Asianet Suvarna News Asianet Suvarna News

'ಆಂಧ್ರಪ್ರದೇಶದ ಸಹವಾಸವೇ ಬೇಡ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ'

ಕರ್ನೂಲ್ ಲೋಕಸಭಾ ಕ್ಷೇತ್ರವನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಿ ಎಂದ ಪಿ.ತಿಕ್ಕಾರೆಡ್ಡಿ| ಬೆಂಗಳೂರೇ ನಮಗೆ ರಾಜಧಾನಿಯಾಗಿರಲಿ| ಕರ್ನೂಲ್‌ನಲ್ಲಿ ಹೈಕೋರ್ಟ್ ಮಾಡಿದರೆ ನಮಗೇನು ಪ್ರಯೋಜನವಿಲ್ಲ| ವಿಶಾಖಪಟ್ಟಣಂಗೆ ಹೋಗಿ ಬರಲು ಎರಡು ದಿನ ಬೇಕು| ಅಷ್ಟು ದೂರದ ರಾಜಧಾನಿ ನಮಗೆ ಬೇಡ. ಒಮ್ಮೊಮ್ಮೆ ಒಂದೊಂದು ರಾಜಧಾನಿಯನ್ನು ಬದಲಿಸುತ್ತಾ ಹೋದರೆ ನಾವು ನೆಮ್ಮದಿಯಿಂದ ಬದುಕುವುದು ಹೇಗೆ ಎಂದು ಪ್ರಶ್ನಿಸಿದ ತಿಕ್ಕಾರೆಡ್ಡಿ|

'TDP Leader Tikkareddy Talks Over Andhra Pradesh CM JaganMohan Reddy Decision
Author
Bengaluru, First Published Jan 2, 2020, 11:12 AM IST

ರಾಯಚೂರು(ಜ.02): ಆಂಧ್ರಪ್ರದೇಶದ ಕರ್ನೂಲ್ ಲೋಕಸಭಾ ಕ್ಷೇತ್ರವನ್ನು ಕರ್ನಾಟಕಕ್ಕೆ ಸೇರಿಸಿ ಎಂದು ತೆಲುಗು ದೇಶಂ ಪಕ್ಷ ಹೊಸ ಹೋರಾಟವನ್ನು ಆರಂಭಿಸಿದ್ದಾರೆ. 

ಆಂಧ್ರ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನರೆಡ್ಡಿ ನೂತನ ಮೂರು ರಾಜಧಾನಿಗಳ ಘೋಷಣೆ ಮಾಡಿದ್ದಾರೆ. ಮೂರು ನಗರಗಳು ರಾಜಧಾನಿಯೆಂದು ಘೋಷಿಸಿದ್ದರಿಂದ ಜನರು ಆಕ್ರೋಶಗೊಂಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಗ್ಗೆ ಮಾತನಾಡಿದ ಟಿಡಿಪಿ ಪಕ್ಷದ ಮಂತ್ರಾಲಯ ಉಸ್ತುವಾರಿ ಪಿ.ತಿಕ್ಕಾರೆಡ್ಡಿ ಅವರು, ನಮಗೆ ಆಂಧ್ರಪ್ರದೇಶದ ಸಹವಾಸವೇ ಬೇಡ, ನಮ್ಮನ್ನು ಕರ್ನಾಟಕದ ಬಳ್ಳಾರಿ ಜಿಲ್ಲೆಗೆ ಸೇರಿಸಿ ಬೆಂಗಳೂರೇ ನಮಗೆ ರಾಜಧಾನಿಯಾಗಿರಲಿ ಎಂದು ಹೇಳಿದ್ದಾರೆ. 

ಕರ್ನೂಲ್‌ನಲ್ಲಿ ಹೈಕೋರ್ಟ್ ಮಾಡಿದರೆ ನಮಗೇನು ಪ್ರಯೋಜನವಿಲ್ಲ. ವಿಶಾಖಪಟ್ಟಣಂಗೆ ಹೋಗಿ ಬರಲು ಎರಡು ದಿನ ಬೇಕು. ಅಷ್ಟು ದೂರದ ರಾಜಧಾನಿ ನಮಗೆ ಬೇಡ. ಒಮ್ಮೊಮ್ಮೆ ಒಂದೊಂದು ರಾಜಧಾನಿಯನ್ನು ಬದಲಿಸುತ್ತಾ ಹೋದರೆ ನಾವು ನೆಮ್ಮದಿಯಿಂದ ಬದುಕುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. 

1956 ರವರೆಗೆ ನಾವು ಬಳ್ಳಾರಿ ಜಿಲ್ಲೆಗೆ ಒಳಪಟ್ಟಿದ್ದೆವು, ನಾವೆಲ್ಲಾ ಕನ್ನಡ ಭಾಷೆಯನ್ನೇ ಮಾತನಾಡುತ್ತೇವೆ. ಬಳ್ಳಾರಿಯಲ್ಲಿ ಹೊಸಪೇಟೆ ತುಂಗಭದ್ರಾ ಡ್ಯಾಂ ಇದೆ. ನಮಗೆ ಕೃಷಿಗೆ ಅನುಕೂಲವಾಗುತ್ತದೆ. ನೀರು ,ಮಕ್ಕಳಿಗೆ ಓದು ಎಲ್ಲಾ ಸಿಗುತ್ತೆ ನೀವು ಎಷ್ಟು ರಾಜಧಾನಿಗಳನ್ನಾದರೂ ಮಾಡಿಕೊಳ್ಳಿ, ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಅಂತ ಟಿಡಿಪಿ ಮುಖಂಡ ತಿಕ್ಕಾರೆಡ್ಡಿ ಆಗ್ರಹಿಸಿದ್ದಾರೆ.  ಆಂಧ್ರ ಸಿಎಂ ಜಗನ್ ಮೋಹನರೆಡ್ಡಿ ಕ್ರಮ ಖಂಡಿಸಿ ಟಿಡಿಪಿ ಪಕ್ಷ ಆಂಧ್ರದ ಮಂತ್ರಾಲಯದಲ್ಲಿ ಪ್ರತಿಭಟನೆಗೆ ಚಿಂತನೆ ನಡೆಸುತ್ತಿದೆ. 

ಆಂಧ್ರ ಸರ್ಕಾರ ಆಡಳಿತಾತ್ಮಕ ರಾಜಧಾನಿಯಾಗಿ ವಿಶಾಖಪಟ್ನಂ, ಹೈಕೋರ್ಟ್‌ಗಾಗಿ ಕರ್ನೂಲ್, ಭೂಮಿ ಕಳೆದುಕೊಂಡ ರೈತರಿಗಾಗಿ ಅಮರಾವತಿಯನ್ನು ರಾಜಧಾನಿಗಳಾಗಿ ಸಿಎಂ ಜಗನ್ ಮೋಹನರೆಡ್ಡಿ ಘೋಷಣೆ ಮಾಡಿದ್ದಾರೆ. 
 

Follow Us:
Download App:
  • android
  • ios