ಚಾಮರಾಜನಗರ(ಫೆ.26): ಜಿಲ್ಲೆಯ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ 1,48,73,233 ನಗದು ಹಣ ಸಂಗ್ರಹವಾಗಿದೆ. ಹೌದು, ನಿನ್ನೆ ಬೆಳಿಗ್ಗೆಯಿಂದ ತಡ ರಾತ್ರಿವರೆಗೂ ನಡೆದ ಹುಂಡಿ ಎಣಿಕೆಯಲ್ಲಿ ನಗದು ಜೊತೆಗೆ 31 ಗ್ರಾಂ ಚಿನ್ನ, 2.82 ಕೆ.ಜಿ.ಬೆಳ್ಳಿ ಸಂಗ್ರಹವಾಗಿದೆ.

ಹುಂಡಿಯಲ್ಲಿ 44 ವಿದೇಶಿ ನೋಟುಗಳೂ ಸಹ ಪತ್ತೆಯಾಗಿವೆ. 9 ಯು.ಎಸ್.ಎ ಡಾಲರ್, 15 ಇಂಗ್ಲೆಂಡ್ ಪೌಂಡ್, ಹಾಗೂ ಮಲೇಶಿಯಾದ 20 ರಿಂಗ್ ಗಿಟ್ ನೋಟುಗಳನ್ನು ಭಕ್ತರು ಅರ್ಪಿಸಿದ್ದಾರೆ. 

ಮಲೆ ಮಹದೇಶ್ವರ ಹುಂಡಿಯಲ್ಲಿ ದಾಖಲೆ ಸಂಗ್ರಹ; ಹರಿದು ಬಂತು ಕೋಟಿ ಕೋಟಿ ಹಣ!

ಈ ಮೂಲಕ ಮಲೆಮಾದಪ್ಪ ಮತ್ತೆ ಕೋಟ್ಯಧೀಶನಾಗಿದ್ದಾನೆ. ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ ಭಕ್ತರು ಧಾರಳಾವಾಗಿ ಕಾಣಿಕೆಯನ್ನ ಅರ್ಪಿಸಿದ್ದಾರೆ.