Asianet Suvarna News Asianet Suvarna News

ಮಂಡ್ಯದ ಇಂಜಿನಿಯರ್ ವಿಧಾನಸೌಧಕ್ಕೆ ತಂದಿದ್ದ 10 ಲಕ್ಷ ನಗದು ಜಪ್ತಿ: ನೊಟೀಸ್‌ ಜಾರಿ

ವಿಧಾನಸೌಧದಲ್ಲಿ ಅಧಿಕೃತ ದಾಖಲೆಗಳಿಲ್ಲದ 10 ಲಕ್ಷ ರೂ. ನಗದು ಹಣ ತೆಗೆದುಕೊಂಡು ಹೋಗುತ್ತಿದ್ದ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ ಅವರಿಂದ ಪೊಲೀಸರು ಹಣವನ್ನು ಜಪ್ತಿ ಮಾಡಿದ್ದಾರೆ.

10 lakh rupees cash brought by Mandya Engineer to Vidhana Soudha was confiscated notice issued sat
Author
First Published Jan 5, 2023, 12:16 PM IST

ಬೆಂಗಳೂರು (ಜ.05): ವಿಧಾನಸೌಧದ ಮುಂದೆ ದೊಡ್ಡದಾಗಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ನಮೂದು ಮಾಡಿದ್ದರೂ, ಅಲ್ಲಿ  ನಡೆಯುವುದು ಬರೀ ಭ್ರಷ್ಟಾಚಾರ ಎನ್ನುವುದು ಸಮಾನ್ಯ ಸಾರ್ವಜನಿಕರ ದೂರು ಆಗಿದೆ. ಆದಕ್ಕೆ ಪೂರಕ ಎಂಬಂತೆ ನಿನ್ನೆ ಸಂಜೆ ವಿಧಾನಸೌಧದಲ್ಲಿ ಅಧಿಕೃತ ದಾಖಲೆಗಳಿಲ್ಲದ 10 ಲಕ್ಷ ರೂ. ನಗದು ಹಣ ತೆಗೆದುಕೊಂಡು ಹೋಗುತ್ತಿದ್ದ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ ಅವರಿಂದ ಪೊಲೀಸರು ಹಣವನ್ನು ಜಪ್ತಿ ಮಾಡಿದ್ದಾರೆ.

ಇನ್ನು ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಜಗದೀಶ್ ರಿಂದ ಹಣ ಜಪ್ತಿ ಮಾಡಲಾಗಿದೆ. ಕೆಲಸ ನಿಮಿತ್ತ ವಿಕಾಸ ಸೌಧಕ್ಕೆ ಬಂದಿದ್ದ ಇಂಜಿನಿಯರ್ ಜಗದೀಶ್ ಅವರನ್ನು ವಿಧಾನಸೌಧ ಪಶ್ಚಿಮ ದ್ವಾರದ ಗೇಟ್‌ ಬಳಿ ಪೊಲೀಸರು ಭದ್ರತೆ ದೃಷ್ಟಿಯಿಂದ ಪರಿಶೀಲನೆ ಮಾಡಿದ್ದಾರೆ. ಈ ವೇಲೆ ಸೂಟ್ಕೇಸ್‌ನಲ್ಲಿ 10 ಲಕ್ಷ ರೂ. ಇರುವುದು ಪತ್ತೆಯಾಗಿದೆ. ಆದರೆ, ಈ ಬಗ್ಗೆ ಪೊಲೀಸರು ವಿಚಾರಿಸಿದಾಗ ತಾನು ಈ ಹಣವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ತಂದಿರುವುದಾಗಿ ಪೊಲೀಸರ ಮುಂದೆ ಹೇಳಿದ್ದಾರೆ. 

