ನಿಷೇಧಿತ ಹುಕ್ಕಾ ನಿಕೋಟಿನ್ ಉತ್ಪನ್ನಗಳನ್ನ ಅನಧಿಕೃತವಾಗಿ ಶೇಖರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಒಂಭತ್ತು ಮಂದಿಯನ್ನ ಬಂಧಿಸಿದ್ದಾರೆ. 

ಬೆಂಗಳೂರು(ಫೆ.13):  ಚಾಮರಾಜಪೇಟೆ, ಮಹಾದೇವಪುರ, ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ ವೇಳೆ ಒಂದು ಕೋಟಿ 45 ಲಕ್ಷ ಮೌಲ್ಯದ ನಿಷೇಧಿತ ನಿಕೋಟಿನ್ ಉತ್ಪನ್ನವನ್ನ ವಶಕ್ಕೆ ಪಡೆಯಲಾಗಿದೆ. 

ನಿಷೇಧಿತ ಹುಕ್ಕಾ ನಿಕೋಟಿನ್ ಉತ್ಪನ್ನಗಳನ್ನ ಅನಧಿಕೃತವಾಗಿ ಶೇಖರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಒಂಭತ್ತು ಮಂದಿಯನ್ನ ಬಂಧಿಸಿದ್ದಾರೆ. 

ರೇಸ್‌ ಕೋರ್ಸ್‌ನಲ್ಲಿ ರೌಡಿಗಳಿಂದ ಬೆಟ್ಟಿಂಗ್‌ ದಂಧೆ, ಸಿಸಿಬಿ ದಾಳಿಗೆ ಪೊಲೀಸ್‌ ಆಯುಕ್ತರ ಪ್ರತಿಕ್ರಿಯೆ

ದಾಳಿ ವೇಳೆ 1 ಕೋಟಿ 45 ಲಕ್ಷ ಮೌಲ್ಯದ ನಿಕೋಟಿನ್ ಉತ್ಪನ್ನ, 1.10 ಲಕ್ಷ ನಗದು, 11 ಮೊಬೈಲ್ 1 ಟಾಟಾ ಏಸ್ ವಾಹನವನ್ನ ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಮಹಿಳಾ ಸಂರಕ್ಷಣದಳದಿಂದ ದಾಳಿ ನಡೆಸಲಾಗಿದೆ. 

ಗ್ಯಾಸ್ ಸಿಲಿಂಡರ್ ಅಕ್ರಮ ರೀ ಫಿಲ್ಲಿಂಗ್ ಅಡ್ಡೆ ಮೇಲೂ ಸಿಸಿಬಿ ದಾಳಿ

ಗ್ಯಾಸ್ ಸಿಲಿಂಡರ್ ಅಕ್ರಮ ರೀ ಫಿಲ್ಲಿಂಗ್ ಅಡ್ಡೆ ಮೇಲೂ ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ದಾಳಿ ಮಾಡಿದ್ದಾರೆ. 8 ಲಕ್ಷ ಮೌಲ್ಯದ 110 ಗ್ಯಾಸ್ ಸಿಲಿಂಡರ್‌ಗಳನ್ನ ವಶಕ್ಕೆ ಪಡೆಯಾಗಿದೆ. ಅನಧಿಕೃತ ಕಂಪನಿಗಳ ಲೇಬಲ್ ಬಳಸಿ ಕಬ್ಬಿಣದ ರಾಡ್ ಮೂಲಕ ಅಕ್ರಮ ರೀ ಫಿಲ್ಲಿಂಗ್ ಮಾಡುತ್ತಿದ್ರು. ಜನನಿಬಿಡ ಪ್ರದೇಶದಲ್ಲಿ ಯಾವುದೇ ಅನುಮತಿಯಿಲ್ಲದೇ ರೀ ಫಿಲ್ಲಿಂಗ್ ನಡೆಸಲಾಗ್ತಿತ್ತು. ಓರ್ವ ಆರೋಪಿ ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ್ದ 110 ಸಿಲಿಂಡರ್ ಹಾಗೂ ಎರಡು ಟಾಟಾ ಏಸ್ ವಾಹನ ವಶಪಡಿಸಿಕೊಳ್ಳಲಾಗಿದೆ.