ಬೆಂಗಳೂರಿಗೆ ಹೋದವರಿಗೆ ಮಂಡ್ಯದಲ್ಲಿ 1 ಸಾವಿರ ರೂ. ದಂಡ..!
ಬೆಂಗಳೂರಿಗೆ ಹೋದವರು ಮತ್ತೆ ವಾಪಸ್ ಗ್ರಾಮಕ್ಕೆ ಹಿಂದಿರುಗುವಂತಿಲ್ಲ, ಒಂದು ವೇಳೆ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಹೋಗಿ ವಾಪಸ್ ಬಂದರೆ . 1,000 ದಂಡ ತೆರಬೇಕು. ಇದು ಮಂಡ್ಯ ತಾಲೂಕು ಬೇಲೂರು ಗ್ರಾಮದ ಯಜಮಾನರು ತೀರ್ಮಾನ ಮಾಡಿ ಗ್ರಾಮದಲ್ಲಿ ಡಂಗುರ ಸಾರಿಸಿದ್ದಾರೆ.
ಮಂಡ್ಯ(ಜು.08): ಬೆಂಗಳೂರಿಗೆ ಹೋದವರು ಮತ್ತೆ ವಾಪಸ್ ಗ್ರಾಮಕ್ಕೆ ಹಿಂದಿರುಗುವಂತಿಲ್ಲ, ಒಂದು ವೇಳೆ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಹೋಗಿ ವಾಪಸ್ ಬಂದರೆ . 1,000 ದಂಡ ತೆರಬೇಕು. ಇದು ಮಂಡ್ಯ ತಾಲೂಕು ಬೇಲೂರು ಗ್ರಾಮದ ಯಜಮಾನರು ತೀರ್ಮಾನ ಮಾಡಿ ಗ್ರಾಮದಲ್ಲಿ ಡಂಗುರ ಸಾರಿಸಿದ್ದಾರೆ.
ಗ್ರಾಮದ ಮುಖಂಡರು ಜಾರಿಗೊಳಿಸಿರುವ ನಿರ್ಬಂಧದಿಂದ ಬಡ ಕೂಲಿ ಕಾರ್ಮಿಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ದಿನನಿತ್ಯದ ಬದುಕಿನ ಬಂಡಿ ಎಳೆಯಲು ಮನೆಯಿಂದ ಹೊರಗೆ ಹೋಗಿ ದುಡಿಯುವುದು ಅನಿವಾರ್ಯ.
ಪಾಸಿಟಿವ್ ಎಂದು ತಿಳಿದೂ ತಂದೆ, ಮಗ ಬಸ್‌ನಲ್ಲಿ ಪ್ರಯಾಣ, ಬಸ್ ನಿಲ್ದಾಣ ಸೀಲ್ ಡೌನ್
ಆದರೆ, ಕೊರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಗ್ರಾಮದ ಮುಖಂಡರು ನಮ್ಮ ಗ್ರಾಮಕ್ಕೂ ಕೊರೋನಾ ವಕ್ಕರಿಸಬಹುದು ಎಂಬ ಶಂಕೆಯ ಹಿನ್ನಲೆಯಲ್ಲಿ ಮುಖಂಡರು ಗ್ರಾಮದಲ್ಲಿ ಡಂಗುರ ಸಾರಿಸಿ ಯಾರೂ ಸಹ ಬೆಂಗಳೂರಿಗೆ ಹೋಗಬಾರದು ಮತ್ತು ಅಲ್ಲಿಂದ ಬರಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಪ್ರಯಾಣಿಕರಿಗೆ ಗ್ರಾಮಗಳಲ್ಲಿ ತರಾಟೆ, 1000 ದಂಡ!
ಕೊರೋನಾ ಮುಕ್ತ ಗ್ರಾಮವನ್ನಾಗಿ ಮಾಡಲು ಯಜಮಾನರು ತೀರ್ಮಾನಿಸಿದ್ದು, ಗ್ರಾಮದಲ್ಲಿ ಮದ್ಯ ಮಾರಾಟಕ್ಕೂ ನಿಷೇದ ಹೇರಲಾಗಿದೆ. ಈ ಮೊದಲು ಚಿಲ್ಲರೆ ಅಂಗಡಿಗಳಲ್ಲಿ ಕದ್ದು ಮುಚ್ಚಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಇದೀಗ ಗ್ರಾಮದ ಮುಖಂಡರ ಕಟು ನಿರ್ಧಾರದಿಂದಾಗಿ ಮದ್ಯ ಮಾರಾಟಕ್ಕೂ ಪೆಟ್ಟು ಬಿದ್ದಿದೆ.