ಈಶಾನ್ಯ ಶಿಕ್ಷಕರ ಕ್ಷೇತ್ರ: ಮತದಾರರ ಪಟ್ಟಿಗೆ ಹೆಸ್ರು ಸೇರಿಸಿ, ವಯಸ್ಸಿಗಿಂತ ಶಿಕ್ಷಣ ಮುಖ್ಯ
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ನೋಂದಣಿ ಕಾರ್ಯ ಪ್ರಾರಂಭವಾಗಿದೆ. ಆಗಾಗಿ ಮತದಾರರ ಪಟ್ಟಿಗೆ ನಿಮ್ಮ ಹೆಸರು ಸೇರಿಸಿ. ಈ ಮತದಾರರ ಪಟ್ಟಿಗೆ ಹೆಸರು ಸೇರಿಸಲು ವಯಸ್ಸಿಗಿಂತ ಶಿಕ್ಷಣ ಮುಖ್ಯ. ಹಾಗಾದ್ರೆ ಮತ ಪಟ್ಟಿಯಲ್ಲಿ ಹೆಸರು ಸೇರಿಸಲು ಯಾರು ಅರ್ಹರು..?
ಕಲಬುರಗಿ.[ಅ.30]: ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಹಾಲಿ ಸದಸ್ಯರ ಅವಧಿಯು 2020ರ ಜೂನ್ 30ರಂದು ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ನೋಂದಣಿ ಕಾರ್ಯ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಇದೇ ನವೆಂಬರ್ 6ರ ಒಳಗೆ ಅರ್ಹರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಕೊನೆ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.
ಯಶ್ ಮನಗೆ ಹೊಸ ಅತಿಥಿ; ಹಳೇ ಪೈಂಟಿಂಗ್‌ಗೆ ಕೋಟಿ ಕೋಟಿ; ಅ.30ರ ಟಾಪ್ 10 ಸುದ್ದಿ!
ಇಂದು [ಬುಧವಾರ] ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮುಂದಿನ ವರ್ಷ ನಡೆಯಲಿರುವ ಈಶಾನ್ಯ ಶಿಕ್ಷಕರ ಚುನಾವಣೆ ಕುರಿತಂತೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 2013ರ ಈಶಾನ್ಯ ಶಿಕ್ಷಕರ ಮತಕ್ಷೇತ್ರ ಚುನಾವಣೆ ಸಂದರ್ಭದಲ್ಲಿ ಒಟ್ಟಾರೆ ಕ್ಷೇತ್ರದಾದ್ಯಂತ 9742 ಶಿಕ್ಷಕ ಮತದಾರರು ನೊಂದಣಿ ಮಾಡಿಕೊಂಡಿದ್ದರು.
ಈ ಬಾರಿ ಇಂದಿನ ವರೆಗೆ ಕಲಬುರಗಿ ಜಿಲ್ಲೆಯಲ್ಲಿ ಕೇವಲ 939 ಮತದಾರರು ಮಾತ್ರ ನೊಂದಣಿಗೆ ಅರ್ಜಿ ಸಲ್ಲಿಸಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದಂತೆ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಪ್ರತಿ ಚುನಾವಣೆಗೆ ಮತದಾರು ಮತ ಚಲಾಯಿಸಲು ನೊಂದಣಿ ಮಾಡಿಕೊಳ್ಳಬೇಕಿರುತ್ತದೆ ಎಂದರು.
ತಾಪತ್ರಯ ಬಿಡಿ.. ಪಾಸ್ಪೋರ್ಟ್, ಆಧಾರ್, ಲೈಸೆನ್ಸ್ ಎಲ್ಲಾದಕ್ಕೂ ಒಂದೇ ಕಾರ್ಡ್
ಶೈಕ್ಷಣಿಕ ಸಂಸ್ಥೆಗಳು ಶಿಕ್ಷಕರಿಗೆ ಸರಿಯಾದ ಮಾಹಿತಿ ನೀಡುತಿಲ್ಲವಾದರಿಂದ ನೊಂದಣಿಗೆ ಜಿಲ್ಲೆಯಲ್ಲಿ ನಿರೀಕ್ಷಿತ ಅರ್ಜಿಗಳು ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಡಿ.ಸಿ. ಬಿ.ಶರತ್, ಇದು ಹೀಗೆ ಮುಂದುವರೆದಲ್ಲಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನವೆಂಬರ್ 6 ರೊಳಗೆ ಜಿಲ್ಲೆಯ ಅರ್ಹ ಮತದಾರ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಕೊಳ್ಳಲು ಪ್ರೆರೇಪಣೆಯಾಗಿ ಅರಿವು ಮೂಡಿಸುವ ಕಾರ್ಯಕ್ರಮಗಳು ಶಿಕ್ಷಣ ಸಂಸ್ಥೆಗಳಿಂದ ಹಮಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಮತ ಪಟ್ಟಿಯಲ್ಲಿ ಹೆಸರು ಸೇರಿಸಲು ಯಾರು ಅರ್ಹರು
ಭಾರತದ ಪ್ರಜೆಯಾಗಿದ್ದು, ಆ ಕ್ಷೇತ್ರದ ಸಾಮಾನ್ಯ ನಿವಾಸಿಯಾಗಿರುವ ಮತ್ತು 1-11-2019 ರಿಂದ ಹಿಂದಿನ 6 ವರ್ಷದ ಅವಧಿಯಲ್ಲಿ ಪ್ರೌಢ ಶಾಲೆಗಿಂತ ಕಡಿಮೆಯಿಲ್ಲದ ದರ್ಜೆಯಲ್ಲಿ ರಾಜ್ಯದ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನಿಷ್ಠ 3 ವರ್ಷ ಬೋಧನಾ ವೃತ್ತಿಯಲ್ಲಿ ನಿರತರಾಗಿರುವ ಪ್ರತಿಯೊಬ್ಬ ಶಿಕ್ಷಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಹನಾಗಿರುತ್ತಾರೆ.
ಬೋಧನಾ ವೃತ್ತಿ ಕುರಿತು ಸಂಬಂಧಿಸಿದ ಸಂಸ್ಥೆಯಿಂದ ಅನುಬಂಧ-2ರಲ್ಲಿ ಪ್ರಮಾಣಪತ್ರ ಒದಗಿಸುವುದು ಕಡ್ಡಾಯವಾಗಿರುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ ತಿಳಿಸಿದರು.
ಸಾಮಾನ್ಯವಾಗಿ ಜನರಲ್ ಎಲೆಕ್ಷನ್ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು 18 ವರ್ಷವಾಗಿರುವುದು ಕಡ್ಡಾಯ. ಆದ್ರೆ ಶಿಕ್ಷಕರ ಎಲೆಕ್ಷನ್ ಗೆ ಮತದಾರರಾಗಲು ಮೇಲೆ ತಿಳಿಸಿರುವಂತೆ ಶಿಕ್ಷಣ ಕಡ್ಡಾವಾಗಿರುತ್ತದೆ.