Asianet Suvarna News Asianet Suvarna News

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ 10 ಗ್ರಾಂ ಚಿನ್ನ

 ತಾಲೂಕಿನ ಚಿನಕುರಳಿ ಎಸ್ಟಿಜಿ ಪಬ್ಲಿಕ್‌ ಶಾಲೆಯಲ್ಲಿ 2021-22ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಶಾಸಕ ಸಿ.ಎಸ್‌. ಪುಟ್ಟರಾಜು ತಲಾ ಹತ್ತು ಗ್ರಾಪಂ ಚಿನ್ನ ನೀಡಿ ಅಭಿನಂದಿಸಿದರು.

10 grams of gold Gift for top scorers in  SSLC And PUC snr
Author
First Published Nov 7, 2022, 5:33 AM IST

 ಪಾಂಡವಪುರ (ಮ.07):   ತಾಲೂಕಿನ ಚಿನಕುರಳಿ ಎಸ್ಟಿಜಿ ಪಬ್ಲಿಕ್‌ ಶಾಲೆಯಲ್ಲಿ 2021-22ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಶಾಸಕ ಸಿ.ಎಸ್‌. ಪುಟ್ಟರಾಜು ತಲಾ ಹತ್ತು ಗ್ರಾಪಂ ಚಿನ್ನ ನೀಡಿ ಅಭಿನಂದಿಸಿದರು.

ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಪಿಯುಸಿ ವಿಭಾಗದಲ್ಲಿ ಯು. ಪುನೀತ್‌ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ಅಸ್ರಾ ಮಾಹೀನ್‌ ಎಂಬ ವಿದ್ಯಾರ್ಥಿಗೆ ಚಿನ್ನದ ನೀಡಿ ಗೌರವಿಸಿದರು. ಜತೆಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ 118 ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ನೂರಕ್ಕೆ ನೂರು ಅಂಕ ಗಳಿಸಿದ ಗಣಿತ-62, ಕನ್ನಡ-4, ಭೌತಶಾಸ್ತ್ರ-2, ಜೀವಶಾಸ್ತ್ರ-7, ರಸಾಯನಶಾಸ್ತ್ರ-14 ವಿದ್ಯಾರ್ಥಿಗಳನ್ನು ಸಹ ಅಭಿನಂಧಿಸಲಾಯಿತು.

ಶಾಸಕ ಸಿ.ಎಸ್‌.ಪುಟ್ಟರಾಜು ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಬೇಕು ಎಂಬ ಉದ್ದೇಶದಿಂದ ಚಿನಕುರಳಿಯಲ್ಲಿ ಎಸ್ಟಿಜಿ ಸಂಸ್ಥೆ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಶಾಲೆಯಲ್ಲಿ ಸಿಗುವಂತಹ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.

ಸಿಇಓ ಸಿ.ಪಿ.ಶಿವರಾಜು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು ಬಹಳ ಮುಖ್ಯವಾದದ್ದು. ಯಾವ ವಿದ್ಯಾರ್ಥಿ ಶಿಸ್ತು ಅಳವಡಿಸಿಕೊಂಡು ಓದುತ್ತಾರೋ ಅವರು ಶೈಕ್ಷಣಿಕವಾಗಿ ಮುನ್ನಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಪ್ರತಿಯೊಬ್ಬ ಪೋಷಕರು ಸಹ ತಮ್ಮ ಮಕ್ಕಳ ಚನ್ನಾಗಿ ವಿದ್ಯಾಭ್ಯಾಸ ಮಾಡಿಸಬೇಕು ಎಂಬ ಕನಸು ಕಾಣುತ್ತಾರೆ. ಪೋಷಕರು ಕನಸ್ಸನ್ನು ನನಸು ಮಾಡುವ ಜವಬ್ದಾರಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಮೇಲಿದ್ದು ಪೋಷಕರ ಕನಸು ನನಸು ಮಾಡಬೇಕು ಎಂದು ಕಿವಿಮಾತು ಹೇಳಿದರು.

ಇಳಿದ ಚಿನ್ನದ ದರ

ದೇಶದಲ್ಲಿ ಕಳೆದೊಂದು ತಿಂಗಳಿನಿಂದ ಚಿನ್ನದ ದರಗಳಲ್ಲಿ ಇಳಿಕೆ ಕಂಡು ಬರುತ್ತಿದೆ. ಆ ಟ್ರೆಂಡ್‌ ಶುಕ್ರವಾರ ಕೂಡ ಮುಂದುವರಿದಿದ್ದು, ಆಭರಣ ಹಾಗೂ ಬಂಗಾರ ಖರೀದಿದಾರರಿಗೆ ಶುಭ ಸುದ್ದಿ ಎನಿಸಿದೆ. ದೇಶದಲ್ಲಿ ಇನ್ನೂ ಶುಭ ಸಮಾರಂಭಗಳ ಸಂಖ್ಯೆ ಹೆಚ್ಚೇ ಇದೆ. ಅದರೊಂದಿಗೆ ಆಭರಣಗಳ ಖರೀದಿ ಹಾಗೂ ವಹಿವಾಟು ಸಾಮಾನ್ಯವಾಗಿ ಹೆಚ್ಚಿರುತ್ತದೆ. ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಳಿಕೆಯಾದರೆ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರ ಮೊಗದಲ್ಲಿ ನಗು ಅರಳುತ್ತದೆ. ಈ ನಿಟ್ಟಿನಲ್ಲಿ ಪ್ರತಿನಿತ್ಯ ಚಿನ್ನದ ದರವನ್ನು ಪರಿಶೀಲನೆ ಮಾಡುವ ದೊಡ್ಡ ವರ್ಗವೇ ಇದೆ. ಹಾಗೇನಾದರೂ ನೀವು ಂದು ಚಿನ್ನ ಹಾಗೂ ಬೆಳ್ಳಿ ಖರೀದಿಗೆ ಪ್ಲ್ಯಾನ್‌ ಮಾಡಿಕೊಂಡಿದ್ದರೆ, ಇಲ್ಲಿದೆ ನೋಡಿ ಇವುಗಳ ಇಂದಿನ ದರ. ಬೆಂಗಳೂರಿನಲ್ಲಿ ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ ಎಂಬ ಬಗ್ಗೆ ತಿಳ್ಕೋಬೇಕಾ.. ಈ ವರದಿ ಓದಿ.


