Asianet Suvarna News Asianet Suvarna News

ಅಣ್ಣಿಗೇರಿ: ಇಂದಿನಿಂದ 10 ದಿನ ಸ್ವಯಂ ಲಾಕ್‌ಡೌನ್‌

ಜು. 3ರಿಂದ 13ರ ವರೆಗೆ ಪಟ್ಟಣ ಲಾಕ್‌ಡೌನ್‌| ಬೆಳಗ್ಗೆ 6ರಿಂದ ಮಾತ್ರ ಮಧ್ಯಾಹ್ನ 2ರ ವರೆಗೆ ಅಗತ್ಯ ವಸ್ತುಗಳು ಲಭ್ಯ|ಪಟ್ಟ​ಣದ ವತ​ರ್‍ಕರು, ಗಣ್ಯರ ಸಭೆ​ಯಲ್ಲಿ ತೀರ್ಮಾಣ|

10 day Self Lockdown from today in Annigeri in Dharwad district
Author
Bengaluru, First Published Jul 3, 2020, 9:06 AM IST

ಅಣ್ಣಿಗೇರಿ(ಜು.03):  ಕೊರೋನಾ ಹಾವಳಿಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಅಣ್ಣಿಗೇರಿಯಲ್ಲಿ ಸಾರ್ವಜನಿಕರು 10 ದಿನಗಳವರೆಗೂ ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್‌ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಪರ್ವತಮಲ್ಲೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರು ಈ ನಿರ್ಣಯ ಕೈಗೊಂಡಿದ್ದಾರೆ. ಇದರಿಂದಾಗಿ ಜು. 3ರಿಂದ 13ರ ವರೆಗೆ ಪಟ್ಟಣ ಲಾಕ್‌ಡೌನ್‌ ಆಗಲಿದೆ. ಬೆಳಗ್ಗೆ 6ರಿಂದ ಮಾತ್ರ ಮಧ್ಯಾಹ್ನ 2ರ ವರೆಗೆ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಬೇಕು.

ಪರ್ವತ ಮಲ್ಲೇಶ್ವರ ದೇವಸ್ಥಾನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಪಟ್ಟಣದ ವರ್ತಕರು, ಗಣ್ಯರು, ಮುಖಂಡರು, ಸಾರ್ವಜನಿಕರು ಈ ನಿರ್ಣಯಕೈಗೊಂಡಿದ್ದಾರೆ. ನಿತ್ಯ ದಿನಸಿ, ಇನ್ನೀತರ ವ್ಯಾಪಾರ ವಹಿವಾಟು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳನ್ನು ತೆರೆದು ನಂತರ ಬಂದ್‌ ಮಾಡಲು ತೀರ್ಮಾನಿಸಿದರು. ಮಧ್ಯಾಹ್ನ 2 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಮನೆಯಿಂದ ಯಾರು ಹೊರಗೆ ಬರದಂತೆ ಜಾಗೃತಿ ವಹಿಸಬೇಕು. ಮನೆಯಲ್ಲೇ ಇದ್ದು ತಮ್ಮ ಆರೋಗ್ಯ ಕಡೆಗೆ ಹೆಚ್ಚು ಗಮನಹರಿಸಬೇಕು. ಸಾಮಾಜಿಕ ಅಂತರ, ಸ್ಯಾನಿಟೈಸರ್‌ ಬಳಸಬೇಕು ಎಂದು ಸಭೆಯಲ್ಲಿದ್ದ ಹಿರಿಯರು ಹೇಳಿದರು. ಇದಕ್ಕೆ ಸಭೆಯಲ್ಲಿದ್ದ ಎಲ್ಲರೂ ಒಪ್ಪಿಗೆ ಸೂಚಿಸಿದರು.

ಧಾರವಾಡದಲ್ಲಿ ಕೊರೋನಾ ಸ್ಫೋಟ: 35 ಕೋವಿಡ್‌ ಪಾಸಿಟಿವ್‌ ಕೇಸ್‌

ಕೊರೋನಾ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ. ಜನತೆಯ ಹಿತರಕ್ಷಣೆಗೆ ನಾವೆಲ್ಲ ಸರ್ಕಾರ, ಆರೋಗ್ಯ ಇಲಾಖೆ ನೀಡುವ ಕಟ್ಟುನಿಟ್ಟಿನ ನಿಯಮಗಳನ್ನು ಕ್ರಮಬದ್ಧವಾಗಿ ಪಾಲಿಸಬೇಕಿದೆ. ಕಳೆದ ತಿಂಗಳು ಸೋಂಕಿತರು ಪಟ್ಟಣದಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಮುಂಜಾಗ್ರ​ತಾ ಕ್ರಮವಾಗಿ ಸ್ವಯಂ ಪ್ರೇರಣೆಯಿಂದ ಸಮಸ್ತ ನಾಗರಿಕ ಸಮಿತಿ, ಲಾಕ್‌ಡೌನ್‌ ನಿಯಮಗಳನ್ನು ಪಾಲಿಸುವ ನಿರ್ಣಯ ಮೇರೆಗೆ ನಾಳೆಯಿಂದ 10 ದಿನಗಳು ಅಣ್ಣಿಗೇರಿ ಪಟ್ಟಣ ಲಾಕ್‌ಡೌನ್‌ ಆಗಲಿದೆ.
 

Follow Us:
Download App:
  • android
  • ios