Asianet Suvarna News Asianet Suvarna News

.ಕೋಲಾರದಲ್ಲಿ ಎಚ್ಡಿಕೆ ಸ್ಪರ್ಧಿಸಲು ಒತ್ತಡ

ಜಿಲ್ಲೆಯ ಎಲ್ಲ ಮುಖಂಡರು ಸೇರಿ ಜೆಡಿಎಸ್‌ನಿಂದ ಕೋಲಾರ ವಿಧಾನ ಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯ ಮಂತ್ರಿ ಎಚ್‌.ಡಿ.ಕುಮಾರಸ್ವಾಮಿರನ್ನು ಚುನಾವಣಾ ಕಣಕ್ಕೆ ಇಳಿಸಲು ನಿರ್ಧಾರಿಸಿರುವುದಾಗಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು,

.Pressure for HD Kumaraswamy  to contest in Kolar snr
Author
First Published Oct 31, 2022, 5:46 AM IST

  ಕೋಲಾರ (ಅ.31): ಜಿಲ್ಲೆಯ ಎಲ್ಲ ಮುಖಂಡರು ಸೇರಿ ಜೆಡಿಎಸ್‌ನಿಂದ ಕೋಲಾರ ವಿಧಾನ ಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯ ಮಂತ್ರಿ ಎಚ್‌.ಡಿ.ಕುಮಾರಸ್ವಾಮಿರನ್ನು ಚುನಾವಣಾ ಕಣಕ್ಕೆ ಇಳಿಸಲು ನಿರ್ಧಾರಿಸಿರುವುದಾಗಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು,

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್‌  (JDS) ಪಂಚರತ್ನ ಯಾತ್ರೆಗೆ ಕುರುಡುಮಲೆಯ ಶ್ರೀ ವಿನಾಯಕಸ್ವಾಮಿಗೆ ಪ್ರಥಮವಾಗಿ ಪೂಜೆಸಲ್ಲಿಸುವ ಮೂಲಕ ನವೆಂಬರ್‌ 1ರಂದು ಬೆಳಿಗ್ಗೆ 9.30ಕ್ಕೆ ಪಕ್ಷದ ವರಿಷ್ಠ ದೇವೆಗೌಡರು (Devegowda)  ಚಾಲನೆ ನೀಡಲಿದ್ದಾರೆ. ಮುಳಬಾಗಿಲು ನ.1, ಬಂಗಾರಪೇಟೆ 2ರಂದು, ಮಾಲೂರು 3ರಂದು, ಕೋಲಾರ 4 ರಂದು ಹಾಗೂ ಶ್ರೀನಿವಾಸಪುರ 5 ರಂದು ಪಂಚರತ್ನ ಯಾತ್ರೆಯು 1 ರಿಂದ 5ರವರೆಗೆ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದರು.

ಜಿಲ್ಲೆಯ ಅಳಿಯ ಕುಮಾರಸ್ವಾಮಿ

ಸಿದ್ದರಾಮಯ್ಯ ಅವರಿಗಿಂತ ಕುಮಾರಸ್ವಾಮಿಗೆ ಕೋಲಾರದ ನಂಟು ಹೆಚ್ಚು ಇದೆ. ಅವಿಭಜಿತ ಜಿಲ್ಲೆಯ ಆಳಿಯ ಕುಮಾರಸ್ವಾಮಿ. ಕೋಲಾರ ಜಿಲ್ಲೆಯಲ್ಲಿ ಸಿದ್ದರಾಮಯ್ಯನವರಿಗಿಂತ ಕುಮಾರಸ್ವಾಮಿ ಬಗ್ಗೆ ಜನತೆಗೆ ಒಲವು ಇದೆ, ಕೋಲಾರದಲ್ಲಿ ಜೆಡಿಎಸ್‌ ಅಭ್ಯರ್ಥಿಗಳಿಗೆ ಕೊರತೆ ಇಲ್ಲ ಎಂದರು.

ಜೆಡಿಎಸ್‌ ನಾಯಕ ಸಮೃದ್ಧಿ ಮಂಜುನಾಥ್‌ ಮಾತನಾಡಿ, ನ.1ರಂದು ಬೆಳಿಗ್ಗೆ 9.30ಕ್ಕೆ ಕುರುಡುಮಲೆ, 11.30ಕ್ಕೆ ಶ್ರೀ ಆಂಜನೇಯಸ್ವಾಮಿ ದೇವಾಲಯ, ಮಧ್ಯಾಹ್ನ 1 ಗಂಟೆಗೆ ದರ್ಗಾ ಮಸೀದಿಯಲ್ಲಿ ಪ್ರಾರ್ಥನೆ, ಮಧ್ಯಾಹ್ನ 3 ಗಂಟೆಗೆ ಬಹಿರಂಗ ಸಭೆ ನಡೆಯಲಿದೆ. ಸಭೆಯಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದರು,

ಎಂಎಲ್‌ಸಿ ಇಂಚರ ಗೋವಿಂದರಾಜು ಮಾತನಾಡಿ, ಬಿಜೆಪಿ ಸರ್ಕಾರದ ಕಂದಾಯ ಸಚಿವ ಅಶೋಕ್‌ ಜೆಡಿಎಸ್‌ ಎರಡಂಕಿ ದಾಟುವುದಿಲ್ಲ ಎಂದಿರುವುದು 99 ಸ್ಥಾನ ಎಂದು ಅರ್ಥ. ಆದರೆ ನಾವು 123 ಸ್ಥಾನಗಳು ಬರುತ್ತೇವೆ ಎಂದು ಹೇಳುತ್ತಿದ್ದೇವೆ ಇನ್ನೊಂದು 24 ಸ್ಥಾನಗಳನ್ನು ಹೆಚ್ಚಾಗಿ ಹೇಳಿದ್ದೇವೆ. ಅವರು ತಿಳಿಸಿರುವುದು ಸತ್ಯಕ್ಕೆ ಸಮೀಪ ಇರುವುದಾಗಿ ಟಾಂಗ್‌ ನೀಡಿದರು.