ಮೋದಿ ಸರ್ಕಾರದಿಂದ 1.25 ಲಕ್ಷ ಕೋಟಿ ರೂ. ಕಪ್ಪುಹಣ ವಶಕ್ಕೆ: ಕೇಂದ್ರ ಸಚಿವ

ಕೋರ್ಟ್‌ಗೆ ನಗದು ಹಣ ಸಲ್ಲಿಕೆ: ನಂದರ ಹಣವನ್ನು ತಂದಿರುವ ಬಗ್ಗೆ ಪೊಲೀಸರು ದಾಖಲೆ ಕೇಳಿದ್ದಾರೆ. ಈ ವೇಳೆ ಕೆಲವು ಬಿಲ್ ಕ್ಲಿಯರ್ ಮಾಡಲು ಹಣ ತೆಗೆದುಕೊಂಡು ಹೋಗುತ್ತಿದ್ದಾಗಿ ಇಂಜಿನಿಯರ್‌ ತಿಳಿಸಿದ್ದಾರೆ. ಆದರೆ, ಹಣಕ್ಕೆ ಯಾವುದೇ ಬಿಲ್ ಇಲ್ಲದ ಹಿನ್ನಲೆ ಹಣ ಜಪ್ತಿ ಮಾಡಿದ ಪೊಲೀಸರು. ಇನ್ನು ವಿಧಾನಸೌಧ ಠಾಣೆಯಲ್ಲಿ ಎನ್ ಸಿಆರ್ ದಾಖಲು ಮಾಡಲಾಗಿದ್ದು, ನಂತರ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಈ ಹಣವನ್ನು ಪೊಲೀಸರು ಕೋರ್ಟ್ ಗೆ ನೀಡಿದ್ದಾರೆ. ಹಣದ ದಾಖಲೆ ನೀಡಿ ಕೋರ್ಟ್ ನಿಂದಲೇ ಹಣವನ್ನು ಬಿಡಿಸಿಕೊಳ್ಳಲು ಪೊಲೀಸರು ಇಂಜಿನಿಯರ್‌ ಜಗದೀಶನಿಗೆ ಸೂಚನೆ ನೀಡಿದ್ದಾರೆ. 

ಹಣದ ಬಗ್ಗೆ ದಾಖಲೆಗಳು ಲಭ್ಯವಾಗಿಲ್ಲ: ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ ಗೌಡ ಅವರು, ವಿಧಾನ ಸೌಧ ಮತ್ತು ವಿಕಾಸ ಸೌಧ ಭದ್ರತೆಯ ದಾಖಲೆಯಿಲ್ಲದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. PWD ಇಲಾಖೆಯ ಜೂನಿಯರ್ ಇಂಜಿನಿಯರ್ ಒರ್ವರು ಹಣದ ಸಹಿತ ಬಂದಿದ್ದಾರೆ. ಈ ವೇಳೆ ಹಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಸರಿಯಾದ ಉತ್ತರ ಸಿಕ್ಕಿಲ್ಲ. ಬಳಿಕ ವಿಧಾನ ಸೌಧ ಪೊಲೀಸ್ ಠಾಣೆ ಗೆ ಮಾಹಿತಿ ನೀಡಿ ದೂರು ಬಂದಿದೆ. ದೂರಿನ ಅನ್ವಯ ಕೇಸ್ ದಾಖಲು ಮಾಡಲಾಗಿದೆ. ಹತ್ತು ಲಕ್ಷದ ಐವತ್ತು ಸಾವಿರ ಹಣ ವಶಕ್ಕೆ ಪಡೆಯಲಾಗಿದೆ. ನ್ಯಾಯಾಲಯಕ್ಕೆ ಹಣವನ್ನು ಹಾಜರು ಪಡಿಸಲಿದ್ದೆವೆ. ಹಣ ತಂದಿದ್ದ ವ್ಯಕ್ತಿಗೆ ನೋಟೀಸ್ ನೀಡಲಾಗಿದೆ. ಎಲ್ಲಿ ಡ್ರಾ ಮಾಡಲಾಗಿದೆ. ಯಾರಿಗೆ ಕೊಡುವ ಉದ್ದೇಶ ಇದೆ ಎಂಬುದನ್ನು ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.

