Asianet Suvarna News Asianet Suvarna News

ಡಿಪ್ಲೋಮ ವಿದ್ಯಾರ್ಥಿಗಳಿಗೆ HALನಲ್ಲಿ ತರಬೇತಿ ಪಡೆಯುವ ಸುವರ್ಣಾವಕಾಶ!

ಡಿಪ್ಲೋಮ ಮುಗಿಸಿರುವ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ಟ್ರೈನಿಂಗ್; ಒಂದು ವರ್ಷದ ಫುಲ್ ಟರ್ಮ್ ತರಬೇತಿ

One Year Apprenticeship For Diploma Holders in HAL
Author
Bengaluru, First Published Jul 22, 2019, 8:57 PM IST

ಮೈಸೂರು (ಜು.22): ಹಿಂದೂಸ್ಥಾನ್ ಏರೋನ್ಯಾಟಿಕ್ಸ್ (ಲಿ) ಟೆಕ್ನಿಕಲ್ ಟ್ರೈನಿಂಗ್ ಇಸ್ಟಿಟ್ಯೂಟ್ ವತಿಯಿಂದ ಡಿಪ್ಲೋಮ ಮುಗಿಸಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.

ಡಿಪ್ಲೋಮ ಇನ್ ಏರೋನ್ಯಾಟಿಕಲ್ ಇಂಜಿನಿಯರಿಂಗ್, ಡಿಪ್ಲೋಮ ಇನ್ ಮ್ಯಾಕಾನೀಕಲ್ ಇಂಜಿನಿಯರಿಂಗ್, ಡಿಪ್ಲೋಮ ಇನ್ ಎಲೆಕ್ಟ್ರೀಕಲ್ & ಎಲೆಕ್ಟ್ರಾನೀಕ್ಸ್ ಇಂಜಿನಿಯರಿಂಗ್, ಡಿಪ್ಲೋಮ ಇನ್ ಎಲೆಕ್ಟ್ರೀಕಲ್ & ಕಮ್ಯೂನಿಕೇಷನ್ ಇಂಜಿನಿಯರಿಂಗ್, ಡಿಪ್ಲೋಮ ಇನ್ ಸಿವಿಲ್ ಇಂಜಿನಿಯರಿಂಗ್, ಡಿಪ್ಲೋಮ ಇನ್ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ಅಥವಾ ಇನ್ಫರ್ಮೇಷನ್ ಸೈನ್ಸ್ & ಇಂಜಿನಿಯರಿಂಗ್, ಡಿಪ್ಲೋಮ ಇನ್ ಮೇಟಲಾರ್ಜಿ ಇಂಜಿನಿಯರಿಂಗ್, ಡಿಪ್ಲೋಮ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಈ ಎಲ್ಲಾ ಟ್ರೇಡ್‍ಗಳಲ್ಲಿ 3 ವರ್ಷ ಡಿಪ್ಲೋಮದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ಫುಲ್ ಟರ್ಮ್ ಅಪ್ರೆಂಟಿಸ್ ಟ್ರೈನಿಂಗ್ ತರಬೇತಿ ನೀಡಲಾಗುವುದು.

ಇದನ್ನೂ ಓದಿ | ನಿರುದ್ಯೋಗಿಗಳಿಗೆ ಸಹಾಯಧನ! ಅರ್ಜಿ ಆಹ್ವಾನ

ಆಸಕ್ತ ಅರ್ಹ ಅಭ್ಯರ್ಥಿಗಳು ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣ ಎನ್.ಆರ್.ಮೊಹಲ್ಲಾ ಮೈಸೂರು, ಈ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2489972 ರಲ್ಲಿ ಸಂಪರ್ಕಿಸುವುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios