Davanagere news: ಬಸ್‌ ನಿಲ್ದಾಣ ಮೇಲ್ದರ್ಜೆಗೆ ₹10 ಕೋಟಿ ಮಂಜೂರು: ಎಂ.ಪಿ.ರೇಣುಕಾಚಾರ್ಯ

ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಸರ್ಕಾರದಿಂದ 10 ಕೋಟಿ ರು. ಅನುದಾನ ಮಂಜೂರು ಪಡೆದು ಕಾಮಗಾರಿಗೆ ಟೆಂಡರ್‌ ಆಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

10 crore sanctioned for upgradation of bus stand says MP Renukacharya rav

ಹೊನ್ನಾಳಿ (ಜ.1) : ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಸರ್ಕಾರದಿಂದ 10 ಕೋಟಿ ರು. ಅನುದಾನ ಮಂಜೂರು ಪಡೆದು ಕಾಮಗಾರಿಗೆ ಟೆಂಡರ್‌ ಆಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ(KSRTC Bus stop)ದಲ್ಲಿ ಅವಳಿ ತಾಲೂಕುಗಳ ವಿದ್ಯಾರ್ಥಿಗಳು(Students) ಹಾಗೂ ಉದ್ಯೋಗಕ್ಕಾಗಿ ಶಿವಮೊಗ್ಗ(Shivamogga) ನಗರಕ್ಕೆ ಬರುವವರ ಅನುಕೂಲಕ್ಕಾಗಿ ಹೊನ್ನಾಳಿಯಿಂದ ಗ್ರಾಮಾಂತರ ಪ್ರದೇಶಗಳ ಮೂಲಕ ಶಿವಮೊಗ್ಗಕ್ಕೆ ನೂತನ ಬಸ್‌ ಸಂಚಾರ ವ್ಯವಸ್ಥೆಗೆ ಎರಡು ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಈ ಹಿಂದೆ ಆರ್‌.ಅಶೋಕ್‌ ಸಾರಿಗೆ ಸಚಿವರಾಗಿದ್ದ ಕಾಲದಲ್ಲಿ ಹೊನ್ನಾಳಿಗೆ ಬಸ್‌ ಡಿಪೋ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಿದ್ದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಅನೇಕ ತಾಂತ್ರಿಕ ಕಾರಣಗಳ ಹೇಳಿ ಡಿಪೋ ಮಂಜೂರು ಮಾಡಲು ಆಗಲ್ಲ ಎಂದಿದ್ದರೂ ತಾನು ಮುಖ್ಯಮಂತ್ರಿ, ಸಾರಿಗೆ ಸಚಿವರ ಒತ್ತಾಯಿಸಿ ಹೊನ್ನಾಳಿ ಪಟ್ಟಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ತರುವಲ್ಲಿ ಸಫಲನಾದೆ ಎಂದರು. ಹೊನ್ನಾಳಿಯ ದೇವನಾಯ್ಕನಹಳ್ಳಿ ಸಮೀಪ ಸುಮಾರು 6 ಎಕರೆ 36 ಗುಂಟೆ ಪ್ರದೇಶ ಕೆಎಸ್‌ಆರ್‌ಟಿಸಿ ಮೂಲಕ ಸರ್ಕಾರಿ ದರದಲ್ಲಿ ಸುಮಾರು 13 ಲಕ್ಷ ರು. ಜಾಗÜ ಖರೀದಿಸಿ ಬಸ್‌ ಡಿಪೋ ಮಾಡಲಾಗಿದೆ ಎಂದು ಹೇಳಿದರು.

ಧರ್ಮವನ್ನು ನಾವು ರಕ್ಷಿಸದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ: ಶಾಸಕ ರೇಣುಕಾಚಾರ್ಯ

ವಿದ್ಯಾರ್ಥಿಗಳ ಅಹವಾಲುಗೆ ಸ್ಪಂದಿಸಿದ ಶಾಸಕ:

