ಕೊರೋನಾ ಲಸಿಕೆ ಪಡೆದ 10 ಪೊಲೀಸರಿಗೆ ಇದೀಗ ಸೋಂಕು ತಗುಲಿದೆ. ಮಂಗಳೂರಿನ ವಿವಿಧ ಪೊಲೀಸ್‌ ಠಾಣೆಯ 10 ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. 

ಮಂಗಳೂರು (ಏ.27): ಕೊರೋನಾ ಲಸಿಕೆ ಪಡೆದಿದ್ದ ವಿವಿಧ ಪೊಲೀಸ್‌ ಠಾಣೆಯ 10 ಸಿಬ್ಬಂದಿಗೆ ಸೋಂಕು ದೃಢಪಟ್ಟಿರುವ ಘಟನೆ ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ನಡೆದಿದೆ. 

ಅವರಲ್ಲಿ ಇಬ್ಬರಲ್ಲಿ ಸ್ವಲ್ಪಮಟ್ಟಿನ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲುಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳೂರು : ಪೊಲೀಸ್‌ ಕಮಿಷನರ್‌, ಜೈಲ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ! ..

ಉಳಿದವರು ಹೋಂ ಐಸೋಲೇಶನ್‌ನಲ್ಲಿದ್ದಾರೆ ಎಂದು ಪೊಲೀಸ್‌ ಆಯುಕ್ತ ಶಶಿಕುಮಾರ್‌ ತಿಳಿಸಿದ್ದಾರೆ. 10 ಮಂದಿಯೂ ಕೊರೋನಾ ಲಸಿಕೆಯ ಪ್ರಥಮ ಡೋಸ್‌ ಪಡೆದಿದ್ದು ಅವರಲ್ಲಿ ಆರು ಮಂದಿ ಎರಡನೇ ಡೋಸನ್ನು ಪಡೆದಿದ್ದಾರೆ.

ಪೊಲೀಸ್‌ ಕಂಟ್ರೋಲ್‌ ರೂಂ, ಆಯಾ ಪೊಲೀಸ್‌ ಠಾಣೆಗಳ ಮೂಲಕ ಸೋಂಕಿತರು ಹಾಗೂ ಅವರ ಮನೆಯವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಲಾಗುತ್ತಿದೆ ಎಂದು ಪೊಲೀಸ್‌ ಕಮಿಷನರ್‌ ಮಾಹಿತಿ ನೀಡಿದ್ದಾರೆ.