ಬ್ಯಾಂಕ್ ಆಫ್ ಮಹಾರಾಷ್ಟ್ರದ ಜನರಲ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಮಹಾರಾಷ್ಟ್ರ ಖಾಲಿ ಇರುವ ಜನರಲ್ ಆಫೀಸರ್‌ ಹುದ್ದಗಳಿಗೆ ನೇಮಕಾತಿಯನ್ನು ಆರಂಭಿಸಿದೆ. ಐಬಿಪಿಎಸ್ ನಡೆಸಲಾಗುವ ಆನ್‌ಲೈನ್ ಎಕ್ಸಾಮ್ ಮುಖಾಂತರವೇ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ 48 ಸಾವಿರ ರೂಪಾಯಿವರೆಗೂ ವೇತನ ಸಿಗಲಿದೆ. ಕೂಡಲೇ ಅರ್ಜಿ ಸಲ್ಲಿಸಬಹುದು.

Bank of Maharashtra recruiting for its general officer posts

ಬ್ಯಾಂಕ್ ಆಫ್ ಮಹಾರಾಷ್ಟ್ರ, ಜನರಲ್ ಆಫೀಸರ್ ಹುದ್ದೆಗಳ ನೇಮಕಾತಿ ಸಂಬಂಧ ಅಧಿಸೂಚನೆ  ಬಿಡುಗಡೆ ಮಾಡಿದೆ. ಖಾಲಿ ಇರುವ 150 ಹುದ್ದೆಗಳಿಗೆ ಆಸಕ್ತ  ಅಭ್ಯರ್ಥಿಗಳು ಬ್ಯಾಂಕ್ ಆಫ್ ಮಹಾರಾಷ್ಟ್ರದ ಅಧಿಕೃತ ವೆಬ್‌ಸೈಟ್, bankofmaharashtra.in ಮೂಲಕ ಅರ್ಜಿ ಸಲ್ಲಿಸಬಹುದು . ಏಪ್ರಿಲ್ 6, 2021 ರೊಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.

ಭಾರತದಾದ್ಯಂತ ಜನರಲ್ ಆಫೀಸರ್ ಸ್ಕೇಲ್-2 ಗಾಗಿ ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲು ಬ್ಯಾಂಕ್ ಆಫ್ ಮಹಾರಾಷ್ಟ್ರ ಈ ನೇಮಕಾತಿ ಪ್ರಕ್ರಿಯೆ ಕೈಗೊಂಡಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ನೇಮಕಾತಿ-2021 ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಶಾಖಾ ವ್ಯವಸ್ಥಾಪಕ (ಬ್ರಾಂಚ್ ಮ್ಯಾನೇಜರ್)/ ಅಧಿಕಾರಿಯಾಗಿ ನೇಮಕ ಮಾಡಲಾಗುತ್ತದೆ.

ಪತ್ರ ಬರೆದು, ಚಿನ್ನದ ಪದಕ ಗೆದ್ದು, ಸ್ವಿಜರ್ಲೆಂಡ್‌ಗೆ ಹೋಗಿ!

ಬ್ಯಾಂಕ್ ಆಫ್ ಮಹಾರಾಷ್ಟ್ರ ನೇಮಕಾತಿಗೆ ಅರ್ಜಿ ಸಲ್ಲಿಸುವ ಮೊದಲು ಅರ್ಜಿದಾರರು ಅರ್ಹತಾ ಮಾನದಂಡಗಳು ಮತ್ತು ಇತರೆ ವಿವರಗಳನ್ನ ಗಮನಿಸಬೇಕು. ಬ್ಯಾಂಕ್ ಆಫ್ ಮಹಾರಾಷ್ಟ್ರ ಜನರಲ್ ಆಫೀಸರ್‌ ಹುದ್ದೆಗಳಿಗೆ ಸಂಬಂಧಿಸಿದಂತೆ 2021ರ ಮಾರ್ಚ್ 22ರಿಂದ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಅಭ್ಯರ್ಥಿಗಳು ಗಮನಿಸಬೇಕು.  ತ್ವರಿತವಾಗಿ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಆರಂಭಿಸಬೇಕು. ಹಾಗೆಯೇ, ಈ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು 2021ರ ಏಪ್ರಿಲ್ 6 ಕೊನೆಯ ದಿನವಾಗಿದೆ ಎಂಬುದನ್ನು ಅರ್ಹ ಅಭ್ಯರ್ಥಿಗಳು ಗಮನಿಸಬೇಕು.

