಹಾಕಿಕೊಟ್ಟಂತಹ ಕಲೆ ಮತ್ತು ಸಂಸ್ಕೃತಿಗೆ ಹೆಸರಾದ ಬೆಟ್ಟದಪುರದ ಶಿಡ್ಲು ಮಲ್ಲಿಕಾರ್ಜುನ ದೇವಾಲಯದಲ್ಲಿ ಹಲವಾರು ಚಿತ್ರಕಲೆಗಳು ಹಾಗೂ ಬೇಲೂರು ಹಳೇಬೀಡು ಮೀರಿಸುವಂಥ ದೇವಾಲಯಗಳು ಇಲ್ಲಿ ನಿರ್ಮಿಸಲ್ಪಟ್ಟಿದ್ದು, ನಿರ್ಲಕ್ಷ್ಯದಿಂದ ಅಳಿವಿನಂಚಿಗೆ ಬಂದಿವೆ, ಸರ್ಕಾರ ಕೂಡಲೇ ಇತ್ತ ಗಮನಹರಿಸಿ ಬೆಟ್ಟದಪುರದ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಮಠವನ್ನು ಜೀರ್ಣೋದ್ಧಾರ ಮಾಡಲು ಸಲಹೆ ನೀಡುವುದಾಗಿ ಹೇಳಿದರು.

ಈ ಬೆಟ್ಟಕ್ಕೆ ಮೂಲ ಸೌಕರ್ಯ ಒದಗಿಸಲು ಭಕ್ತಾದಿಗಳು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡದಿದ್ದರೆ ಸಂಬಂಧಪಟ್ಟತಾಲೂಕು ಆಡಳಿತ ಸಮಿತಿಯನ್ನು ರಚಿಸಿ ಇದರ ಅಭಿವೃದ್ಧಿಗೆ ಗಮನಹರಿಸಬೇಕೆಂದು ಅವರು ಸರ್ಕಾರಕ್ಕೆ ಸಲಹೆ ನೀಡಿದರು.

ಸಾವಿರಾರು ಜನರು ಅಮಾವಾಸ್ಯೆ ಅಂಗವಾಗಿ 5ಕ್ಕೆ ಪೂಜೆ ಆರಂಭಿಸಿದರು. ಅಲ್ಲದೆ ಮಧ್ಯಾಹ್ನ 1ಕ್ಕೆ ಗ್ರಹಣ ಪ್ರಾರಂಭವಾಗುವುದರಿಂದ ದೇವರ ದರ್ಶನಕ್ಕೆ ದೇವಾಲಯದ ಸಮಿತಿಯವರು ಬಾಗಿಲು ಹಾಕುವುದರಿಂದ ಭಕ್ತಾದಿಗಳು ಬೆಟ್ಟಹತ್ತಿ ಪ್ರಕೃತಿ ಸೌಂದರ್ಯ ಸವಿದರು.

ಎಸ್‌ಐ ಪ್ರಕಾಶ ಎತ್ತಿನಮನಿ ಅವರ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸರು ಆಯಕಟ್ಟಿನ ಜಾಗಗಳಲ್ಲಿ ಬಂದೋಬಸ್‌್ತ ಮಾಡಿದ್ದರು.

ಅ. 26ರ ಬುಧವಾರ ಬಲಿಪಾಡ್ಯಮಿ ಅಂಗವಾಗಿ ಬೆಟ್ಟದಪುರದ ಐತಿಹಾಸಿಕ ದಿಬ್ಬದ ಮೇಲಿನ ದೀಪೋತ್ಸವ ಎಂಬ ಹೆಸರಿನ ದೀವಟಿಕೆ ಉತ್ಸವ ಆರಂಭವಾಗಲಿದ್ದು, ಲಕ್ಷಾಂತರ ಜನರು ಇದರಲ್ಲಿ ಭಾಗವಹಿಸಲಿದ್ದಾರೆ. ಮಂಗಳವಾರ ರಾತ್ರಿ ಬೆಟ್ಟದಪುರದ ಮಧ್ಯಭಾಗದಲ್ಲಿರುವ ದೇವಸ್ಥಾನದಿಂದ ಬಸವೇಶ್ವರ ಮತ್ತು ಗಿರಿಜಮ್ಮ ಮಲೆಯ ದೇವರನ್ನು ಗ್ರಾಮದ ಉಪ್ಪಾರ ಜನಾಂಗದವರು ಉತ್ಸವವು ಹತ್ತು ಬೆಟ್ಟದ ಮೇಲೆ ಪೂಜೆ ಮಾಡಿ ನಂತರ ಬೆಟ್ಟದ ಕೆಳಗೆ ತಂದು ಬೆಟ್ಟದಪುರದ ಮನೆಗಳ ಮುಂದೆ ಹಸಿರು ಚಪ್ಪರಗಳನ್ನು ಹಾಕಿ ಮಲ್ಲಯ್ಯ, ಗಿರಿಜಮ್ಮ ಹಾಗೂ ಬೆಳ್ಳಿ ಬಸಪ್ಪನಿಗೆ ಪೂಜೆ ಸಲ್ಲಿಸುತ್ತಾರೆ.

ಬೆಟ್ಟದ ಮೇಲೆ ಪ್ರಧಾನ ಅರ್ಚಕ ಕೃಷ್ಣ ಪ್ರಸಾದ್‌ ಅವರು ಸಿಡಿಲು ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಅಲಂಕಾರ ಮತ್ತು ಪೂಜೆ ನೆರವೇರಿಸಿದರು. ಇಂದು ಸಹ ಬೆಟ್ಟವನ್ನತ್ತಿದ ಸಾವಿರಾರು ಭಕ್ತಾದಿಗಳಿಗೆ ಬೆಟ್ಟದ ತಪ್ಪಲಿನಲ್ಲಿ ಅನ್ನದಾನವನ್ನು ಏರ್ಪಡಿಸಿತ್ತು. ಕೆ.ಆರ್‌.ನಗರ ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಪತ್ರಕರ್ತ ಶಿವದೇವ್‌, ಬಿ.ಸಿ. ರಾಜೇಂದ್ರ, ಶಿಲ್ಪಾ ಮಂಜುನಾಥ್‌, ಸದಾನಂದ, ಭರತ್‌, ಮಂಜುನಾಥ್‌, ವಸಂತ್‌, ಕುಮಾರ್‌, ಜಗದೀಶ್‌, ಶಿವಕುಮಾರ್‌ ಇದ್ದರು.

Latest Videos
Follow Us:
Download App:
  • android
  • ios