ಕೋಪದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಅರ್ಚಕರ ನೇಮಕಾತಿಗೆ ಅರ್ಜಿ ಆಹ್ವಾನ
- ಕೋಪದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಅರ್ಚಕರ ನೇಮಕಾತಿಗೆ ಅರ್ಜಿ ಆಹ್ವಾನ
- ಆಗಮ ಪ್ರವೀಣ ಪರೀಕ್ಷೆ ಉತ್ತೀರ್ಣ ಆಗಿರಬೇಕು: ತಹಸೀಲ್ದಾರ್
ಕೊಪ್ಪ (ನ.9): ಪಟ್ಟಣದ ಕೋಪದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಅರ್ಚಕರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ನ.17ರೊಳಗೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ಕೊಪ್ಪ ತಾಲೂಕು ತಹಸೀಲ್ದಾರ್ ವಿಮಲಾ ಸುಪ್ರಿಯಾ ತಿಳಿಸಿದ್ದಾರೆ.
ಚಿಕ್ಕಮಗಳೂರು: ದತ್ತಪೀಠ ಪೂಜೆಗೆ ಎರಡೂ ಸಮುದಾಯಕ್ಕೆ ಅವಕಾಶ
ಅರ್ಜಿದಾರರು ಕನಿಷ್ಠ 21 ವರ್ಷ ವಯಸ್ಸಿನವರಾಗಿರಬೇಕು. 45 ವರ್ಷ ಮೀರಿರಬಾರದು. ಮಾನ್ಯತೆ ಪಡೆದ ಸಂಸ್ಕೃತ ಶಾಲೆಯಿಂದ ಆಗಮ ಪ್ರವೀಣ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಉತ್ತಮ ಚಾರಿತ್ರ್ಯ ಉಳ್ಳವರಾಗಿರಬೇಕು. ಸಪ್ತವ್ಯಸನಗಳಿಂದ ಮುಕ್ತರಾಗಿರಬೇಕು. ಯಾವುದೇ ಸಾಂಕ್ರಾಮಿಕ ಅಥವಾ ಅಂಟುರೋಗದಿಂದ ನರಳುತ್ತಿರಬಾರದು. ದೇವಸ್ಥಾನಗಳಲ್ಲಿ ಧಾರ್ಮಿಕ ವಿಧಿಗಳಿಗೆ ಸಂಬಂಧಪಟ್ಟವೇದಮಂತ್ರಗಳನ್ನು ಅಥವಾ ಶ್ಲೋಕಗಳನ್ನು ಸ್ಪಷ್ಟವಾಗಿ ಯಾವುದೇ ತಪ್ಪಿಲ್ಲದಂತೆ ಪಠಿಸಲು ಸಮರ್ಥನಾಗಿರಬೇಕು. ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಬಾರದು ಎಂದು ತಿಳಿಸಲಾಗಿದೆ.
ಆಸಕ್ತ ಅರ್ಜಿದಾರರು ಆಧಾರ್ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿ, ಇತ್ತೀಚಿನ ಭಾವಚಿತ್ರ, ವಯಸ್ಸನ್ನು ದೃಢೀಕರಿಸುವ ದಾಖಲೆಗಳು (ಜಾತಿ ದೃಢೀಕರಣ ಪತ್ರ, ಜನನ ಪ್ರಮಾಣ ಪತ್ರ/ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ/ ಶಾಲಾ ವರ್ಗಾವಣೆ ಪ್ರಮಾಣ ಪತ್ರ), ಮಾನ್ಯತೆ ಪಡೆದ ಸಂಸ್ಕೃತ ಶಾಲೆಯಿಂದ ಆಗಮ ಪ್ರವೀಣ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿಈ ದಾಖಲೆಗಳೊಂದಿಗೆ ನ.17ರೊಳಗೆ ಕೊಪ್ಪ ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಭಕ್ತಿಯನ್ನೇ ಬಂಡವಾಳ ಮಾಡಿ ವಂಚನೆ, ದೇಗುಲದ ಕೋಟಿ ಕೋಟಿ ಹಣ ನುಂಗಿದ 'ಹೈಟೆಕ್' ಅರ್ಚಕರು!