ತುಮಕೂರಿನಲ್ಲಿ ಕಮಿಷನ್ ಆರೋಪಕ್ಕೆ ಮತ್ತೊಂದು ಬಲಿ: ಗುತ್ತಿಗೆದಾರ ನೇಣಿಗೆ ಶರಣು

ಪೊಲೀಸರಿಂದ ಹೆಚ್ಚುವರಿ ತನಿಖೆ ಆರಂಭ: ತಾನು ಮಂಡ್ಯದಲ್ಲಿ ಕೆಲಸ ಮಾಡುತ್ತಿದ್ದು, ಹಣವನ್ನು ವಿಕಾಸ ಸೌಧದಲ್ಲಿ ಕೆಲಸ ಇದ್ದ ಕಾರಣ ತಂದಿದ್ದೆನು. ನಾವು ಹಣವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗುವುದಿತ್ತು ಎಂದು ಹೇಳಿದ್ದ ಜಗದೀಶ್ ಹೇಳಿದ್ದಾರೆ.  ಸದ್ಯ   ವಿಧಾನ ಸೌಧ ಪೊಲೀಸರು ಕೇಸ್ ದಾಖಲು ಮಾಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ಸಚಿವ ಪುಟ್ಟರಂಗಶೆಟ್ಟಿ ಅವರ ಆಪ್ತರೊಬ್ಬರು 25 ಲಕ್ಷ ರೂ. ಹಣವನ್ನು ತೆಗೆದುಕೊಂಡು ಹೋಗುತ್ತಿರುವುದು ಲಭ್ಯವಾಗಿತ್ತು. 

ಚುನಾವಣೆ ವೇಳೆ ಗಿಮಿಕ್‌ ಮಾಡಲಾಗುತ್ತಿದೆ: ವಿಧಾನಸೌಧದಲ್ಲಿ 10 ಲಕ್ಷ ಹಣ ಸಿಕ್ಕಿದೆ. ಯಾವ ಉದ್ದೇಶಕ್ಕೆ ಯಾರಿಗೆ ಹಣ ತಂದಿದ್ದ ಎನ್ನೋದು ಗೊತ್ತಾಗಬೇಕು. ಈಗಷ್ಟೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಸಂದರ್ಭದಲ್ಲಿ ನಾನು ಪ್ರತಿಕ್ರಿಯೆ ನೀಡುವುದು ತಪ್ಪಾಗುತ್ತದೆ. ಅವನ ಸ್ಟೇಟ್ ಮೆಂಟ್ ಪಡೆದ ಬಳಿಕವಷ್ಟೇ ಗೊತ್ತಾಗಬೇಕು. ಶೇಕಡಾ 40% ಅದು-ಇದೂ ಎಲ್ಲ ಹಿಂದಿನ ಸರ್ಕಾರದಲ್ಲೇ ನಡೆದಿತ್ತು. ಇಲ್ಲದಿದ್ದರೆ ಅವರು ಸರ್ಕಾರದಿಂದ ಯಾಕೆ ಇಳಿಯುತ್ತಿದ್ದರು? ಸುಮ್ಮನೆ ಚುನಾವಣೆ ಸಂದರ್ಭ ಗಿಮಿಕ್ ಮಾಡ್ತಿದ್ದಾರೆ. ಈಗಾಗಲೇ ಒಬ್ಬ ಮಂತ್ರಿ ಕೇಸ್ ಹಾಕಿದ್ದಾರೆ ಕೇಸ್ ತನಿಖೆ ನಡೆಯುತ್ತಿದೆ.
- ಗೃಹ ಸಚಿವ ಆರಗ ಜ್ಞಾನೇಂದ್ರ

Follow Us:
Download App:
  • android
  • ios