ಮಾಜಿ ಎಂಎಲ್‌ಸಿ ಚೌಡರೆಡ್ಡಿ, ತಾಲೂಕು ಜೆಡಿಎಸ್‌ ಅಧ್ಯಕ್ಷೆ ರಾಜೇಶ್ವರಿ, ಅಕಾಂಕ್ಷಿಗಳಾದ ಕೋಲಾರದ ಸಿ.ಎಂ.ಆರ್‌. ಶ್ರೀನಾಥ್‌, ಬಂಗಾರಪೇಟೆ ಮಲ್ಲೇಶ್‌, ಅಂಜುಮಾನ್‌ ಸಂಸ್ಥೆಯ ಅಧ್ಯಕ್ಷ ಜಮೀರ್‌ ಆಹಮದ್‌, ಮುಖಂಡರಾದ ಬಣಕನಹಳ್ಳಿ ನಟರಾಜ್‌ ಇದ್ದರು.

JDS ಬೆಂಬಲಿತರ ಆಯ್ಕೆ

ಪಿರಿಯಾಪಟ್ಟಣ ತಾಲೂಕು ಹಲಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ 12 ಸ್ಥಾನಗಳಿಗೆ ಚುನಾವಣೆ ನಡೆದು ಎಲ್ಲಾ ಸ್ಥಾನಗಳಿಗೂ ಜೆಡಿಎಸ್‌ (JDS)  ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಇವರಲ್ಲಿ ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ದೇವರಾಜು ಎಂಬವರು ಅವಿರೋಧವಾಗಿ ಆಯ್ಕೆಯಾದರೆ, ಉಳಿದ 11 ಸ್ಥಾನಗಳಿಗೆ ಚುನಾವಣೆ (Election)  ಮೂಲಕ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ. ಪ್ರಸಾದ್‌ ತಿಳಿಸಿದ್ದಾರೆ.

6 ಸಾಮಾನ್ಯ ಸ್ಥಾನಗಳಿಗೆ ರೆಹಮತ್‌ ಉಲ್ಲಾ, ಸೈಯದ್‌ ಹಾಫೀಜ  ಪಯಾಜ್‌ ಪಾಷ, ಅನ್ವರ್‌ ಅಹಮದ್‌, ಶೇಖ್‌ ಯೂನಸ್‌, ನೂರುಲ್ಲಾ ಷರೀಫ್‌, ಜಾವೀದ್‌ ಪಾಷ, ಮಹಿಳಾ ಮೀಸಲು ಸ್ಥಾನಕ್ಕೆ ಫರ್ಜನ್‌ ಬಾನು, ಲಲಿತಮ್ಮ, ಪ.ಜಾತಿ ಮೀಸಲು ಸ್ಥಾನಕ್ಕೆ ಅಣ್ಣಯ್ಯ ಹಾಗೂ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಉಬೇದುಲ್ಲಾ ಆಯ್ಕೆಯಾಗಿದ್ದಾರೆ.

ಆರೋಪ: ಚುನಾವಣೆ ಹಿನ್ನೆಲೆ ಪರಾಜಿತ ಅಭ್ಯರ್ಥಿಗಳು ಚುನಾವಣೆಗೆ ಮತದಾರರ ಪಟ್ಟಿಯನ್ನು ಸಹಕಾರ ಸಂಘಗಳ ಬೈಲಾ ರೀತಿ ಪಟ್ಟಿಮಾಡದೆ ಬೇಕಾಗಿರುವವರಿಗೆ ಪಟ್ಟಿಮಾಡಿ ಚುನಾವಣೆ ನಡೆಸಿದ್ದಾರೆ. ಇದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಬೇಕು ಎಂದು ವಕೀಲರಿಂದ ಸಂಘಕ್ಕೆ, ಮೈಮೂಲ್‌ ಅಧ್ಯಕ್ಷರಿಗೆ ಹಾಗೂ ಸಹಕಾರ ಇಲಾಖೆಗೆ ತಿಳಿವಳಿಕೆ ಪತ್ರ ರವಾನಿಸಲಾಗಿದೆ.

ಚುನಾವಣೆ ದಿನವೇ ವಿವಾಹವಾದ ಮದುವೆ ಗಂಡು ಜಾವೀದ್‌ ಪಾಷ ಸಂಘದ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿರುವುದು ವಿಶೇಷ. ಈ ವೇಳೆ ಗ್ರಾಮದ ಹಲವು ಜೆಡಿಎಸ್‌ ಮುಖಂಡರು ಹಾಗೂ ಯುವಕರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

 

Follow Us:
Download App:
  • android
  • ios