ಐಬಿಪಿಎಸ್ ಮೂಲಕ ಆನ್‌ಲೈನ್ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು ಸಂದರ್ಶನದ ಸುತ್ತಿಗೆ ಕರೆಯಲಾಗುತ್ತದೆ. ಎಲ್ಲವೂ ಐಬಿಪಿಎಸ್‌ ಪ್ರಕ್ರಿಯೆ ಮೂಲಕವೇ ನಡೆಯುತ್ತದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ ಬ್ಯಾಂಕ್ ಖಾಲಿ ಇರುವ ಒಟ್ಟು 150 ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ. ಈ ಪೈಕಿ ಪರಿಶಿಷ್ಟ ಜಾತಿ 22, ಪರಿಶಿಷ್ಟ ಪಂಗ 11, ಹಿಂದುಳಿದವರ್ಗ 40, ಆರ್ಥಿಕವಾಗಿ ಹಿಂದುಳಿದ ವರ್ಗ 15 ಮತ್ತು ಯುಆರ್ ವರ್ಗಕ್ಕೆ 62 ಹುದ್ದೆಗಳನ್ನು ಮೀಸಲಿಡಲಾಗಿದೆ. ಆಯಾ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

BSF ಕಾನ್ಸ್‌ಟೇಬಲ್ ಹುದ್ದೆಗಳಿಗೆ 10ನೇ ತರಗತಿ ಪಾಸಾದವರಿಗೆ ಅವಕಾಶ

ಅರ್ಹತಾ ಮಾನದಂಡ ಏನು?: ಬ್ಯಾಂಕ್ ಆಫ್ ಮಹಾರಾಷ್ಟ್ರದ ಜನರಲ್ ಆಫೀಸರ್‌ಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು. ಇದರ ಜೊತೆಗೆ ಯಾವುದೇ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ನಲ್ಲಿ ಅಧಿಕಾರಿಯಾಗಿ ಮೂರು ವರ್ಷಗಳ ಕೆಲಸದ ಅನುಭವ ಹೊಂದಿರುವುದು ಕಡ್ಡಾಯವಾಗಿದೆ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು.
 

Bank of Maharashtra recruiting for its general officer posts

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಗೊಳಿಸಲಾಗಿದ್ದು, ಅಭ್ಯರ್ಥಿಗಳು 25ರಿಂದ 35ವರ್ಷದೊಳಗಿನವರಾಗಿರೇಬಕು.  ಹೆಚ್ಚಿನ ವಿವರ, ಮಾಹಿತಿಗಾಗಿ ಅಭ್ಯರ್ಥಿಗಳು ಬ್ಯಾಂಕ್ ಆಫ್ ಮಹಾರಾಷ್ಟ್ರದ ಅಧಿಕೃತ ಪುಟ bankofmaharashtra.in. ಗೆ ಭೇಟಿ ನೀಡಬಹುದು.

ಬ್ಯಾಂಕ್ ಆಫ್ ಮಹಾರಾಷ್ಟ್ರದ ಜನರಲ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ  48,170 ರೂ. ವೇತನ ಸಿಗಲಿದೆ.  ಇದರಲ್ಲಿ ಇತರೆ ಎಲ್ಲಾ ಭತ್ಯೆಗಳು ಅನ್ವಯವಾಗಲಿವೆ.

ಅರ್ಜಿ ಶುಲ್ಕ ವಿವರ: ಬ್ಯಾಂಕ್ ಆಫ್ ಮಹಾರಾಷ್ಟ್ರ ನೇಮಕಾತಿ 2021 ಗೆ ಅರ್ಜಿ ಶುಲ್ಕ ರೂ. ಕಾಯ್ದಿರಿಸದ ವರ್ಗಕ್ಕೆ 1180 ರೂಪಾಯಿ ಇರಲಿದೆ. ಇನ್ನು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು ಅರ್ಜಿ ಶುಲ್ಕ 118 ರೂಪಾಯಿ ಪಾವತಿಸಬೇಕು. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಬಿಇಸಿಐಎಲ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Latest Videos
Follow Us:
Download App:
  • android
  • ios