ನೂತನ ಬಸ್‌ ಮಾರ್ಗ ಉದ್ಘಾಟನೆಗಾಗಿ ಆಗಮಿಸಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯರನ್ನು ಗ್ರಾಮೀಣ ವಿದ್ಯಾರ್ಥಿಗಳು ಭೇಟಿಯಾಗಿ ಹೊನ್ನಾಳಿಯಿಂದ ನಾಗವಂದ ಇತರೆಡೆಗೆ ತೆರಳಲು ಬಸ್‌ಗಳ ವ್ಯವಸ್ಥೆ ಹಾಗೂ ಸಂಜೆ 4ರ ನಂತರ ಹೊನ್ನಾಳಿಯಿಂದ ಹೊರಡಲು ವ್ಯವಸ್ಥೆ ಮಾಡಿ ಹಾಗೂ ತಾಲೂಕಿನಿಂದ ವಿವಿಧ ಗ್ರಾಮಗಳಿಗೆ ಬಸ್‌ ವ್ಯವಸ್ಥೆ ಕಲ್ಪಿಸಲು ಮಾಡಿದ ಮನವಿಗೆ ಸ್ಪಂದಿಸಿದ ಶಾಸಕ ಸ್ಥಳದಲ್ಲೇ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಬಸ್‌ ವ್ಯವಸ್ಥೆಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಅನೇಕರು ಹೊನ್ನಾಳಿಯಿಂದ ಶಿವಮೊಗ್ಗಕ್ಕೆ ಓಡಾಡುವ ಬಸ್‌ಗಳು ಶಿವಮೊಗ್ಗದ ಹೊರವಲಯದ ಮೂಲಕ ಬಸ್‌ ನಿಲ್ದಾಣಕ್ಕೆ ತೆರಳುತ್ತಿದ್ದು ಇದರಿಂದ ವಿದ್ಯಾರ್ಥಿಗಳು, ಉದ್ಯೋಗಸ್ಥರು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಬಸ್‌ಗಳು ಈ ಹಿಂದಿನಂತೆ ಡಿ.ಸಿ. ಕಚೇರಿ ರಸ್ತೆ ಮೂಲಕ ಎಚ್‌.ಪಿ.ಸಿ.ಬಸ್‌ ನಿಲ್ದಾಣ, ಅಮೀರ್‌ ಅಹ್ಮದ್‌ ಸರ್ಕಲ್‌ ಮೂಲಕ ತೆರಳಬೇಕು ಎಂದಾಗ ಸಂಬಂಧಿಸಿದ ಶಿವಮೊಗ್ಗ ಜಿಲ್ಲಾಧಿಕಾರಿ, ಆರ್‌ಟಿಒರನ್ನು ಸಂಪರ್ಕಿಸಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು.

ಜನರಿಯಲ್ಲಿ ಸಿಎಂ ಆಗಮನ:

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ(BS yadiyurappa), ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ(CM Basavaraj bommai)ರನ್ನು ಜನವರಿಯಲ್ಲಿ ಕರೆಸಿ ಸುಮಾರು 1700 ಕೋಟಿ ರು. ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ಹೆಸರುವಾಸಿಯಾಗಿದ್ದ ಸೋಲಾಪುರ ಮಂದ್ರೂಪ ಸ್ವಾಮೀಜಿ ವಿಧಿವಶ

ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಕೆ.ಮಹೇಶ್ವರಪ್ಪ, ಪುರಸಭೆ ಅಧ್ಯಕ್ಷ ರಂಗನಾಥ್‌, ಸದಸ್ಯರು, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್‌, ಜಿ.ಪಂ. ಮಾಜಿ ಸದಸ್ಯ ಸುರೇಂದ್ರನಾಯ್ಕ, ಬಂಜಾರ ಅಭಿವೃದ್ಧಿ ನಿಗಮದ ಮಾರುತಿ ನಾಯ್ಕ, ಮಹೇಶ್‌ ಹುಡೇದ್‌, ಮಂಜು ಇಂಚರ್‌, ಸಾರಿಗೆ ನೌಕರರಿದ್ದರು.

ಹೊನ್ನಾಳಿ ಫೋಟೋ 31ಎಚ್‌.ಎಲ್‌.ಐ1ಃ-

ಹೊನ್ನಾಳಿಯಿಂದ ದಿಡಗೂರು ಹರಳಹಳ್ಳಿ, ಗೋವಿನÜಕೋವಿ, ಚೀಲೂರು ಮೂಲಕ ಶಿವಮೊಗ್ಗಕ್ಕೆ ನೂತನ ಬಸ್‌ ಸಂಚಾರಕ್ಕೆ ಶಾಸಕ ಎಂ.ಪಿ.ರೇಣುಕಾಚಾರ್ಯ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

Latest Videos
Follow Us:
Download App:
  • android
  • ios