ಇಂದು ಬೆಂಗಳೂರು ಸೇರಿ ದೇಶಾದ್ಯಂತ ಚಿನ್ನದ ದರದಲ್ಲಿ ಕಡಿಮೆಯಾಗಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಸಹ ಇಳಿಕೆಯಾಗಿದೆ. 

ಇದನ್ನು ಓದಿ: ಬೆಳಗಾವಿಯಲ್ಲಿ ಇಳಿದ ವಿಜಯಪುರದಲ್ಲಿ ಏರಿದ ಪೆಟ್ರೋಲ್‌ ದರ, ಇಂದು ನಿಮ್ಮ ಊರಲ್ಲಿ ಇಂಧನ ಬೆಲೆ ಹೇಗಿದೆ ನೋಡಿ..

ಒಂದು ಗ್ರಾಂ ಚಿನ್ನ (1GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,615
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,034

ಎಂಟು ಗ್ರಾಂ ಚಿನ್ನ (8GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 36, 920
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,272

ಹತ್ತು ಗ್ರಾಂ ಚಿನ್ನ (10GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 46,150
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 50, 340

ನೂರು ಗ್ರಾಂ ಚಿನ್ನ (100GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ.  4,61,500
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,03,400

ಇದನ್ನು ಓದಿ: Gold Silver Price Today: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌: ಇಳಿಕೆಯಾಯ್ತು ಚಿನ್ನ, ಬೆಳ್ಳಿ ದರ

ಬೆಂಗಳೂರು ಸೇರಿದಂತೆ ದೇಶಾದ್ಯಂತ ಚಿನ್ನದ ದರ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) 46, 150 ರೂ. ಆಗಿದ್ದು, ನಿನ್ನೆಗಿಂತ 600 ರೂಪಾಯಿ ಬೆಲೆ ಕಡಿಮೆಯಾಗಿದೆ. ಇನ್ನು, ದೇಶದ ಪ್ರಮುಖ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಕ್ರಮವಾಗಿ ಚಿನ್ನದ ಬೆಲೆ ರೂ. 47,060, ರೂ. 46,100, ರೂ. 46,100 ಇದ್ದು, ನಿನ್ನೆಯ ದರಕ್ಕಿಂತ ಕಡಿಮೆಯಾಗಿದೆ. ರಾಜಧಾನಿ ದೆಹಲಿಯಲ್ಲಿ ಸಹ ಚಿನ್ನದ ಬೆಲೆ ಬುಧವಾರ 46,250 ರೂ. ಆಗಿದ್ದು,ಬೆಲೆಯಲ್ಲಿ ಇಳಿಕೆ ಆಗಿದೆ.

ಇಂದಿನ ಬೆಳ್ಳಿ ದರ: ಬೆಳ್ಳಿಯ ದರದಲ್ಲೂ ಕೂಡ ದೇಶದಲ್ಲಿ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯಾಪಕ ವ್ಯತ್ಯಾಸದ ಹಾಗೂ ರೂಪಾಯಿ ಮತ್ತು ಡಾಲರ್‌ ವಹಿವಾಟಿನ ಮೇಲೆ ಇದು ಅವಲಂಬಿತವಾಗಿದೆ. ರೂಪಾಯಿ ದರದಲ್ಲಿ ಬದಲಾವಣೆ ಆಗುತ್ತಿರುವಂತೆ ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲೂ ವ್ಯತ್ಯಾಸವಾಗುತ್ತಿರುತ್ತದೆ.

ದೇಶದೆಲ್ಲೆಡೆ ಇರುವ ಬೆಳ್ಳಿ ದರ: ದೇಶದ ಹಲವು ನಗರಗಳಲ್ಲಿ ಇಂದು ಬಂಗಾರದ ದರ ಇಳಿಕೆಯಾಗಿದ್ದರೆ, ಬೆಳ್ಳಿ ದರ ಸ್ಥಿರವಾಗಿದೆ. ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 640, ರೂ. 6,400 ಹಾಗೂ ರೂ. 64,000 ಗಳಾಗಿವೆ. ಇನ್ನು, ದೇಶದ ಇತರೆ ಪ್ರಮುಖ ನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 64,00 ಆಗಿದ್ದರೆ, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ರೂ. 58,100, ಕೋಲ್ಕತ್ತದಲ್ಲಿ ರೂ. 58,100 ಹಾಗೂ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸಹ ಇಂದಿನ ಬೆಳ್ಳಿ ದರ  ರೂ. 58,100 ಆಗಿದೆ.

Follow Us:
Download App:
  • android
  • ios