ಬೆಂಗಳೂರು (ನ.12):  ಸರ್ಕಾರಿ ಸೇವಾ ನಿಯಮಗಳ ತಿದ್ದುಪಡಿಗೆ ಸರ್ಕಾರಿ  ನೌಕರರು ಆಕ್ಷೇಪ ಸಲ್ಲಿಸಿದ್ದಾರೆ.  

ಸರ್ಕಾರಿ ನೌಕರರ ಕುಟುಂಬಸ್ಥರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಿಲ್ಲ ಎಂಬ ನಿಯಮವನ್ನು ಕೈ ಬಿಡುವಂತೆ ಆಗ್ರಹಿಸಿದ್ದಾರೆ.

ಸರ್ಕಾರಿ ನೌಕರರ ಪತಿ, ಪತ್ನಿ ರಾಜಕೀಯ ಪಕ್ಷದ ಚುನಾವಣೆಯಲ್ಲಿ ಸ್ಪರ್ಧಿಸುವುದು ಸಂವಿಧಾನದ 19ನೇ  ಅನುಚ್ಚೇದದ ಮೂಲಭೂತ ಹಕ್ಕಾಗಿದೆ.  ಆದ್ದರಿಂದ ಈ ನಿಯಮ ಕೈ ಬಿಡಬೇಕೆಂದು ಸಂಘ ಮನವಿ ಮಾಡಿದ್ದಾರೆ. 

file:///C:/Users/hp/Downloads/%E0%B2%A8%E0%B2%A1%E0%B2%A4%E0%B3%86%20%E0%B2%A8%E0%B2%BF%E0%B2%AF%E0%B2%AE%E0%B2%BE%E0%B2%B5%E0%B2%B3%E0%B2%BF-%E0%B2%86%E0%B2%95%E0%B3%8D%E0%B2%B7%E0%B3%87%E0%B2%AA%E0%B2%A3%E0%B3%86-KSGEA.pdf

ಸರ್ಕಾರಿ ನೌಕರನು ತನ್ನ ಹತ್ತಿರದ ಸಂಬಂಧಿಗೆ  ಸರ್ಕಾರ ಸ್ವಾಮ್ಯದ ಕಂಪನಿಯಲ್ಲಿ ಉದ್ಯೋಗ ಕೊಡಿಸುವಂತಿಲ್ಲ ಎಂಬ ನಿಯಮವೂ ಸಂವಿಧಾನ ವಿರೋಧಿಯಾಗಿದೆ. ಸರ್ಕಾರಿ ನೌಕರರು ಕ್ರೀಡಾ ಸಂಸ್ಥೆಗಳಲ್ಲಿ ಅಧಿಕಾರ ಹೊಂದದಂತೆ, ಸಂಘ ಸಂಸ್ಥೆಗಳನ್ನು ಸ್ಥಾಪಿಸದಂತೆ ಹಾಕಿರುವ ನಿಯಮವನ್ನೂ ಕೈ ಬಿಡಬೇಕು ಎಂದು ಮನವಿ ಮಾಡಲಾಗಿದೆ. 

ಸರ್ಕಾರಿ ನೌಕರರು ತಮ್ಮ ಆಪ್ತರಿಂದ ಪಡೆಯುವ ಉಡುಗೊರೆಯ ಮೌಲ್ಯ ಒಂದು ತಿಂಗಳ ಸಂಬಳಕ್ಕಿಂತ ಹೆಚ್ಚಿರಬಾರದು ಎನ್ನುವುದನ್ನು ಕನಿಷ್ಠ ಎರಡು ತಿಂಗಳ ಸಂಬಳಕ್ಕಿಂತ ಹೆಚ್ಚಿರಬಾರದು ಎಂದು ಪರಿಷ್ಕರಿಸಬೇಕು. ಸರ್ಕಾರಿ ನೌಕರನು ಕುಟುಂಬದ ಆದಾಯದ ಮೂಲಕ ಜಮೀನು ಹಾಗೂ ಆಸ್ತಿ ಖರೀದಿಸುವಾಗ ಸರ್ಕಾರದ ಅನುಮತಿ ಕಡ್ಡಾಯ ಮಾಡಿರುವುದನ್ನು ತೆಗೆಯಬೇಕು.  ಸರ್ಕಾರಿ ನೌಕರ ಉನ್ನತ ಶಿಕ್ಷಣ ಪಡೆಯಲು ಸರ್ಕಾರದ ಅನುಮತಿ ಪಡೆಯುವುದನ್ನು ತೆಗೆದು ಹಾಕಬೇಕು ಎಂದು ಮನವಿ ಮಾಡಲಾಗಿದೆ.