ಕರ್ನಾಟಕದ ಫ್ಯಾಮಿಲಿ ಪಾಲಿಟಿಕ್ಸ್ ದೇಶದಲ್ಲೆ ಹೆಚ್ಚು : 10 ಮಂದಿ ಮಾಜಿ ಸಿಎಂ ಪುತ್ರರ ಸ್ಪರ್ಧೆ

10 Ex Cm Sons 7 Father and sons at Karnataka 2018 assembly Battle
Highlights

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ವಿಪರೀತವಾಗಿ ವ್ಯಾಪಿಸುತ್ತಿದೆ. 10 ಮಂದಿ ಮಾಜಿ ಸಿಎಂ ಪುತ್ರರು, 7 ಅಪ್ಪ ಮಕ್ಕಳು, ಸಹೋದರರು ಮೂರು ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ.ಇನ್ನುಳಿದಂತೆ ಹಲವು ಶಾಸಕರು, ಸಚಿವರು, ಮಾಜಿಗಳು, ಸಂಸದರ ಮಕ್ಕಳು ಕೂಡ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. 

ಬೆಂಗಳೂರು(ಏ.23): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ವಿಪರೀತವಾಗಿ ವ್ಯಾಪಿಸುತ್ತಿದೆ. 10 ಮಂದಿ ಮಾಜಿ ಸಿಎಂ ಪುತ್ರರು, 7 ಅಪ್ಪ ಮಕ್ಕಳು, ಸಹೋದರರು ಮೂರು ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ.

10 ಮಾಜಿ ಸಿಎಂ ಪುತ್ರರು ಕಣಕ್ಕೆ

ಕಾಂಗ್ರೆಸ್:

ಯತೀಂದ್ರ ಸಿದ್ದರಾಮಯ್ಯ: ಸಿಎಂ ಸಿದ್ದರಾಮಯ್ಯ ಪುತ್ರ (ವರುಣಾ, ಮೈಸೂರು)

ಅಜಯ್ ಧರ್ಮಸಿಂಗ್: ಮಾಜಿ ಸಿಎಂ ದಿ. ಧರ್ಮ ಸಿಂಗ್ ಪುತ್ರ (ಜೇವರ್ಗಿ ಕ್ಷೇತ್ರ, ಕಲಬುರಗಿ)

ದಿನೇಶ್ ಗುಂಡೂರಾವ್: ಮಾಜಿ ಸಿಎಂ ದಿ. ಗುಂಡೂರಾವ್ ಪುತ್ರ (ಗಾಂಧಿ ನಗರ ಕ್ಷೇತ್ರ)

ಶ್ರೀಪಾದ್ ರೇಣು: ಮಾಜಿ ಸಿಎಂ ದಿ. ಕೆಂಗಲ್ ಹನುಮಂತಯ್ಯ ಮೊಮ್ಮಗ (ಮಲ್ಲೇಶ್ವರಂ ಕ್ಷೇತ್ರ)

ಬಿಜೆಪಿ

ಬಸವರಾಜ ಬೊಮ್ಮಾಯಿ: ಮಾಜಿ ಮುಖ್ಯಮಂತ್ರಿ ದಿ. ಎಸ್.ಆರ್. ಬೊಮ್ಮಾಯಿ ಪುತ್ರ(ಶಿಗ್ಗಾವಿ, ಹಾವೇರಿ)

ಕುಮಾರ್ ಬಂಗಾರಪ್ಪ: ಮುಖ್ಯಮಂತ್ರಿ ದಿ. ಎಸ್.ಬಂಗಾರಪ್ಪ ಪುತ್ರ (ಸೊರಬ, ಶಿವಮೊಗ್ಗ)

ವಿಜಯೇಂದ್ರ ಯಡಿಯೂರಪ್ಪ: ಮಾಜಿ ಸಿಎಂ ಬಂಗಾರಪ್ಪ ಪುತ್ರ(ವರುಣಾ,ಮೈಸೂರು), ಇನ್ನು ಖಚಿತವಾಗಿಲ್ಲ

ಜೆಡಿಎಸ್

ಹೆಚ್.ಡಿ.ಕುಮಾರಸ್ವಾಮಿ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ದೇವೇಗೌಡ ಪುತ್ರ (ಚನ್ನಪಟ್ಟಣ ಹಾಗೂ ರಾಮನಗರ- ಬೆಂಗಳೂರು ಗ್ರಾಮಾಂತರ)

ಹೆಚ್.ಡಿ.ರೇವಣ್ಣ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ದೇವೇಗೌಡ ಪುತ್ರ (ಹೊಳೆನರಸೀಪುರ, ಹಾಸನ)

ಮಧು ಬಂಗಾರಪ್ಪ: ಮಾಜಿ ಸಿಎಂ ದಿ. ಎಸ್. ಬಂಗಾರಪ್ಪ ಪುತ್ರ (ಸೊರಬ, ಶಿವಮೊಗ್ಗ)

