ಬೆಳಗಾವಿ(ಆ.22): ಮಹಾ ಪ್ರವಾಹಕ್ಕೆ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನಲ್ಲಿ ಮುಳುಗಡೆಯಾಗಿದ್ದ 10 ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿದೆ.

ಭೀಕರ ಪ್ರವಾಹದಿಂದ ಜಿಲ್ಲೆಯಲ್ಲಿ ಸೇತುವೆಗಳು ಮುಳುಗಡೆಯಾಗಿ ಜನರು ಸುತ್ತು ಬಳಸಿ ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಇದೀಗ ಸೇತುವೆಗಳು ಸಂಚಾರ ಮುಕ್ತವಾಗಿರುವುದು ಜನರನ್ನು ನಿರಾಳವಾಗಿಸಿದೆ.

ಇಷ್ಟುದಿನ ನೆರೆ ಹಾವಳಿಯಿಂದ ಅನ್ಯಮಾರ್ಗಗಳ ಮೂಲಕ ದೂರ ಸಂಚಾರ ಮಾಡುತ್ತಿದ್ದ ಜನ ಇದೀಗ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿರುವುದರಿಂದ ಸಂತಸಗೊಂಡಿದ್ದಾರೆ.

ಬೆಳಗಾವಿ: ಪ್ರವಾಹಕ್ಕೆ ನಾಶವಾದವು 4 ಸಾವಿರಕ್ಕೂ ಹೆಚ್ಚು ಶಾಲಾ ಕೊಠಡಿ

ಚಿಕ್ಕೋಡಿ ತಾಲೂಕಿನ ಬೇಡಕಿಹಾಳ-ಶಿರದವಾಡ, ಸದಲಗಾ-ಬೋರಗಾಂವ, ಯಕ್ಸಂಬಾ-ದಾನವಾಡ ಕಾರದಗಾ-ಭೋಜ ಮತ್ತು ಬೋಜವಾಡಿ-ಕುನ್ನೂರ ಕಲ್ಲೋಳ-ಯಡೂರ ಮತ್ತು ಮಲಿಕವಾಡ-ದತ್ತವಾಡ, ಸಿದ್ನಾಳ-ಅಕ್ಕೋಳ ಮತ್ತು ಜತ್ರಾಟ-ಭಿವಶಿ ಸೇತುವೆಗಳು ಇನ್ನೂ ನೀರಿನಲ್ಲಿ ಜಲಾವೃತಗೊಂಡು ಜನ ಸಂಪರ್ಕಕ್ಕೆ ಮುಕ್ತವಾಗಿವೆ.