Photos: ಆಂಜನಾದ್ರಿ ಹನುಮನಿಗೆ ಸಿಎಂ ಸಾಷ್ಟಾಂಗ ನಮಸ್ಕಾರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು(ಸೋಮವಾರ) ವಿಶ್ವ ಪ್ರಸಿದ್ದ ಅಂಜಿನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದರು. ಕೊಪ್ಪಳ ಜಿಲ್ಲೆಯಲ್ಲಿರುವ ಅಂಜಿನಾದ್ರಿಗೆ ಆಗಮಿಸಿ ಬೆಟ್ಟದ ಕೆಳಗೆ ಹನುಮಂತನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ಮಂತ್ರಗಳ ಪಠಣ ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು(ಸೋಮವಾರ) ವಿಶ್ವ ಪ್ರಸಿದ್ದ ಅಂಜಿನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದರು
ಸಿಎಂ ಬಸವರಾಜ ಬೊಮ್ಮಾಯಿ ಅವರು ಅಂಜಿನಾದ್ರಿ ಬೆಟ್ಟದ ಕೆಳಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತಿಯಿಂದ ಸಾಷ್ಟಾಂಗ ನಮಸ್ಕಾರ ಹಾಕಿ ಗಮನ ಸೆಳೆದರು.
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಆಂಜಿನೇಯನ ಬೆಳ್ಳಿ ಮೂರ್ತಿ ಕಾಣಿಕೆಯಾಗಿ ನೀಡಿದರು.
ಅಂಜಿನಾದ್ರಿ ಆಡಳಿತ ಮಂಡಳಿಯಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸನ್ಮಾನ ಮಾಡಿ ಆಂಜಿನೇಯನ ಭಾವಚಿತ್ರ ಕಾಣಿಕೆಯಾಗಿ ನೀಡಿದರು.
ಅಭಿವೃದ್ಧಿ ಕೈಗೊಳ್ಳಲು ಕೊಪ್ಪಳ ಜಿಲ್ಲೆಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾಗೇ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನುಮ ಹುಟ್ಟಿರುವ ಕುರಿತು ಬೇರೆ- ಬೇರೆ ರಾಜ್ಯಗಳಲ್ಲಿ ವಿವಾದಗಳು ಎದ್ದಿರುವುದು ಸರಿಯಲ್ಲ. ಅಂಜನಾದ್ರಿಯಲ್ಲೇ ಹನುಮ ಜನಿಸಿದ್ದಕ್ಕೆ ಸಾಕಷ್ಟು ಪುರಾವೆಗಳಿವೆ. ಹೀಗಾಗಿ ಹನುಮ ಹುಟ್ಟಿದ್ದು ಅಂಜನಾದ್ರಿಯಲ್ಲೇ ಎಂದು ಮತ್ತೊಮ್ಮೆ ಹೇಳಿದರು.
ಇದೇ ವೇಳೆ ಬಸವರಾಜ ಬೊಮ್ಮಾಯಿ ಅವರು ಅಂಜನಾದ್ರಿ ಬೆಟ್ಟದ ಬಳಿ ಇರುವ ದುರ್ಗಾದೇವಿ ಬೆಟ್ಟದ ಹತ್ತಿರದ ಗೋ ಶಾಲೆಗೆ ಭೇಟಿ ನೀಡಿದರು.