ಜೆಡಿಯು

ಮಹಿಮಾ ಪಾಟೀಲ್: ಮಾಜಿ ಸಿಎಂ ದಿ.ಜೆ.ಹೆಚ್.ಪಟೇಲ್ ಪುತ್ರ(ಚನ್ನಗಿರಿ, ದಾವಣಗೆರೆ)  

ಅಪ್ಪ ಮತ್ತು ಮಕ್ಕಳು

ಕಾಂಗ್ರೆಸ್

 1) ಸಿದ್ದರಾಮಯ್ಯ (ಚಾಮುಂಡೇಶ್ವರಿ, ಬಾದಾಮಿ),  ಯತೀಂದ್ರ(ವರುಣಾ)

2) ಶಾಮನೂರು ಶಿವಶಂಕರಪ್ಪ (ದಾವಣಗೆರೆ ದಕ್ಷಿಣ), ಎಸ್.ಎಸ್. ಮಲ್ಲಿಕಾರ್ಜುನ್(ದಾವಣಗೆರೆ ಉತ್ತರ)

3) ರಾಮಲಿಂಗಾ ರೆಡ್ಡಿ (ಬಿಟಿಎಂ ಬಡಾವಣೆ),  ಸೌಮ್ಯ ರಾಮಲಿಂಗಾ ರೆಡ್ಡಿ (ಜಯನಗರ)

4) ಟಿ.ಬಿ. ಜಯಚಂದ್ರ (ಶಿರಾ), ಸಂತೋಷ್ ಜಯಚಂದ್ರ (ಚಿಕ್ಕನಾಯಕನಹಳ್ಳಿ)

5) ಎಂ.ಕೃಷ್ಣಪ್ಪ (ವಿಜಯನಗರ), ಪ್ರಿಯಾ ಕೃಷ್ಣಪ್ಪ (ಗೋವಿಂದರಾಜ ನಗರ)

ಬಿಜೆಪಿ

1) ಗೋವಿಂದ ಕಾರಜೋಳ (ಮುಧೋಳ, ಬಾಗಲಕೋಟೆ), ಗೋಪಾಲ ಕಾರಜೋಳ (ನಾಗಠಾಣ, ಬಾಗಲಕೋಟೆ)

2) ಬಿ.ಎಸ್. ಯಡಿಯೂರಪ್ಪ (ಶಿಕಾರಿಪುರ, ಶಿವಮೊಗ್ಗ), ವಿಜಯೇಂದ್ರ(ವರುಣಾ, ಮೈಸೂರು) ( ವಿಜಯೇಂದ್ರ ಟಿಕೆಟ್ ಖಚಿತವಾಗಿಲ್ಲ)

ಸಹೋದರರು

ಜಾರಕಿಹೋಳಿ : ಸತೀಶ್ ಜಾರಕಿಹೋಳಿ (ಯಮಕರಡಿ, ಬೆಳಗಾವಿ- ಕಾಂಗ್ರೆಸ್), ರಮೇಶ್ ಜಾರಕಿಹೋಳಿ(ಗೋಕಾಕ್, ಬೆಳಗಾವಿ-ಕಾಂಗ್ರೆಸ್) ಬಾಲಚಂದ್ರ ಜಾರಕಿಹೋಳಿ(ಅರೆಬಾವಿ,ಬೆಳಗಾವಿ- ಬಿಜೆಪಿ)

ಲಾಡ್ : ಸಂತೋಷ್ ಲಾಡ್ (ಕಲಘಟಗಿ,ಧಾರವಾಡ), ಅನಿಲ್ ಲಾಡ್ (ಬಳ್ಳಾರಿ)

ಹೆಚ್'ಡಿ: ಹೆಚ್.ಡಿ. ರೇವಣ್ಣ(ಜೆಡಿಎಸ್, ಹೊಳೆನರಸೀಪುರ), ಹೆಚ್.ಡಿ.ಕುಮಾರಸ್ವಾಮಿ(ಜೆಡಿಎಸ್, ಚನ್ನಪಟ್ಟಣ, ರಾಮನಗರ)

ರೆಡ್ಡಿ: ಕರುಣಾಕರ ರೆಡ್ಡಿ(ಹರಪ್ಪನಹಳ್ಳಿ, ಬಳ್ಳಾರಿ),ಸೋಮಶೇಖರ ರೆಡ್ಡಿ(ಬಳ್ಳಾರಿ ಗ್ರಾಮೀಣ, ಬಳ್ಳಾರಿ)

ಇನ್ನುಳಿದಂತೆ ಹಲವು ಶಾಸಕರು, ಸಚಿವರು, ಮಾಜಿಗಳು, ಸಂಸದರ ಮಕ್ಕಳು ಕೂಡ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಇಷ್ಟು ದೊಡ್ಡಮಟ್ಟದ ಕುಟುಂಬ ರಾಜಕಾರಣ ದೇಶದ ಬೇರೆ ಯಾವ ರಾಜ್ಯದಲ್ಲೂ ಇಲ್ಲ ಎಂದು ರಾಜಕೀಯ ಪರಿಣಿತರು ಲೆಕ್ಕಾಚಾರ ಹಾಕಿದ್ದಾರೆ.

loader