ವಿಜಯಪುರದಲ್ಲಿ ವೈರಸ್ ಆರ್ಭಟ: ಬಾಲಮಂದಿರದ 10 ಬಾಲಕಿಯರಿಗೆ ಕೊರೋನಾ
ಜಿಲ್ಲಾ ಪಂಚಾಯತ್ ಬಳಿ ಇರುವ ಬಾಲಕಿಯರ ಬಾಲಮಂದಿರ| ಬಾಲಮಂದಿರದಲ್ಲಿದ್ದ ಎಲ್ಲರಿಗೂ ಕೋವಿಡ್ ಟೆಸ್ಟ್| ವೈರಸ್ ತಗುಲಿದ 10 ಬಾಲಕಿಯರಿಗೂ ಹೋಮ್ ಐಸೋಲೇಷನ್| 32 ವಿದ್ಯಾರ್ಥಿಗಳು, 12 ಸಿಬ್ಬಂದಿಗಳ ಗಂಟಲು ದ್ರವ ಮಾದರಿ ಸಂಗ್ರಹ|
ವಿಜಯಪುರ(ಏ.14): ಸರ್ಕಾರಿ ಬಾಲಮಂದಿರದ 10 ಬಾಲಕಿಯರಿಗೆ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಬಾಲಮಂದಿರ ನಿರ್ಬಂಧಿತ ಪ್ರದೇಶ ಎಂದು ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ್ ಅವರು ಘೋಷಣೆ ಮಾಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಬಳಿಯ ಬಾಲಕಿಯರ ಬಾಲಮಂದಿರದಲ್ಲಿರುವ ಒಟ್ಟು 40 ವಿದ್ಯಾರ್ಥಿನಿಯರು, 12 ಸಿಬ್ಬಂದಿ ವಾಸವಿವಾಗಿದ್ದಾರೆ. ಬಾಲಮಂದಿರದಲ್ಲಿದ್ದ ಎಲ್ಲರಿಗೂ ಗಣೇಶನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಟೆಸ್ಟ್ ನಡೆಸಲಾಗಿತ್ತು. ಈ ಪೈಕಿ 10 ಬಾಲಕಿಯರಿಗೆ ಕೊರೋನಾ ದೃಢಪಟ್ಟಿದೆ. ವೈರಸ್ ತಗುಲಿದ 10 ಬಾಲಕಿಯರಿಗೂ ಹೋಮ್ ಐಸೋಲೇಷನ್‌ನಲ್ಲಿ ಇಡಲಾಗಿದೆ ಎಂದು ತಿಳಿದುಬಂದಿದೆ.
ವಿಜಯಪುರ: ಅನೈತಿಕ ಸಂಬಂಧ ಶಂಕೆ, ರೌಡಿಶೀಟರ್ ಕೊಲೆ
ಇನ್ನುಳಿದ 32 ವಿದ್ಯಾರ್ಥಿಗಳು, 12 ಸಿಬ್ಬಂದಿಗಳ ಗಂಟಲು ದ್ರವ ಮಾದರಿಯನ್ನ ಸಂಗ್ರಹ ಮಾಡಲಾಗಿದೆ. ರಿಪೋರ್ಟ್ ನಾಳೆ ಬರಲಿದೆ.