Asianet Suvarna News Asianet Suvarna News

ಕೊಪ್ಪಳ: 100 ಕೋಟಿ ಮೊತ್ತದ ಅಂಜನಾದ್ರಿ ಮಾಸ್ಟರ್‌ ಪ್ಲಾನ್‌ ರೆಡಿ

ಅಂಜನಾದ್ರಿ ಭೇಟಿ ಬೆನ್ನಲ್ಲೇ ಯೋಜನೆ ಅಂತಿಮಗೊಳಿಸಿದ ಸಿಎಂ ಬೊಮ್ಮಾಯಿ, ಕಾಮಗಾರಿಗೆ 8 ತಿಂಗಳ ಗಡುವು

100 Crore Anjanadri Master Plan Ready grg
Author
Bengaluru, First Published Aug 3, 2022, 12:00 AM IST

ಕೊಪ್ಪಳ(ಆ.03):  ಅಂಜನಾದ್ರಿಯನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಗೊಳಿಸಲು ಪಣ ತೊಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 8 ತಿಂಗಳೊಳಗಾಗಿ 100 ಕೋಟಿ ಮಾಸ್ಟರ್‌ ಪ್ಲಾನ್‌ ಕಡ್ಡಾಯವಾಗಿ ಜಾರಿ ಮಾಡುವಂತೆ ಸೂಚಿಸಿದ್ದಾರೆ.

ಸೋಮವಾರ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಆನೆಗೊಂದಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಈ ಸೂಚನೆ ನೀಡಿದ್ದಾರೆ. ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ 100 ಕೋಟಿಗೆ ಮಾಸ್ಟರ್‌ ಪ್ಲಾನ್‌ ರೂಪಿಸಲಾಗಿದ್ದು, ಅದರಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಸುಮಾರು 600 ಕೊಠಡಿಗಳ ಬೃಹತ್‌ ಪ್ರವಾಸಿ ಮಂದಿರದ ನಿರ್ಮಾಣದ ಅಗತ್ಯವಿದ್ದು, ಇದಕ್ಕೆ .21 ಕೋಟಿ ನಿಗದಿ ಮಾಡಲಾಗಿದೆ. ಪ್ರಥಮ ಹಂತದಲ್ಲಿ ಸುಮಾರು 62 ಎಕರೆ ಭೂಮಿ ಸ್ವಾಧೀನಕ್ಕೆ ರೈತರೊಂದಿಗೆ ಮಾತುಕತೆ ಮಾಡಲಾಗಿದೆ. ಇದಕ್ಕಾಗಿ .29 ಕೋಟಿ ಅನುದಾನ ಕಾಯ್ದಿರಿಸಲಾಗಿದೆ ಎಂದು ತಿಳಿದುಬಂದಿದೆ.

Photos: ಆಂಜನಾದ್ರಿ ಹನುಮನಿಗೆ ಸಿಎಂ ಸಾಷ್ಟಾಂಗ ನಮಸ್ಕಾರ

ಮಾಸ್ಟರ್‌ ಪ್ಲಾನ್‌ನಲ್ಲಿ ಏನೇನಿದೆ?

600 ಕೊಠಡಿಯ ಪ್ರವಾಸಿಮಂದಿರ: .21 ಕೋಟಿ
62 ಎಕರೆ ಭೂಸ್ವಾಧೀನ: .29 ಕೋಟಿ
ಅಡುಗೆ ಹಾಲ್‌: .5.32 ಕೋಟಿ
ಸಮುದಾಯ ಭವನ: .1.44 ಕೋಟಿ
ಪಾರ್ಕಿಂಗ್‌ ವ್ಯವಸ್ಥೆ: .6.46 ಕೋಟಿ
ಶಾಪಿಂಗ್‌ ಕಾಂಪ್ಲೆಕ್ಸ್‌: .3.36 ಕೋಟಿ
ದೇವಸ್ಥಾನ ಪ್ರದೇಶ ಖಾಲಿ ಜಾಗ: .4.46 ಕೋಟಿ
ಪ್ರದಕ್ಷಿಣೆ ಪಥ: .1.93 ಕೋಟಿ
ಸ್ನಾನ ಘಟ್ಟ: .5.76 ಕೋಟಿ
ವಿಐಪಿ ಅತಿಥಿಗೃಹ: .3.04 ಕೋಟಿ
ಸಿಬ್ಬಂದಿ ಕ್ವಾರ್ಟರ್ಸ್‌: .8.85 ಕೋಟಿ
 

Follow Us:
Download App:
  • android
  • ios