ಹೈನುಗಾರಿಕೆಯಲ್ಲಿ ಮಾಸಿಕ 1.10 ಲಕ್ಷ ಆದಾಯ

ಟಿ. ನರಸೀಪುರ ತಾಲೂಕು ಸೋಸಲೆ ಹೋಬಳಿ ಎಸ್‌ಕೆಪಿ ಅಗ್ರಹಾರದ ರೈತ ಇಂದ್ರೇಶ್‌ ಅವರು ಹೈನುಗಾರಿಕೆಯಲ್ಲಿ ಮಾಸಿಕ 1.10 ಲಕ್ಷ ರೂ. ಗಳಿಸುತ್ತಿದ್ದಾರೆ. ಜೊತೆಗೆ ಕುರಿ, ಮೇಕೆ ಕೂಡ ಸಾಕಾಣಿಕೆ ಮಾಡುತ್ತಿದ್ದಾರೆ. ಭತ್ತ ಬೆಳೆಯುವುದರಲ್ಲೂ ಕೂಡ ಫೇಮಸ್‌.

1 lakh monthly income in dairy farming snr

 ಅಂಶಿ ಪ್ರಸನ್ನಕುಮಾರ್‌

 ಮೈಸೂರು :  ಟಿ. ನರಸೀಪುರ ತಾಲೂಕು ಸೋಸಲೆ ಹೋಬಳಿ ಎಸ್‌ಕೆಪಿ ಅಗ್ರಹಾರದ ರೈತ ಇಂದ್ರೇಶ್‌ ಅವರು ಹೈನುಗಾರಿಕೆಯಲ್ಲಿ ಮಾಸಿಕ 1.10 ಲಕ್ಷ ರೂ. ಗಳಿಸುತ್ತಿದ್ದಾರೆ. ಜೊತೆಗೆ ಕುರಿ, ಮೇಕೆ ಕೂಡ ಸಾಕಾಣಿಕೆ ಮಾಡುತ್ತಿದ್ದಾರೆ. ಭತ್ತ ಬೆಳೆಯುವುದರಲ್ಲೂ ಕೂಡ ಫೇಮಸ್‌.

ಇಂದ್ರೇಶ್‌ (43) ಅವರು ಎಸ್ಸೆಸ್ಸೆಲ್ಸಿವರೆಗೆ ಓದಿದ್ದು, ಅವರಿಗೆ 10 ಎಕರೆ ಜಮೀನಿದೆ. ರಾಮಸ್ವಾಮಿ ನಾಲೆಯಿಂದ ನೀರಾವರಿ ಸೌಲಭ್ಯವಿದೆ. ಇದರಿಂದಾಗಿ ಹೆಚ್ಚಾಗಿ ಭತ್ತ ಬೆಳೆಯುತ್ತಾರೆ. ಎಕರೆಗೆ 35-40 ಚೀಲದಷ್ಟುಇಳುವರಿ ಪಡೆಯುತ್ತಿದ್ದಾರೆ. ಭತ್ತದ ಮಾರಾಟದಿಂದ ವಾರ್ಷಿಕ 1.50 ಲಕ್ಷ ರೂ. ಆದಾಯ ಬರುತ್ತಿದೆ. ಇದೀಗ 1,300 ಅಡಕೆ ಸಸಿಗಳನ್ನು ಹಾಕಿದ್ದಾರೆ. ಇದಲ್ಲದೇ ಜಾನುವಾರುಗಳ ಮೇವಿಗೆ ನೇಪಿಯರ್‌ ಹುಲ್ಲು, ಜೋಳ ಕೂಡ ಬೆಳೆಯುತ್ತಾರೆ.

