ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ 2021ರ ನೇಮಕಾತಿ ಅರ್ಹರಿಂದ ಅರ್ಜಿ ಅಹ್ವಾನಿಸಿದ ICMR  ಆರಂಭಿಕ ವೇತನ 64,000 ರೂಪಾಯಿ

ನವದೆಹಲಿ(ಜೂ.12): ಕೊರೋನಾ ವಕ್ಕರಿಸಿದ ಬಳಿಕ ಬಹುತೇಕ ಭಾರತೀಯರು ಪ್ರತಿ ದಿನ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಕುರಿತು ಕೇಳುತ್ತಲೇ ಇದ್ದಾರೆ. ಇದೀಗ ಇದೇ ICMR ಮಂಡಳಿ ನೇಮಕಾತಿ ಆರಂಭಿಸಿದೆ. ಅರ್ಹರಿಂದ ಅರ್ಜಿ ಅಹ್ವಾನಿಸಿದೆ. ಹಂತ ಹಂತವಾಗಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ICMR ನಿರ್ಧರಿಸಿದೆ.

ಗ್ರಾಮೀಣ ಬ್ಯಾಂಕುಗಳಲ್ಲಿ 10,447 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಗುಜರಾಯಿಸಿ

2021ರ ಜೂನ್ 25ರೊಳಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಐಸಿಎಂಆರ್ ನೇಮಕಾತಿ 2021 ರ ಅಧಿಕೃತ ಅಧಿಸೂಚನೆ ಪರಿಶೀಲಿಸಬೇಕು ಎಂದು ICMR ಪ್ರಕಟಣೆಯಲ್ಲಿ ಹೇಳಿದೆ.

ಹುದ್ದೆ ನೇಮಕಾತಿ ಮಾಹಿತಿ:
ಪ್ರಾಜೆಕ್ಟ್ ರಿಸರ್ಚ್ ಸೈಂಟಿಸ್ಟ್ II: 01
ಪ್ರಾಜೆಕ್ಟ್ ರಿಸರ್ಚ್ ಅಸೋಸಿಯೇಟ್ III: 01
ಪ್ರಾಜೆಕ್ಟ್ ಕನ್ಸಲ್ಟೆಂಟ್ (Non-Medical): 01

ವೇತನ:
ಪ್ರಾಜೆಕ್ಟ್ ರಿಸರ್ಚ್ ಸೈಂಟಿಸ್ಟ್ II: 01 : 64,000 ರೂಪಾಯಿ
ಪ್ರಾಜೆಕ್ಟ್ ರಿಸರ್ಚ್ ಅಸೋಸಿಯೇಟ್ III: 01: 54,000 ರೂಪಾಯಿ + HRA
ಪ್ರಾಜೆಕ್ಟ್ ಕನ್ಸಲ್ಟೆಂಟ್ (Non-Medical): 01: 1,00,000 ರೂಪಾಯಿ

ವಯೋಮಿತಿ:
ಪ್ರಾಜೆಕ್ಟ್ ರಿಸರ್ಚ್ ಸೈಂಟಿಸ್ಟ್ II: 01: 40 ವರ್ಷ (ಗರಿಷ್ಠ)
ಪ್ರಾಜೆಕ್ಟ್ ರಿಸರ್ಚ್ ಅಸೋಸಿಯೇಟ್ III: 40 ವರ್ಷ (ಗರಿಷ್ಠ)
ಪ್ರಾಜೆಕ್ಟ್ ಕನ್ಸಲ್ಟೆಂಟ್ (Non-Medical): 70 ವರ್ಷ (ಗರಿಷ್ಠ)