ಯಾದಗಿರಿ[ನ.12]: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ವಿವಿಧ ಕಂಪನಿಗಳಿಂದ ಉದ್ಯೋಗವನ್ನು ಕಲ್ಪಿಸಲು ಒಂದು ದಿನದ ನೇರ ಸಂದರ್ಶನ ನ. 14 ರಂದು ಬೆಳಗ್ಗೆ 10 ೦ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಜಿಲ್ಲಾಡಳಿತ ಭವನದ 2ನೇ ಮಹಡಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.

ಐಕಾನ್ ಸೆಕ್ಯೂರಿಟಿ ಸರ್ವಿಸ್ ಪ್ರೈ.ಲಿ.ಬಳ್ಳಾರಿ (ಜೆಎಸ್‌ಡಬ್ಲ್ಯೂ ಸ್ಟೀಲ್ ಲಿ.) ಯಲ್ಲಿ 100 ಸೆಕ್ಯೂರಿಟಿ ಗಾರ್ಡ್ ಹುದ್ದೆಗಳು ಖಾಲಿ ಇದ್ದು, ಎಸ್‌ಎಸ್‌ಎಲ್‌ಸಿ ಪಾಸ್ ಆಗಿರಬೇಕು. ವಯೋಮಿತಿ 18 ರಿಂದ 35 ಇದ್ದು, ಎತ್ತರ 166 ಸೆ.ಮೀ.,ತೂಕ 55-75 ಕೆ.ಜಿ ಇರಬೇಕು. ಚೆಸ್ಟ್ 70-75 ಹೊಂದಿರಬೇಕು. 

2700 ನಾವಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ: PUC ಮುಗಿಸಿದವರು ಅರ್ಜಿ ಹಾಕ್ಬಹುದು

ಸೆಕ್ಯೂರಿಟಿ ಸೂಪರ್‌ವೈಸರ್‌ 30 ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಪಾಸ್ ಅಗಿರಬೇಕು. ಆರ್ಮಿ, ನಾವಿ, ಎಕ್ಸ್- ಸರ್ವೀಸ್‌ಮೆನ್, ಏರ್‌ಫೋರ್ಸ್, ಮಿಲಿಟ್ರಿ ಫೋರ್ಸ್ 10 ವರ್ಷ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳ ವಯೋಮಿತಿ 30 ರಿಂದ 45 ಇದ್ದು, ಪಿಎಫ್, ಇಎಸ್‌ಐ ಮತ್ತು ವಸತಿ ಸೌಲಭ್ಯ ಇರುತ್ತದೆ.

ಕೋರ್‌ಗ್ರೀನ್ ಸುಗರ್ ಪ್ರೈ.ಲಿ. ತುಮಕೂರು ಯಾದಗಿರಿ ಜಿಲ್ಲೆಯಲ್ಲಿ 30 ಹುದ್ದೆ ಖಾಲಿಯಿದ್ದು, ಈ ನೇರ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ವ್ಯಕ್ತಿ ಪರಿಚಯ (ರೆಸ್ಯುಮ್/ಬಯೋಡಾಟಾ) ಪತ್ರದ ಪ್ರತಿಗಳನ್ನು ಹಾಗೂ ವಿದ್ಯಾರ್ಹತೆ ಪ್ರಮಾಣ ಪತ್ರ 371 (ಜೆ), ಜಾತಿ ಪ್ರಮಾಣಪತ್ರದ ಪ್ರತಿಗಳು ಹಾಗೂ 2 ಭಾವಚಿತ್ರ, ಆಧಾರ್‌ಕಾರ್ಡ್ ಕಡ್ಡಾಯವಾಗಿ ತರಬೇಕು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಂದರ್ಶನಕ್ಕೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ಮಾಹಿತಿಗೆ ಜಿಲ್ಲಾ ಉದ್ಯೋಗವಿ ನಿಮಯ ಕಚೇರಿ ಅಥವಾ ದೂ: 08473-253718, ಮೊ: 9448250868 ಸಂಪರ್ಕಿಸಿ.