ಕೃಷಿಯ ಜೊತೆಗೆ ಸ್ವಾವಲಂಬಿ ಜೀವನ ಸಾಗಿಸಲು ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅವರ ಬಳಿ 18 ಎಚ್‌ಎಫ್‌ ಜಾನುವಾರುಗಳಿವೆ. ಈ ಪೈಕಿ 12 ಹಾಲುಕೊಡುವ ಹಸುಗಳು, ಉಳಿದವು ಕರುಗಳು. ಪ್ರತಿನಿತ್ಯ 100 ಲೀಟರ್‌ ಹಾಲನ್ನು ತಿಪಟೂರಿನ ‘ಅಕ್ಷಯಕಲ್ಪ’ ಡೇರಿಗೆ ಪೂರೈಸುತ್ತಾರೆ. ಯಂತ್ರಗಳ ಸಹಾಯದಿಂದ ಹಾಲು ಕರೆಯಲಾಗುತ್ತದೆ.

ಮೊದಲು ಇವರ ಗ್ರಾಮಕ್ಕೆ ಬಂದು ತೆಗೆದುಕೊಂಡು ಹೋಗುತ್ತಿದ್ದರು. ಮರ್ನಾಲ್ಕು ಊರುಗಳ ಉಸ್ತುವಾರಿಯನ್ನು ಇಂದ್ರೇಶ್‌ ನೋಡಿಕೊಳ್ಳುತ್ತಿದ್ದರು. ಈಗ ಅವರು ಅರಕೆರೆಗೆ ತೆಗೆದುಕೊಂಡು ಕೊಡುತ್ತಾರೆ. ಅಲ್ಲಿನ ಬಿಎಂಸಿಯವರು ತಿಪಟೂರಿಗೆ ಪೂರೈಸುತ್ತಾರೆ. ಪ್ರತಿ ಲೀಟರ್‌ಗೆ 37 ರೂ.ಗಳಂತೆ ಹಣ ನೀಡುತ್ತಾರೆ.

ಅವರ ಬಳಿ 60 ಬಂಡೂರು ಕ್ರಾಸ್‌ ಕುರಿಗಳು ಹಾಗೂ 40 ಮೇಕೆಗಳಿವೆ. ಕೆಲವರು ಫಾರಂಗೆ ಬಂದು ಖರೀದಿಸುತ್ತಾರೆ. ಇಲ್ಲವೇ ಇವರೇ ಕಿರುಗಾವಲು ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಇದರಿಂದ ವಾರ್ಷಿಕ 2.50 ಲಕ್ಷ ರೂ. ಲಾಭ ಬರುತ್ತಿದೆ.

ಸಂಪರ್ಕ ವಿಳಾಸ: ಇಂದ್ರೇಶ್‌ ಬಿನ್‌ ಲೇಟ್‌ ಶಿವಣ್ಣ, ಎಸ್‌ಕೆಪಿ ಅಗ್ರಹಾರ, ಸೋಸಲೆ ಹೋಬಳಿ, ಟಿ. ನರಸೀಪುರ ತಾಲೂಕು, ಮೈಸೂರು ಜಿಲ್ಲೆ, ಮೊಃ 98455 45662

ವ್ಯವಸಾಯದಲ್ಲಿ ಆಳುಕಾಳಿಗಿಂತ ಸ್ವಂತ ಮಾಡಿದ್ರೆ ಯಶಸ್ಸು ಗ್ಯಾರಂಟಿ. ಅದರಲ್ಲೂ ಊರೊಂದು ಕಡೆ, ಜಮೀನೊಂದು ಕಡೆ ಇರಬಾರ್ದು. ಎರಡೂ ಒಂದೆ ಕಡೆ ಇದ್ರೆ ಕೆಲ್ಸ ಮಾಡೋದು, ಜಮೀನು ನೋಡ್ಕೊಳ್ಳೊದು ಸುಲಭ. ಹಸು-ಕುರಿ- ಮೇಕೆ ಸಾಕಾಣಿಕೆಯಲ್ಲೂ ಮೇವು, ಔಷಧಿ ಅಂತಾ ಖರ್ಚು ಬರುತ್ತದೆ.

- ಇಂದ್ರೇಶ್‌, ಎಸ್‌ಕೆಪಿ ಅಗ್ರಹಾರ

Latest Videos
Follow Us:
Download App:
  • android
  • ios